News

UAS ಬೆಂಗಳೂರು ಕೃಷಿ ವಿಜ್ಞಾನ ವಿವಿಯಲ್ಲಿ ನೇಮಕಾತಿ; ಅರ್ಜಿ ಸಲ್ಲಿಸಲು ಆಗಸ್ಟ್‌ 06 ಕೊನೆ ದಿನ!

15 July, 2022 3:40 PM IST By: Kalmesh T
Bangalore University of Agriculture Recruitment

ಬೆಂಗಳೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯವು ನೇಮಕಾತಿ ಪ್ರಕಟಣೆ ಹೊರಡಿಸಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಇದನ್ನೂ ಓದಿರಿ:  ಗ್ರಾಹಕರೆ ಗಮನಿಸಿ: ಜುಲೈ 18ರಿಂದ ಮತ್ತೇ ಹೆಚ್ಚಾಗಲಿವೆ ದಿನಬಳಕೆ ಸಾಮಗ್ರಿ ಬೆಲೆಗಳು! ಹೊಸ GST ನಿಯಮ ಏನು ಹೇಳುತ್ತದೆ?

ಪ್ರಸ್ತುತ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರಿನ ಕುಲಪತಿಗಳಾದ ಡಾ ಎಸ್ ರಾಜೇಂದ್ರ ಪ್ರಸಾದ್ ಇವರ ಸೇವಾವಧಿಯು ದಿನಾಂಕ 17-09-2022 ಕ್ಕೆ ಅಂತ್ಯಗೊಳ್ಳುವುದರಿಂದ, ಕೃಷಿ ವಿಜ್ಞಾನಗಳ ವಿವಿಯ ಕುಲಪತಿ ಹುದ್ದೆಗೆ ಈಗಲೇ ಅರ್ಜಿ ಆಹ್ವಾನಿಸಿದೆ.

ಈ ಹುದ್ದೆಯನ್ನು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳ ಅಧಿನಿಯಮ, 2009 ರ ಕಲಂ 27 ರಲ್ಲಿ ವಿಧಿಸಿರುವ ಷರತ್ತು ಹಾಗೂ ನಿಬಂಧನೆಗಳಡಿ ಭರ್ತಿ ಮಾಡಬೇಕಾಗಿದೆ.

ಆದುದರಿಂದ, ಕೃಷಿ ವಿಜ್ಞಾನಗಳ ವಿವಿ ಬೆಂಗಳೂರಿನಲ್ಲಿ ಕುಲಪತಿ ಹುದ್ದೆಗೆ ನೇಮಕ ಹೊಂದಲು ಬಯಸುವ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

Agriculture park: ಭಾರತದಲ್ಲಿ ಬರೋಬ್ಬರಿ 2 ಬಿಲಿಯನ್‌ ಡಾಲರ್‌ ಕೃಷಿ ಪಾರ್ಕ್ ಘೋಷಣೆ? ಏನೇನಿರಲಿದೆ ಗೊತ್ತೆ?

ಯಾರು ಅರ್ಜಿ ಸಲ್ಲಿಸಬಹುದು?

ಪ್ರಾಧ್ಯಾಪಕ ಅಥವಾ ತತ್ಸಮಾನ ವೃಂದದಲ್ಲಿ 10 ವರ್ಷ ಅಥವಾ ಅದಕ್ಕೂ ಮೇಲ್ಪಟ್ಟ ಅವಧಿಗೆ ಸೇವೆ ಸಲ್ಲಿಸಿದ ಅಭ್ಯರ್ಥಿಗಳು ತಮ್ಮ ಸಂಪೂರ್ಣ ಸೇವಾ ವಿವರಗಳುಳ್ಳ ಅರ್ಜಿಗಳನ್ನು, ವಿವಿ ವೆಬ್‌ಸೈಟ್‌ನಲ್ಲಿ ನೀಡಲಾದ 4 ಪುಟದ ನಮೂನೆಯಲ್ಲಿ ಅಗತ್ಯವಾದ ಹೆಚ್ಚಿನ ವಿವರ /ದಾಖಲೆಗಳ 5 ಪ್ರತಿಗಳನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಲು ತಿಳಿಸಲಾಗಿದೆ.

ಅರ್ಜಿ ಸಲ್ಲಿಸಬೇಕಾದ ವಿಳಾಸ : ಸರ್ಕಾರದ ಕಾರ್ಯದರ್ಶಿಗಳು, ಕೃಷಿ ಇಲಾಖೆ, ಬಹುಮಹಡಿ ಕಟ್ಟಡ, ಬೆಂಗಳೂರು-560 001.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಆಗಸ್ಟ್‌ 06, 2022 (ಇಂದಿನಿಂದ 30 ದಿನಗಳೊಳಗಾಗಿ)

ಇತರೆ ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್‌ www.agriculture.karnataka.gov.in  / www.uasbangalore.edu.in  ಗೆ ಭೇಟಿ ನೀಡಿ ನೋಟಿಫಿಕೇಶನ್‌ ಓದಬಹುದು.

ಜುಲೈ 31ರೊಳಗೆ 'ಬೆಳೆ ವಿಮಾ ಸಪ್ತಾಹ' ನೋಂದಣಿ ಮಾಡಿಸಿ ಮತ್ತು ನೇರವಾಗಿ ಖಾತೆಗೆ ಹಣ ಪಡೆಯಿರಿ!

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು

- ಆಧಾರ್ ಕಾರ್ಡ್‌

- ಶೈಕ್ಷಣಿಕ ಅರ್ಹತೆಗಳ ದಾಖಲೆಗಳು

- 10 ವರ್ಷ ಪ್ರಾಧ್ಯಾಪಕ ಹುದ್ದೆ / ತತ್ಸಮಾನ ವೃಂದದ ಹುದ್ದೆ ನಿರ್ವಹಿಸಿದ ದಾಖಲೆ

- ಅರ್ಜಿದಾರರ ವಿರುದ್ಧ ಇಲಾಖಾ ವಿಚಾರಣೆ / ಶಿಸ್ತು ಕ್ರಮ / ನ್ಯಾಯಾಂಗ ವಿಚಾರಣೆ / ಕ್ರಿಮಿನಲ್ ಪ್ರಕರಣ ಬಾಕಿ ಇರುವ / ಇಲ್ಲದಿರುವ ಬಗ್ಗೆ ದೃಢೀಕರಣದೊಂದಿಗೆ ಅರ್ಜಿಯನ್ನು ಸಲ್ಲಿಸತಕ್ಕದ್ದು.

ಆಯ್ಕೆ ಪ್ರಕ್ರಿಯೆ ಹೇಗೆ?

ಅರ್ಜಿ ಸಲ್ಲಿಸಿದವರ ಕಾರ್ಯಾನುಭವ, ಹಿರಿತನ, ಸಾಧನೆ, ಶೈಕ್ಷಣಿಕ ಅರ್ಹತೆ, ದಾಖಲೆಗಳ ಪರಿಶೀಲನೆ ಎಲ್ಲವನ್ನು ಪರಿಗಣಿಸಿ, ನಂತರ ಸಂದರ್ಶನ ನಡೆಸಿ ನೇಮಕ ಮಾಡಲಾಗುತ್ತದೆ.