News

ವಿಮಾನ ನಿಲ್ದಾಣಗಳ ಸುತ್ತ 5ಜಿ ಸೇವೆಗೆ ನಿಷೇಧ!

01 December, 2022 2:42 PM IST By: Hitesh
Ban on 5G service around airports!

ಕೃಷಿ ಹಾಗೂ ಪ್ರಮುಖ ಸುದ್ದಿಗಳನ್ನು ರೈತರಿಗೆ ತಲುಪಿಸುವ ಉದ್ದೇಶದಿಂದ ಕೃಷಿ ಜಾಗರಣ ಅಗ್ರಿ ನ್ಯೂಸ್‌ ಪರಿಚಯಿಸಿದೆ. ಇಂದಿನ ಪ್ರಮುಖ ಸುದ್ದಿಗಳು ಈ ರೀತಿ ಇವೆ.

1. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ರಾಜ್ಯದಲ್ಲಿ ಈಚೆಗೆ ಅಕಾಲಿಕ ಮಳೆ ಸುರಿದಿತ್ತು.

ಇದು ರಾಜ್ಯದ ಹಲವು ಬೆಳೆಗಳ ಮೇಲೆ ಪರಿಣಾಮ ಬೀರಿತ್ತು. ಇದೀಗ ಟೊಮೆಟೊ ಗುಣಮಟ್ಟದ ಕೊರತೆಯಿಂದ ಬೆಲೆ ಕುಸಿತವಾಗಿದೆ.

ಕೋಲಾರ, ಚಿಂತಾಮಣಿ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಂತರ

ಪ್ರದೇಶಗಳಲ್ಲಿ ಟೊಮೆಟೊ ಬೆಳೆದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಟೊಮೆಟೊ ಆವಕವಾಗುತ್ತಿದೆ.

ಆದರೆ, ಮಳೆಯಿಂದ ಫಸಲು ಗುಣಮಟ್ಟ ಕಳೆದುಕೊಂಡಿದೆ. ಅಲ್ಲದೇ ಈಚೆಗೆ ಸುರಿದ ಮಳೆಯಿಂದಾಗಿ

ಟೊಮೆಟೊಗೆ ಅಂಗಮಾರಿ ರೋಗ ಕಾಣಿಸಿಕೊಂಡಿತ್ತು. ಈ ಎಲ್ಲ ಕಾರಣಗಳಿಂದ ಟೊಮೆಟೊ ಬೆಲೆ ಕುಸಿದಿದ್ದು, ರೈತರು ಸಂಕಷ್ಟ ಎದುರಿಸುವಂತಾಗಿದೆ. 
------ 

Heavy Rain| ಕರಾವಳಿ ಸೇರಿದಂತೆ ರಾಜ್ಯದ ವಿವಿಧೆಡೆ ಮಳೆ!    

Fall in tomato prices in the market; The farmer is sad!

2. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ನೂತನವಾಗಿ ಆರಂಭಿಸಲಿರುವ ಮಲ್ಟಿ ಆ್ಯಕ್ಸೆಲ್ ಸ್ಲೀಪರ್

ಹಾಗೂ ವಿದ್ಯುತ್ ಚಾಲಿತ ವಾಹನಗಳಿಗೆ ಸಾರ್ವಜನಿಕರಿಂದ ಬ್ರಾಂಡ್ ಹೆಸರು ಟ್ಯಾಗ್‌ಲೈನ್ ಹಾಗೂ

ಗ್ರಾಫಿಕ್ಸ್‌ ವಿನ್ಯಾಸವನ್ನು ಆಹ್ವಾನಿಸಿದೆ. ಪ್ರತಿ ಮಾದರಿಯ ವಾಹನಗಳಿಗೆ ಉತ್ತಮ ಬ್ರಾಂಡ್ ಹೆಸರನ್ನು ಸೂಚಿಸುವ

ವಿಜೇತರಿಗೆ ₹10 ಸಾವಿರ ನಗದು ಬಹುಮಾನ, ಉತ್ತಮ ಗ್ರಾಫಿಕ್ಸ್ ನೀಡಿದವರಿಗೆ ತಲಾ ₹ 25 ಸಾವಿರ ಬಹುಮಾನ ನೀಡುವುದಾಗಿ ಸಂಸ್ಥೆ ಘೋಷಿಸಿದೆ.

ಹೆಸರನ್ನು ಸೂಚಿಸಲು ಕಡೆಯ ದಿನಾಂಕ ಡಿಸೆಂಬರ್ 5 ಎಂದು ಪ್ರಕಟಣೆ ತಿಳಿಸಿದೆ.
Heavy Rain ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ರಾಜ್ಯದ ವಿವಿಧೆಡೆ ಮೂರು ದಿನ ಮಳೆ  

3.ಪುದುಚೇರಿಯ ಪ್ರಸಿದ್ಧ ದೇವಾಲಯ ಮನಕುಲ ವಿನಾಯಕ ದೇವಾಲಯಕ್ಕೆ ಸೇರಿದ್ದ ಆನೆ ಲಕ್ಷ್ಮಿ ವಿಹರಿಸುತ್ತಿದ್ದಾಗ ಹಠಾತ್ ಕುಸಿದು, ಮೃತಪಟ್ಟಿದೆ.

ತಪಾಸಣೆ ವೇಳೆ ಆನೆಗೆ ಹೃದಯಾಘಾತವಾಗಿರುವುದು ಖಚಿತವಾಗಿದೆ.

ಲಕ್ಷ್ಮಿ ಎಂಬ ಹೆಸರಿನ ಆನೆಯನ್ನು ಕೈಗಾರಿಕೋದ್ಯಮಿಯೊಬ್ಬರು 90ರ ದಶಕಲ್ಲಿ ದೇವಸ್ಥಾನಕ್ಕೆ ದಾನ ಮಾಡಿದ್ದರು.

ಈ ಆನೆಯ ಆಶೀರ್ವಾದವನ್ನು ಪಡೆಯಲು ವಿದೇಶಿ ಭಕ್ತರು ಕೂಡ ಬರುತ್ತಿದ್ದರು.

ಇಲ್ಲಿನ  ಸರ್ಕಾರಿ ಕಾಲೇಜೊಂದರ ಸಮೀಪದ ರಸ್ತೆಯಲ್ಲಿ ಆನೆ ಕುಸಿದು ಮೃತಪಟ್ಟಿತ್ತು. ಆನೆಯ ಕಳೇಬರವನ್ನು ಶಾಸ್ತ್ರೋಕ್ತವಾಗಿ ಸಂಸ್ಕಾರ ಮಾಡಲಾಯಿತು.  

ಜನವರಿ ಮಧ್ಯಂತರದಲ್ಲಿ ವಿಶ್ವ ಪ್ರಸಿದ್ಧ ಹಂಪಿ ಉತ್ಸವ

ಇನ್ನು ಮುಂದೆ ಮೆಟ್ರೋ ಪ್ರಯಾಣಿಕರು ಹಲವು ಸಾರಿಗೆ ಸೇವೆಯನ್ನು ಒಂದೇ ಸೂರಿನಡಿ ಪಡೆಯುವ ಕಾಲ ಸಮೀಪಿಸಿದೆ.

ಮೆಟ್ರೋ ಪ್ರಯಾಣಿಕರು ತಮ್ಮ ಫೋನ್‌ಗಳಲ್ಲಿ ಮೆಟ್ರೋ ಟಿಕೆಟ್‌ನೊಂದಿಗೆ ಆಟೋ ಅಥವಾ ಕ್ಯಾಬ್ ಅನ್ನು ಬುಕ್ ಮಾಡಲು ಆ್ಯಪ್‌ ಪರಿಚಯಿಸಲು ಉದ್ದೇಶಿಸಲಾಗಿದೆ.

ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತವು ಆ್ಯಪ್ ಅಭಿವೃದ್ಧಿಪಡಿಸಲು ಎರಡು ಖಾಸಗಿ ಕಂಪನಿಗಳ ಸೇವೆಗಳನ್ನು ಕೋರಿದೆ.

ಜನರ ಅವಶ್ಯಕತೆಗಳನ್ನು ಅವರಿಗೆ ವಿವರಿಸಲಾಗಿದೆ. ಆ್ಯಪ್ ಅಭಿವೃದ್ಧಿ ಪ್ರಗತಿಯಲ್ಲಿದ್ದು, ಸಂಪೂರ್ಣವಾಗಿ ಆ್ಯಪ್ ಅಭಿವೃದ್ಧಿಪಡಿಸಲು

ಕೆಲವು ತಿಂಗಳುಗಳ ಕಾಲ ಕಾಲಾವಕಾಶ ಕೇಳಿದ್ದಾರೆ. ಆ್ಯಪ್ ಒಮ್ಮೆ ಅಭಿವೃದ್ಧಿಯಾದರೆ,

ಶೀಘ್ರದಲ್ಲಿಯೇ ಪ್ರಯಾಣಿಕರಿಗೆ ಲಭ್ಯವಾಗಲಿದೆ ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ತಿಳಿಸಿದ್ದಾರೆ.

------
5.ದೇಶದಲ್ಲಿ ಟೆಲಿಕಾಂ ಕಂಪನಿಗಳು ಯಾವುದೇ ವಿಮಾನ ನಿಲ್ದಾಣ ಸುತ್ತಲಿನ 2.1 ಕಿಲೋಮೀಟರ್ ವ್ಯಾಪ್ತಿಯಲ್ಲಿ 5ಜಿ ನೆಟ್ವರ್ಕ್ ಸೇವೆ ಕಲ್ಪಿಸಬಾರದು

ಎಂದು ಟೆಲಿಕಾಂ ಇಲಾಖೆ ಆದೇಶಿಸಿದೆ. ವಿಮಾನ ನಿಲ್ದಾಣದ ಸುತ್ತಮುತ್ತ 5ಜಿ ಬ್ಯಾಂಡ್‌ಗಳನ್ನು

ನೀಡುವುದರಿಂದ 5ಜಿ ತರಂಗಾಂತರಗಳು ಎರ್‌ಕ್ರಾಫ್ಟ್‌ ರೆಡಿಯೊ ತರಂಗಗಳ ಕೆಲಸಕ್ಕೆ ಸಮಸ್ಯೆ ಆಗಲಿದೆ.

ದರಿಂದ ವಿಮಾನ ಲ್ಯಾಂಡಿಂಗ್ ಸಂದರ್ಭದಲ್ಲಿ ಅಪಾಯ ಎದುರಾಗುವ ಸಾಧ್ಯತೆ ಇದೆ ಎಂದು ಇಲಾಖೆ ಎಲ್ಲ ಟೆಲಿಕಾಂ ಸಂಸ್ಥೆಗಳಿಗೆ ಪತ್ರ ಬರೆದಿದೆ.  

------
6. ಭಾರತ ಮತ್ತು ಅಮೆರಿಕ ಸೇನಾ ಪಡೆ ಜಂಟಿ ಸಮರಾಭ್ಯಾಸಕ್ಕೆ ಚೀನಾ ಆಕ್ಷೇಪ ವ್ಯಕ್ತಪಡಿಸಿದೆ.

ಈ ಬೆಳವಣಿಗೆಯು ನವದೆಹಲಿ ಮತ್ತು ಬೀಜಿಂಗ್ ನಡುವೆ ಉಭಯ ರಾಷ್ಟ್ರಗಳ ಗಡಿ ಸಮಸ್ಯೆ ಸಂಬಂಧ ನಡೆದಿರುವ ಒಪ್ಪಂದಗಳ ಆಶಯ

 ಉಲ್ಲಂಘಿಸುತ್ತದೆ ಎಂದು ಚೀನಾ ತಿಳಿಸಿದೆ. ಭಾರತ ಮತ್ತು ಅಮೆರಿಕಾ ಜಂಟಿ ಸೇನಾ ತಾಲೀಮು ಉತ್ತರಾಖಂಡದಿಂದ

ಸುಮಾರು 100 ಕಿ.ಮೀ ದೂರದಲ್ಲಿ ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ಆರಂಭವಾಗಿದೆ. ಎರಡು ವಾರಗಳ ಕಾಲ ಈ ತಾಲೀಮು ನಡೆಯಲಿದೆ.
-----
7. ರಾಜ್ಯದ ವಿವಿಧೆಡೆ ಸಾಧಾರಣ ಮಳೆ ಮುಂದುವರಿದಿದೆ. ಬುಧವಾರ ಸಿದ್ದಾಪುರದಲ್ಲಿ ಒಂದು ಸೆಂ.ಮೀ ಮಳೆ ಆಗಿರುವುದು ವರದಿ ಆಗಿದೆ.

ಉಳಿದಂತೆ ರಾಜ್ಯದ ಒಂದೆರಡು ಕಡೆಗಳಲ್ಲಿ ಮಳೆ ಆಗಿದೆ. ಗುರುವಾರ ಹಾಗೂ ಶುಕ್ರವಾರ ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ

ಒಂದೆರಡು ಕಡೆಗಳಲ್ಲಿ ಹಗುರ ಮಳೆ ಆಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
-----
8. ವಿಶ್ವ ಪ್ರಸಿದ್ಧ ಹಂಪಿ ಉತ್ಸವವನ್ನು 2023ರ ಜನವರಿ ಮಧ್ಯಂತರದಲ್ಲಿ ನಡೆಸಲು ವಿಜಯನಗರ ಜಿಲ್ಲಾಡಳಿತ ನಿರ್ಧರಿಸಿದೆ.

ಹಂಪಿ ಉತ್ಸವವನ್ನು ಆರಂಭದಲ್ಲಿ 2023ರ ಜನವರಿ 6ಕ್ಕೆ ನಡೆಸಲು ನಿರ್ಧರಿಸಲಾಗಿತ್ತು.

ಇದೀಗ ದಿನಾಂಕ ಬದಲಾಯಿಸಲಾಗುತ್ತಿದೆ. ಹಂಪಿ ಉತ್ಸವವು ರಾಜ್ಯ ಸರ್ಕಾರ ನಡೆಸುವ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದಾಗಿದ್ದು,

ಇದನ್ನು ಮಾಜಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಅವರು ಪರಿಚಯಿಸಿದ್ದರು.   

-----
9.  ಹಿಂಗಾರು ಹಂಗಾಮಿನ ಆರಂಭದಲ್ಲಿಯೇ ರೈತರಿಗೆ ಯೂರಿಯಾದ ಅಗತ್ಯ ಹೆಚ್ಚಿರುವುದರಿಂದ ರೈತರಿಗೆ ಸುಲಭವಾಗಿ ರಸಗೊಬ್ಬರ ಲಭ್ಯವಾಗುತ್ತಿಲ್ಲ.

ಹೀಗಾಗಿ, ಯೂರಿಯಾ ಸಬ್ಸಿಡಿ ಯೋಜನೆಯಲ್ಲಿ ಬದಲಾವಣೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಅರ್ಹ ರೈತರಿಗೆ ಯೂರಿಯಾ ಸಬ್ಸಿಡಿ ತಲುಪಲಿದ್ದು,

ಕಡಿಮೆ ದರದಲ್ಲಿ ರಸಗೊಬ್ಬರ ಸಿಗಲಿದೆ. ಕೇಂದ್ರ ಸರ್ಕಾರ ರೈತರಿಗೆ ಯೂರಿಯಾವನ್ನು ಸಬ್ಸಿಡಿ ಬೆಲೆಯಲ್ಲಿ 266 ರೂ.ಗೆ (45 ಕೆಜಿ) ನೀಡಲು ನಿರ್ಧರಿಸಿದೆ.

ಈ ಮೂಲಕ ಯೂರಿಯಾ ಸೊಸೈಟಿಯಿಂದ ರೈತರು ಒಂದು ಮೂಟೆ ಯೂರಿಯಾ ಖರೀದಿಸಿದರೆ 2700 ರೂಪಾಯಿ ಆಗಲಿದೆ.  

-----
10. ಸೀಡ್ ವರ್ಕ್ಸ್‌ಗೆ ಸಂಬಂಧಿಸಿದ ಪ್ರತಿಯೊಬ್ಬರಿಗೂ ಇದು ನಿಜವಾಗಿಯೂ ಹೆಮ್ಮೆಯ ಕ್ಷಣವಾಗಿದೆ.

ಹೊಸದಿಲ್ಲಿಯಲ್ಲಿ ನಡೆದ 2ನೇ ಸುಸ್ಥಿರ ಕೃಷಿ ಶೃಂಗಸಭೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸೀಡ್‌ವರ್ಕ್ಸ್ ಇಂಟರ್‌ನ್ಯಾಶನಲ್ ಪ್ರೈವೇಟ್ ಲಿಮಿಟೆಡ್ ಅತ್ಯುತ್ತಮ

ಸುಸ್ಥಿರ ಕೃಷಿ ಅಭಿವೃದ್ಧಿ ಯೋಜನೆಗಾಗಿ, ವಿಶೇಷವಾಗಿ ಮಣ್ಣು ಮತ್ತು ಜಲ ಸಂರಕ್ಷಣೆಯ ಕ್ಷೇತ್ರಗಳಲ್ಲಿ

ಸತತವಾಗಿ ಎರಡನೇ ಬಾರಿಗೆ ಎರಡು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.

ಕೃಷಿ ಮತ್ತು ರೈತರ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಸೀಡ್ ವರ್ಕ್ಸ್ ಇಂಟರ್ ನ್ಯಾಷನಲ್ ಪ್ರೈ.ಲಿ.ನ ಸಪ್ಲೈ ಚೈನ್ ಮುಖ್ಯಸ್ಥ ರಾಜಾ ವಡ್ಲಮನಿ ಅವರು ಪ್ರಶಸ್ತಿ ಸ್ವೀಕರಿಸಿದರು.   
-----
11. ಕಬ್ಬು ಬೆಳೆಗಾರ ರೈತರ ಧರಣಿ 10ನೇ ದಿನಕ್ಕೆ ಕಾಲಿಟ್ಟಿದೆ.

ಕಳೆದ 10 ದಿನಗಳಿಂದ ಕಬ್ಬು ಬೆಳೆಗಾರರು ನಿರಂತರವಾಗಿ ಕಬ್ಬಿಗೆ ಸಲಹಾ ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ರೈತರು ಮಂಗಳವಾರ ಅರೆಬೆತ್ತಲೆ ಪ್ರತಿಭಟನೆ ನಡೆಸಿದರು. ಈ ವೇಳೆ ರೈತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. 

ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ಮಾತನಾಡಿ, ಸರ್ಕಾರ ನಿದ್ರೆ ಮಾಡುತ್ತಿರುವ ನಾಟಕ ಆಡಬಾರದು,

ಇಂತಹ ಸರ್ಕಾರಗಳನ್ನು ಎಚ್ಚರಿಸಲು ರೈತರ ಬಳಿ ಅಸ್ತ್ರಗಳಿವೆ, ಅದನ್ನು ಪ್ರಯೋಗ ಮಾಡಿದರೆ ಸರ್ಕಾರಕ್ಕೆ ಗಂಡಾಂತರ ಖಚಿತ.  

ಉದ್ಯಮಿಗಳ ಮರ್ಜಿಯಲ್ಲಿ ಆಡಳಿತ ನಡೆಸುವುದು ಸರ್ಕಾರಕ್ಕೆ ಶೋಭೆ ತರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಕಬ್ಬು ಬೆಳೆಗಾರರ ಸಂಘ, ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ವತಿಯಿಂದ ಕಬ್ಬು ಬೆಳೆಗಾರ

ರೈತರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.   

-----
12. ಸಕ್ಕರೆ ಕಾರ್ಖಾನೆಯ ಮಾಲೀಕರೊಂದಿಗೆ ಈಗಾಗಲೇ ಕಬ್ಬಿನ ಬೆಲೆ ಹೆಚ್ಚಳ ಮಾಡುವುದಕ್ಕೆ ಸಂಬಂಧಿಸಿದಂತೆ ನಾಲ್ಕು ಸುತ್ತಿನ ಸಭೆಗಳನ್ನು ನಡೆಸಲಾಗಿದೆ.

ಸಕ್ಕರೆ ಕಾರ್ಖಾನೆ ಮಾಲೀಕರು ಸೂಕ್ತ ಬೆಲೆ ನೀಡದೆ ಇದ್ದರೆ, ಸರ್ಕಾರ ಮಧ್ಯ ಪ್ರವೇಶಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎಚ್ಚರಿಕೆ ನೀಡಿದ್ದಾರೆ.  

ಈ ಸಂಬಂಧ ಈಚೆಗೆ ಮೈಸೂರಿನಲ್ಲಿ ಮಾತನಾಡಿದ ಅವರು, ಕಬ್ಬಿಗೆ  ವೈಜ್ಞಾನಿಕವಾಗಿ ಏಕೆ ಬೆಲೆ ಏರಿಸಬೇಕೆಂಬ ಕಾರಣವನ್ನು

ಸಹ ವಿವರಿಸಲಾಗಿದೆ. ಈ ಸಂಬಂಧ ಸಕ್ಕರೆ ಕಾರ್ಖಾನೆಯ ಮಾಲೀಕರು ಕೆಲವು ದಿನಗಳ ಸಮಯ ಕೇಳಿದ್ದು,

ಆ ಸಮಯದೊಳಗೆ ಮಾಲೀಕರು ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ, ಸರ್ಕಾರ ಮಧ್ಯ ಪ್ರವೇಶಿಸಿ, ರೈತರಿಗೆ ಅನುಕೂಲ ಮಾಡಿಕೊಡಲಿದೆ.     
-----