ಸದ್ಯ ರಾಜ್ಯದಲ್ಲಿ ಮುಂಗಾರು ಹಂಗಾಮಿನ ಚಟುವಟಿಕೆಗಳು ನಡೆಯುತ್ತಿವೆ. ಕೃಷಿ ಆರಂಭದ ಹೊಸ್ತಿಲಲ್ಲಿರುವಾಗಲೇ ರೈತರೊಬ್ಬರ ಬಾಳೆ ತೋಟ ಬಿರುಗಾಳಿಗೆ ಸಿಲುಕಿ ನಾಶವಾಗಿದೆ.
ರಭಸವಾಗಿ ಬೀಸಿದ ಬೀರುಗಾಳಿ-ಮಳೆಗೆ ಹೊಲವೊಂದರಲ್ಲಿ ಒಂದುವರೆ ಎಕರೆಯಷ್ಟು ಬಾಳೆ ಸಸಿ ಮಣ್ಣು ಪಾಲಾಗಿವೆ. ಇದಿರಿಂದ ರೈತನ ಪರಿಸ್ಥಿತಿ ತತ್ತರಿಸಿಹೋಗಿದೆ.
ಈ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ಬಮ್ಮಿಗಟ್ಟಿ ಗ್ರಾಮದಲ್ಲಿ ನಡೆದಿದೆ.
ಬಮ್ಮಿಗಟ್ಟಿ ಗ್ರಾಮದ ಅಪ್ಪಯ್ಯ ಪಕ್ಕಿರಯ್ಯ ವಸ್ತ್ರದ ಎಂಬುವ ರೈತ, ತಮ್ಮ ಒಂದುವರೆ ಎಕರೆಯಲ್ಲಿ ಕಳೆದ ಸಾಲಿನ ಜೂನ ತಿಂಗಳಲ್ಲಿ 1 ಲಕ್ಷ ರೂಪಾಯಿ ಖರ್ಚು ಮಾಡಿ, ಸುಮಾರು 800 ಬಾಳೆ ಸಸಿಗಳನ್ನ ನೆಟ್ಟಿದ್ದರು.
ಇನ್ನೇನು ಕೆಲವೇ ದಿನಗಳಲ್ಲಿ ಕಟಾವಿಗೆ ಬರಬೇಕಿದ್ದ ಬಾಳೆ ಬೆಳೆಯು ಮೊನ್ನೆ ರಾತ್ರಿ ಬೀಸಿದ ಬಿರುಗಾಳಿ-ಮಳೆಗೆ 500 ಕ್ಕೂ ಹೆಚ್ಚು ಬಾಳೆ ಗಿಡಗಳು ನೆಲಕೆ ಬಿದ್ದು, ರೈತನ ಕೈಗೆ ಬಂದ ತುತ್ತು ಬಾಯಿಗೆ ಬರುವ ಮುನ್ನವೇ ಬಿರುಗಾಳಿ ಕಿತ್ತುಕೊಂಡಂತಾಗಿದೆ.
ಸದ್ಯದ ಮಾರುಕಟ್ಟೆಯಲ್ಲಿ 1 ಕ್ವಿಂಟಲ್ ಬಾಳೆಗೆ 1830 ರಿಂದ 3500 ವರೆಗೂ ಬೆಲೆಯಿದ್ದು ತಾಲೂಕಿನಲ್ಲಿ ಒಂದು ಕೆಜಿ ಬಾಳೆಹಣ್ಣಿಗೆ ಸುಮಾರು 35 ರಿಂದ 45 ರೂ ವರೆಗೆ ಬೆಲೆ ಇದೆ.
ಬಮ್ಮಿಗಟ್ಟಿ ಗ್ರಾಮದ ಅಪ್ಪಯ್ಯ ಎಂಬುವ ರೈತ ತನ್ನ ಹೊಲದಲ್ಲಿನ ಒಂದು ಬಾಳೆ ಗಿಡಕ್ಕೆ ಸುಮಾರು 1 ಸಾವಿರದಷ್ಟು ಆದಯಾ ಬರು ನೀರಿಕ್ಷೆಯಿದ್ದು 500ಕ್ಕೂ ಹೆಚ್ಚು ಬಾಳೆಗಿಡಗಳು ನೆಲಸಮವಾಗಿದ್ದರಿಂದ ಸುಮಾರು 5 ಲಕ್ಷದಷ್ಟು ಆದಾಯ ಹಾಳಾಗಿ ಹೋಗಿದೆ ಎಂದು ಕಣ್ಣಿರು ಹಾಕಿದ್ದಾರೆ.
ಆದ್ದರಿಂದ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ರೈತನ ಬದುಕಿಗೆ ಸಹಾಯ ಹಸ್ತ ಚಾಚುವಲ್ಲಿ ಮುಂದಾಗಬೇಕಿದೆ.
“ಕೇವಲ ಒಂದೆ ವಾರದಲ್ಲಿ ಬಾಳೆ ಕಟಾವಿಗೆ ಬರುವಷ್ಟು ಬೆಳವಣಿಗೆ ಕಂಡುಕೊಂಡಿದ್ದವು. ಸಾಲ ಸೂಲ ಮಾಡಿ ಸಸಿ ತಂದು ಅದಕ್ಕೆ ಸಾಕಷ್ಟು ಗೊಬ್ಬರಗಳನ್ನ ಹಾಕಿ ವರ್ಷವಿಡೀ ಉತ್ತಮವಾಗಿ ಬೆಳೆಯನ್ನ ಬೆಳೆಸಿದ್ದೆ.
ಆದರೆ ಸೋಮವಾರ ರಾತ್ರಿ ಅತಿಯಾಗಿ ಬೀಸಿದ ಬೀರುಗಾಳಿಯಿಂದ ಒಂದೇ ದಿನದಲ್ಲಿ ಬಾಳೆ ಗಿಡಗಳು ಬಿದ್ದು ನಾಶವಾಗಿದೆ ಎನ್ನುತ್ತಾರೆ ರೈತ ಅಪ್ಪಯ್ಯ ವಸ್ತ್ರದ.
“ಶೇ. 33 ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ರೈತರ ಹೊಲದಲ್ಲಿನ ಬೆಳೆಗಳು ನಾಶವಾದರೆ. ಎಸ್.ಡಿ.ಆರ್.ಎಫ್ ಹಾಗೂ ಎನ್.ಡಿ.ಆರ್.ಎಫ್ ನಿರ್ದೇಶನದನ್ವಯ ಜಿ.ಪಿ.ಎಸ್ ಮಾಡಿ ಅವರಿಗೆ ಪರಿಹಾರ ಒದಗಿಸಲಾಗುವುದು ಎಂದು ತಹಶೀಲ್ದಾರ್ ಯಲ್ಲಪ್ಪ ಗೋಣೆಣ್ಣವರ ತಿಳಿಸಿದರು.