News

ಜನರಿಗೆ ಕಹಿಸುದ್ದಿ: ಕೆಎಂಎಫ್‌ನಿಂದ “ಬಿಸಿ ತುಪ್ಪ”!

07 November, 2022 5:19 PM IST By: Hitesh
Ghee

ಇತ್ತೀಚಿನ ದಿನಗಳಲ್ಲಿ ಅಚ್ಚರಿಯ ರೀತಿಯಲ್ಲಿ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ನಂದಿನಿ ತುಪ್ಪದ ಬೆಲೆಯನ್ನು ಏರಿಕೆ ಮಾಡಿದ್ದು, ಜನರ ಜೇಬಿಗೆ ಕತ್ತರಿ ಬೀಳುತ್ತಿದೆ.  

ನವೆಂಬರ್‌ 8ಕ್ಕೆ ವಿವಿಧೆಡೆ ಪೂರ್ಣ ಚಂದ್ರಗ್ರಹಣ, ವಿಶೇಷತೆ ಗೊತ್ತೆ ?

ಕಳೆದ ಎರಡರಿಂದ ಮೂರು ತಿಂಗಳ ಅವಧಿಯಲ್ಲಿ ನಂದಿ ತುಪ್ಪದ ಬೆಲೆಯು ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದ್ದು, ಹಬ್ಬದ ಅವಧಿಯಲ್ಲಿಯೇ ಹೆಚ್ಚಳವಾಗಿರುವುದು ಜನರಿಗೆ ನಂದಿನಿ ತುಪ್ಪ ಬಿಸಿ ತುಪ್ಪವಾಗಿ ಬದಲಾಗಿದೆ.

ಕೆಎಂಎಫ್‌ ಈಚೆಗೆ ಹಾಲಿನ ದರವನ್ನು ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಇಷ್ಟರಲ್ಲೇ ಹಾಲಿನ ದರ ಮೂರು ರೂಪಾಯಿ ಹೆಚ್ಚಳವಾಗಲಿದೆ ಎಂದೂ ಹೇಳಲಾಗಿತ್ತು.

ಮಗು ಜನಿಸಿದರೆ “ಪುರುಷ” ಉದ್ಯೋಗಿಗೂ ಸಿಗಲಿದೆ ವೇತನ ಸಹಿತ ರಜೆ! 

ಆದರೆ, ಹಾಲಿನ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸರ್ಕಾರವು ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಸರ್ಕಾರದ ಅನುಮೋದನೆ ಪಡೆಯಲು ಸಾಧ್ಯವಾಗಿಲ್ಲ.

ಹೀಗಾಗಿ, ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ನಂದಿನಿ ತುಪ್ಪದ ಬೆಲೆಯನ್ನು ಹೆಚ್ಚಿಸುವ ಮೂಲಕ ಪರೋಕ್ಷವಾಗಿ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ.

ಕಳೆದ ಮೂರು ತಿಂಗಳ ಅಂತರದಲ್ಲಿ ನಂದಿನಿ ತುಪ್ಪ ಲೀಟರ್‌ಗೆ 180 ರೂಪಾಯಿ ಬೆಲೆ ಹೆಚ್ಚಳವಾಗಿರುವುದು ಕಂಡುಬಂದಿದೆ.

ಆಗಸ್ಟ್ 22 ರಂದು 450 ರೂಪಾಯಿಗೆ ಮಾರಾಟವಾಗಿದ್ದ ಒಂದು ಲೀಟರ್ ನಂದಿನಿ ತುಪ್ಪ ಈಗ ಪ್ರತಿ ಲೀಟರ್‌ಗೆ 630 ರೂಪಾಯಿ ಆಗಿದೆ.

ರಾಜ್ಯದ ಹಲವು ಜಿಲ್ಲೆಯಲ್ಲಿ ಮುಂದುವರಿದ ಮಳೆ 

ಜಿಎಸ್‌ಟಿ ದರಗಳ ಪರಿಷ್ಕರಣೆಯು ಕೆಎಂಎಫ್‌ಗೆ ಮೊಸರು ಮತ್ತು ಲಸ್ಸಿ ಬೆಲೆಗಳನ್ನು ಹೆಚ್ಚಿಸಲು ಅವಕಾಶ ಮಾಡಿಕೊಟ್ಟಿದೆ.

ಆದರೆ, ಇದು ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿಲ್ಲ. ಸಾರ್ವಜನಿಕರ ವಿರೋಧವೂ ಇದಕ್ಕೆ ಕಾರಣ.

ಹಾಲಿನ ಉತ್ಪನ್ನಗಳ ಮೇಲೆ ಜಿಎಸ್‌ಟಿಯನ್ನು ವಿಧಿಸಲು ಮುಂದಾದಾಗ ಸಾರ್ವಜನಿಕರು ಈ ಪ್ರಸ್ತಾವಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಹೀಗಾಗಿ, ಹಾಲಿನ ಮಾರಾಟದಲ್ಲಿ ಆಗಿರುವ ನಷ್ಟವನ್ನು ಸರಿದೂಗಿಸಲು ಕೆಎಂಎಫ್ ಈಗ ನಿರಂತರವಾಗಿ ತುಪ್ಪದ ಬೆಲೆಯನ್ನು ಪರಿಷ್ಕರಣೆ ಮಾಡುತ್ತಿದೆ. .

ಕಳೆದ ಒಂದು ತಿಂಗಳ ಮಾರಾಟದ ಬೆಲೆಗಳನ್ನು ಗಮನಿಸಿದರೆ 200 ಎಂಎಲ್ ಸ್ಯಾಚೆ, ಬಾಟಲ್‌ನಲ್ಲಿ ಒಂದು ಲೀಟರ್ ಪ್ರಮಾಣಕ್ಕೆ ನೀಡುವ ದರವು 12 ರಿಂದ 54 ರೂಪಾಯಿಗೆ ಹೆಚ್ಚಳವಾಗಿದೆ.

ಒಂದು ತಿಂಗಳ ಹಿಂದೆ 113 ರೂಪಾಯಿಗೆ ಮಾರಾಟವಾದ 200 ಎಂಎಲ್ ತುಪ್ಪದ ಸ್ಯಾಚೆ ಈಗ 135 ರೂಪಾಯಿ  ಬೆಲೆಯಿದೆ.

ಪೆಟ್ ಬಾಟಲ್ ಬೆಲೆಯೂ 122 ರೂಪಾಯಿಂದ 145 ರೂಪಾಯಿಗೆ ಹೆಚ್ಚಳವಾಗಿದೆ.

ಇನ್ನು 259 ರೂಪಾಯಿಗೆ ಲಭ್ಯವಿದ್ದ ಅರ್ಧ ಲೀಟರ್ ಸ್ಯಾಚೆ ಈಗ 305 ರೂಪಾಯಿ ತಲುಪಿದೆ.

ಇದೇ ಪ್ರಮಾಣದ ಪೆಟ್ ಬಾಟಲ್ ತುಪ್ಪದ ದರವು 268 ರಿಂದ 315 ರೂಪಾಯಿಗೆ ತಲುಪಿದೆ ಎಂದು ವಿಶ್ಲೇಷಿಸಲಾಗಿದೆ.  

ಇದನ್ನೂ ಓದಿರಿ: ನವೆಂಬರ್‌ 7ರಿಂದ ಒಂದು ತಿಂಗಳು ಜಾನುವಾರುಗಳಿಗೆ ಕಾಲುಬಾಯಿ ಲಸಿಕೆ ಅಭಿಯಾನ: ಪ್ರಭು ಚವ್ಹಾಣ್‌