News

ಬಂಡೂರು ಕುರಿ ಸಂರಕ್ಷಣೆ: ಕರ್ನಾಟಕದ ರೈತನಿಗೆ ರಾಷ್ಟ್ರೀಯ ಪ್ರಶಸ್ತಿಯ ಗರಿ!

26 December, 2022 3:28 PM IST By: Hitesh
Bandur Sheep Conservation: Karnataka Farmer Wins National Award!

ಬಂಡೂರು ಕುರಿಗಳನ್ನು ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವುದಕ್ಕಾಗಿ ಕರ್ನಾಟಕದ ಮೈಸೂರಿನ ಯುವ ರೈತ ಹಾಗೂ ಉದ್ಯಮಿ ಯು.ಕೆ. ಶ್ರೀನಿವಾಸ್ ಆಚಾರ್ಯ ಅವರಿಗೆ ರಾಷ್ಟ್ರೀಯ ಪ್ರಶಸ್ತಿಯ ಸಿಕ್ಕಿದೆ.  

ನರೇಗಾ: ಕರ್ನಾಟಕಕ್ಕೆ ಕನಿಷ್ಠ 127 ಕೋಟಿ ಮೊತ್ತ ಇನ್ನೂ ಬಾಕಿ! 

ಹರಿಯಾಣದ ಕರ್ನಾಲ್‌ನಲ್ಲಿ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) - ನ್ಯಾಷನಲ್ ಬ್ಯೂರೋ ಆಫ್ ಅನಿಮಲ್ ಜೆನೆಟಿಕ್ ರಿಸೋರ್ಸಸ್ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ತಳಿ ಸಂರಕ್ಷಣೆ ಪ್ರಶಸ್ತಿ ಕಾರ್ಯಕ್ರಮದಲ್ಲಿ ಮೈಸೂರಿ ಯಡಹಳ್ಳಿ ಗ್ರಾಮದ ಯಶೋಧವನ ಗೋಟ್ ಫಾರ್ಮ್‌ನ ಮಾಲೀಕ ಯು.ಕೆ. ಶ್ರೀನಿವಾಸ್ ಆಚಾರ್ಯ ಮೂರನೇ ಬಹುಮಾನಕ್ಕೆ ಪಾತ್ರರಾಗಿದ್ದಾರೆ. 

ಮದ್ಯವ್ಯಸನಿ ಅಧಿಕಾರಿಗಿಂತ ರಿಕ್ಷಾ ಚಾಲಕ ಉತ್ತಮ ವರ: ಕೇಂದ್ರ ಸಚಿವ ಹೀಗಂದಿದ್ದೇಕೆ ಗೊತ್ತೆ? 

ಡಿಸೆಂಬರ್ 23ರ ಕಿಸಾನ್ ದಿನದಂದು 15 ಸಾವಿರ ರೂಪಾಯಿ ನಗದು ಬಹುಮಾನ ಮತ್ತು ಪ್ರಮಾಣಪತ್ರದೊಂದಿಗೆ ಪ್ರಶಸ್ತಿಯನ್ನು ಸ್ವೀಕರಿಸಿದರು. ಸ್ಥಳೀಯ ಬಂಡೂರು ಕುರಿಗಳ ಸಂರಕ್ಷಣೆಗಾಗಿ ವೈಯಕ್ತಿಕ ವಿಭಾಗದಲ್ಲಿ ಅವರಿಗೆ ಪ್ರಶಸ್ತಿ ಸಂದಿದೆ.  

ರಾಜ್ಯದಲ್ಲಿ ಮೈಕೊರೆವ ಚಳಿ, ಬೆಂಗಳೂರು ಸೇರಿ ವಿವಿಧೆಡೆ ಮಳೆ! 

ಮಳವಳ್ಳಿ ತಾಲ್ಲೂಕಿನ ಬಂಡೂರು ಗ್ರಾಮದ ಬಂಡೂರು ಕುರಿ ಮಾಂಸದ ಪ್ರಮುಖ ಬ್ರಾಂಡ್ ಆಗಿ ಪ್ರಸಿದ್ಧಿ ಗಳಿಸಿದೆ. ಉಣ್ಣೆ ಮತ್ತು ಮಾಂಸಕ್ಕಾಗಿ ಜನಪ್ರಿಯವಾಗಿರುವ ಬಂಡೂರಿನಲ್ಲಿ ಕುಬ್ಜ ಕುರಿಗಳನ್ನು ಪ್ರತ್ಯೇಕವಾಗಿ ಸಾಕಲಾಗುತ್ತದೆ ಎಂದು ಯು.ಕೆ ಶ್ರೀನಿವಾಸ ಆಚಾರ್ಯ ಅವರು ತಿಳಿಸಿದ್ದಾರೆ.

Bandur Sheep Conservation: Karnataka Farmer Wins National Award!

ಬಂಡೂರು ಕುರಿ ಸಂರಕ್ಷಣೆಯ ಬಗ್ಗೆ ಅವರು ಹೇಳುವುದು ಹೀಗೆ.. ನಾನು ಮೈಸೂರು ಭಾಗದ ರೈತರಿಗೆ ವಿತರಿಸಲು 85 ತಳಿ ಕುರಿಗಳೊಂದಿಗೆ ಉದ್ಯಮವನ್ನು ಶುರುಮಾಡಿದೆ.  ಅದೀಗ 400ಕ್ಕೂ ಹೆಚ್ಚು ಶುದ್ಧ ಬಂಡೂರು ತಳಿಯ ಕುರಿಗಳಾಗಿವೆ. 2012ರಲ್ಲಿ 2,500 ಕುರಿಗಳಿದ್ದು, ಆಯ್ದ ತಳಿ ಮತ್ತು ತಳಿಗಳ ಉನ್ನತೀಕರಣದಿಂದಾಗಿ ಈಗ ಸುಮಾರು 25 ಸಾವಿರ ಕುರಿಗಳನ್ನು ಹೊಂದಿದ್ದೇವೆ. 50 ಎಕರೆ ಸಾವಯವ ಕೃಷಿ ಭೂಮಿಯಲ್ಲಿ ಹರಡಿಕೊಂಡಿರುವ ಅವರ ಫಾರ್ಮ್ ಅನ್ನು 2012 ರಲ್ಲಿ ಪ್ರಾರಂಭಿಸಲಾಯಿತು ಎಂದಿದ್ದಾರೆ. 

ಯುವಕರಿಗೆ ಪ್ರತಿ ತಿಂಗಳು 10 ಸಾವಿರ ಉದ್ಯೋಗ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  

Bandur Sheep Conservation: Karnataka Farmer Wins National Award!

ಮೇಕೆಗಳು ಮತ್ತು ಇತರ ಜಾನುವಾರುಗಳ ಉತ್ತಮ ಗುಣಮಟ್ಟದ ತಳಿಗಳನ್ನು ಸಾಕುತ್ತಿದ್ದೇವೆ. ಮೇಕೆ ಹಾಲು, ತುಪ್ಪ ಮತ್ತಿತರ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತದೆ. ಸರಿಯಾದ ವಿಧಾನ ಮತ್ತು ನಿರ್ವಹಣೆಯೊಂದಿಗೆ ಮೇಕೆ ಸಾಕಣೆಯು ವಾಣಿಜ್ಯಿಕವಾಗಿ ಕಾರ್ಯಸಾಧ್ಯ ಮತ್ತು ಲಾಭದಾಯಕ ವ್ಯವಹಾರವಾಗಿದೆ. ನೈಜೀರಿಯಾ, ಭೂತಾನ್ ಮತ್ತು ಶ್ರೀಲಂಕಾ ಸೇರಿದಂತೆ ವಿವಿಧ ರಾಜ್ಯಗಳು ಮತ್ತು ವಿದೇಶಗಳಿಂದ 25 ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೆ ಮೇಕೆ ಸಾಕಣೆ ಕುರಿತು ತರಬೇತಿ ನೀಡಲಾಗಿದೆ ಎಂದು ವಿವರಿಸಿದರು.

 PM Kisan| ಪಿ.ಎಂ ಕಿಸಾನ್‌ 13ನೇ ಕಂತು: ಹೊಸ ವರ್ಷದ ಮೊದಲು ಬಿಡುಗಡೆ