News

ಬೆಂಗಳೂರು “ಕೃಷಿ ಮೇಳ” ಹಲವು ದಾಖಲೆ ಸೃಷ್ಟಿ ; ಮೇಳಕ್ಕೆ 17.35 ಲಕ್ಷ ಜನ ಭೇಟಿ!

07 November, 2022 11:02 AM IST By: Hitesh
Krishi Mela

ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಬೆಂಗಳೂರಿನ ಹೆಬ್ಬಾಳದ ಜಿಕೆವಿಕೆ ಆವರಣದಲ್ಲಿ ಆಯೋಜಿಸಿದ್ದ ನಾಲ್ಕು ದಿನಗಳ ಕೃಷಿ ಮೇಳಕ್ಕೆ ರೈತರು ಹಾಗೂ ಸಾರ್ವಜನಿಕರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ.

13.5 ಲಕ್ಷ ಸರ್ಕಾರಿ ನೌಕರರಿಗೆ ಸಿಹಿಸುದ್ದಿ: 7ನೇ ವೇತನ ಆಯೋಗ ರಚನೆಗೆ ಅಸ್ತು! 

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಈ ಬಾರಿ ನವೆಂಬರ್‌ ಮೂರರಿಂದ ನವೆಂಬರ್‌ ನಾಲ್ಕರವರೆಗೆ ನಡೆದ ಮೇಳಕ್ಕೆ ಬರೋಬ್ಬರಿ 17.35 ಲಕ್ಷ ಜನ ಸಾಕ್ಷಿಯಾಗಿದ್ದಾರೆ.  

ಈ ಪ್ರಮಾಣದಲ್ಲಿ ಜನ ಮೇಳಕ್ಕೆ ಭೇಟಿ ನೀಡಿರುವುದು ಹೊಸ ದಾಖಲೆಯನ್ನೇ ಸೃಷ್ಟಿಸಿದೆ. ಮೇಳದ ನಾಲ್ಕು ದಿನ ಒಟ್ಟಾರೆ  17.35 ಲಕ್ಷ ಜನ ಭೇಟಿ ನೀಡಿದ್ದು, 9.01 ಕೋಟಿ ವಹಿವಾಟು ಆಗಿದೆ.  

ಇದನ್ನೂ ಓದಿರಿ: ತಿರುಪತಿ ತಿರುಮಲದಲ್ಲಿರುವ ಆಸ್ತಿ ಮೌಲ್ಯ ಐದು ಸಾವಿರ ಕೋಟಿ! 10.25 ಟನ್‌ ಬಂಗಾರ, ಒಟ್ಟಾರೆ ಆಸ್ತಿ ಎಷ್ಟು ಗೊತ್ತೆ?   

ಮೇಳಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ರೈತರು, ಕೃಷಿಯಲ್ಲಿ ಆಸಕ್ತಿ ಇರುವವರು, ಕೃಷಿ ವಿದ್ಯಾರ್ಥಿಗಳು ಸೇರಿದಂತೆ ಹಲವರು ಬಂದಿದ್ದರು.

ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಕೃಷಿ ಮೇಳದಲ್ಲಿ ಕೃಷಿಯಲ್ಲಿ ಸಾಧನೆ ಮಾಡಿದ ವಿವಿಧ ಜಿಲ್ಲೆಯ ಸಾಧಕರನ್ನು ಸನ್ಮಾನಿಸಲಾಯಿತು.  

ಕೃಷಿ ಮೇಳದ ಮೊದಲ ದಿನವಾದ ನವೆಂಬರ್‌ ಮೂರರ ಗುರುವಾರ 1.60 ಲಕ್ಷ ಜನ ಭೇಟಿ ನೀಡಿದ್ದು, .1.12 ಕೋಟಿ ವಹಿವಾಟು ನಡೆದಿತ್ತು.

ರೈತರ ಖಾತೆಗೆ ನೇರವಾಗಿ ಡೀಸೆಲ್‌ ಸಬ್ಸಿಡಿ ಪಾವತಿ; ದಾಖಲೆಯೂ ಬೇಕಿಲ್ಲ: ಬಿ.ಸಿ ಪಾಟೀಲ್ 

ಶುಕ್ರವಾರ 2.45 ಲಕ್ಷ ಜನ ಭೇಟಿ ನೀಡಿದ್ದು .2.10 ಕೋಟಿ, ಮೂರನೇ ದಿನವಾದ ಶನಿವಾರ ಕೃಷಿ ಮೇಳದಲ್ಲಿ ಇದೇ ಮೊದಲ ಬಾರಿಗೆ ದಾಖಲೆಯ 7.16 ಲಕ್ಷ ಜನ ಭೇಟಿ ನೀಡಿದ್ದು, .2.85 ಕೋಟಿ ವಹಿವಾಟು ನಡೆದಿತ್ತು.

ಭಾನುವಾರವೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಭಾಗವಹಿಸುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಭಾನುವಾರ   6.14 ಲಕ್ಷ ಜನ ಭೇಟಿ ನೀಡಿದ್ದು ಒಟ್ಟು ವಹಿವಾಟು 2.94 ಕೋಟಿ ರುಪಾಯಿ ಆಗಿದೆ.

ಕೃಷಿ ವಿವಿ ನೀಡಿದ ರಿಯಾಯಿತಿ ದರದ ಮುದ್ದೆ ಊಟವನ್ನು 4 ದಿನದಲ್ಲಿ 43,500 ಜನ ಸವಿದಿದ್ದಾರೆ ಎಂದು ಕೃಷಿ ವಿವಿ ತಿಳಿಸಿದೆ.

ಕಬ್ಬು ಬೆಳೆ ಬೆಳೆಯಲು ಇರುವ ಉತ್ತಮ ತಳಿಗಳ ಬಗ್ಗೆ ನಿಮಗೆಷ್ಟು ಗೊತ್ತು?   

Krishi Mela

ಕೃಷಿ ಯಂತ್ರೋಪಕರಣ, ಸಾವಯವ ಮತ್ತು ಸಿರಿಧಾನ್ಯದಿಂದ ತಯಾರಿಸಿದ ತಿನಿಸು, ಬೇಕರಿ ಪದಾರ್ಥ, ಗೃಹೋಪಯೋಗಿ ವಸ್ತುಗಳು, ಕಳೆ ನಾಶಕ, ಅಲಂಕಾರಿಕ ವಸ್ತುಗಳು ಹೆಚ್ಚು ಮಾರಾಟವಾಗಿವೆ.

ದುಬಾರಿ ಬೆಲೆಯ ಕುರಿ,  ಕೋಳಿ, ಆಡು, ಅಲಂಕಾರಿಕ ಮೀನುಗಳು, ತಾಂತ್ರಿಕ ಆವಿಷ್ಕಾರಗಳು, ಕೃಷಿ ಇಲಾಖೆ ಹೊರತಂದ ಹೊಸ ತಳಿಗಳು ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು.

ಸಾಲ ಪಾವತಿಸದಿದ್ದರೂ ರೈತರ ಆಸ್ತಿ ಜಪ್ತಿ ಮಾಡದಂತೆ ಕಾನೂನು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  

Krishi Mela

ದಾಖಲೆಯ ಜನ ಭೇಟಿ!
ಈ ಬಾರಿ ಕೃಷಿ ಮೇಳಕ್ಕೆ ದಾಖಲೆಯ ಸಂಖ್ಯೆಯಲ್ಲಿ ಜನ ಭೇಟಿ ನೀಡಿದ್ದಾರೆ. ಇದಕ್ಕೆ ಈ ಬಾರಿ ಮೇಳವನ್ನು ನಾಲ್ಕು ದಿನಗಳ ಕಾಲ ಆಯೋಜಿಸಿದ್ದು ಸಹ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. 

13.5 ಲಕ್ಷ ಸರ್ಕಾರಿ ನೌಕರರಿಗೆ ಸಿಹಿಸುದ್ದಿ: 7ನೇ ವೇತನ ಆಯೋಗ ರಚನೆಗೆ ಅಸ್ತು!

Krishi Mela

ಕಳೆದ ಐದು ವರ್ಷದಲ್ಲೇ ದಾಖಲೆಯ ಸಂಖ್ಯೆಯಲ್ಲಿ ಜನರು ಈ ಬಾರಿಯ ಕೃಷಿ ಮೇಳಕ್ಕೆ ಭೇಟಿ ನೀಡಿದ್ದಾರೆ.

2018-19ನೇ ಸಾಲಿನಲ್ಲಿ 13.10 ಲಕ್ಷ ಜನ, 2019-20 ರಲ್ಲಿ 14.50 ಲಕ್ಷ, 2020-21ರಲ್ಲಿ (ನಿರ್ದಿಷ್ಟ ಸಂಖ್ಯೆ), 2021-22ರಲ್ಲಿ 8.10 ಲಕ್ಷ ಜನ ಮೇಳಕ್ಕೆ ಭೇಟಿ ನೀಡಿದ್ದರು.

ಪ್ರಸಕ್ತ ವರ್ಷ ಮೇಳಕ್ಕೆ 17.35 ಲಕ್ಷ ಜನ ಭೇಟಿ ನೀಡಿದ್ದಾರೆ.  

Krishi Mela

ಆನ್‌ಲೈನ್‌ನಲ್ಲೂ ವೀಕ್ಷಣೆ!

ಈ ಬಾರಿ ಮೇಳವನ್ನು ಆನ್‌ಲೈನ್‌ನಲ್ಲೂ ನೋಡಲು ಅವಕಾಶ ಕಲ್ಪಿಸಲಾಗಿತ್ತು. ಬೆಂಗಳೂರು ಕೃಷಿ ವಿವಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಮೂಲಕವೂ ಲಕ್ಷಾಂತರ ಜನ ಈ ಬಾರಿ ಮೇಳವನ್ನು ಕಣ್ತುಂಬಿಕೊಂಡಿದ್ದಾರೆ.

ವಿವಿಯು ಮೇಳಕ್ಕೆ ಸಂಬಂಧಿಸಿದಂತೆ ಈ ಬಾರಿ ಸಾಕಷ್ಟು ಪ್ರಚಾರವನ್ನು ಮಾಡಿತ್ತು.

ಅಲ್ಲದೇ ಚಿತ್ರ ನಟ ವಿಜಯ್‌ ರಾಘವೇಂದ್ರ ಮತ್ತು ನಟಿ ಹರ್ಷಿಕಾ ಪೂಣಚ್ಚ ಅವರಿಂದ ಇದೇ ಮೊದಲ ಬಾರಿಗೆ ಕೃಷಿ ಮೇಳದ ಬಗ್ಗೆ ಅರಿವು ಮೂಡಿಸುವ ಪ್ರೋಮೊ ಬಿಡುಗಡೆಯನ್ನೂ ಮಾಡಲಾಗಿತ್ತು.   

 ಕೃಷಿ ವಿವಿ ವಿದ್ಯಾರ್ಥಿಗಳು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಮಾಹಿತಿ ನೀಡುವ ಪ್ರೋಮೊ ತಯಾರಿಸಿದ್ದರು.