News

ಏನಿದು ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ(PMJAY)? ಈ ಕೆಳಗಿನ ಮಾಹಿತ ಓದಿ....

21 July, 2020 11:04 AM IST By:

ಸಾಮಾನ್ಯವಾಗಿ ಗಂಭೀರ ಕಾಯಿಲೆಗಳು ಬಂದಾಗ ಬಡಜನರು ಸಾಲ ಮಾಡಿ ಜೀವ ಉಳಿಸುವ ಸಂದರ್ಭವೇ ಹೆಚ್ಚಿರುತ್ತದೆ. ಕೆಲವರು ಉಳಿತಾಯವನ್ನೆಲ್ಲ ಚಿಕಿತ್ಸೆಗೆ ಹಾಕುತ್ತಾರೆ. ಇನ್ನೂ ಕೆಲವರಿಗೆ ಸಾಲ ಸಿಗದೆ ಇರುವುದರಿಂದ ಚಿಕಿತ್ಸೆ ಕೊಡಿಸಕ್ಕಾಗದೆ ಪ್ರಾಣ ಕಳೆದುಕೊಳ್ಳುತ್ತಾರೆ.  ಈ ಬಡಜನತೆಯ ಸಂಕಷ್ಟಕ್ಕೆ ಕೇಂದ್ರ ಸರ್ಕಾರವು  2018ರಲ್ಲಿ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ – ಆಯುಷ್ಮಾನ್‌ ಭಾರತ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಈ ಯೋಜನೆ ಅಡಿಯಲ್ಲಿ ದೇಶಾದ್ಯಂತ 10 ಕೋಟಿಗೂ ಮಿಕ್ಕಿ ಬಡಕುಟುಂಬಗಳಿಗೆ ವಾರ್ಷಿಕ 5 ಲಕ್ಷ ರೂ. ವರೆಗೆ ರೋಗಗಳ ಚಿಕಿತ್ಸಾ ವೆಚ್ಚವನ್ನು ಸರಕಾರವೇ ಭರಿಸಲಿದೆ.

ಕರ್ನಾಟಕದಲ್ಲಿ 2018ರ ಜೂನ್‌ ತಿಂಗಳಿನಿಂದ ರಾಜ್ಯ ಸರಕಾರದ ಆರೋಗ್ಯ ಕರ್ನಾಟಕ ಯೋಜನೆ (Ayushman Bharat health karanataka) ಸಹ ಅನುಷ್ಠಾನಗೊಂಡಿದ್ದು, ಎರಡೂ ಯೋಜನೆಗಳ ಉದ್ದೇಶ, ವ್ಯಾಪ್ತಿಗಳಲ್ಲಿ ಹೋಲಿಕೆ ಇರುವುದರಿಂದ ಎರಡೂ ಯೋಜನೆಗಳನ್ನು ಸಂಯೋಜಿಸಿ ಆಯುಷ್ಮಾನ್‌ ಭಾರತ್‌-ಆರೋಗ್ಯ ಕರ್ನಾಟಕ ಎಂಬ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಈಗ ಕರ್ನಾಟಕದಲ್ಲಿ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನಯೆಂದೇ ಪ್ರಚಲಿತವಾಗಿದೆ.

ಚಿಕಿತ್ಸಾ ಮೊತ್ತ (Treatment charge)

ಬಿಪಿಎಲ್ (BPL) ಕುಟಂಬಸ್ಥರಿಗೆ ರಾಷ್ರ್ಟೀಯ ಸ್ವಾಸ್ಥ್ಯ ಭೀಮಾ ಯೋಜನೆಯಲ್ಲಿ ನೋಂದಾಯಿತವಾಗಿರುವ  ಫಲಾನುಭವಿಗಳಿಗೆ  ಒಂದು ವರ್ಷಕ್ಕೆ  ರೂ.5 ಲಕ್ಷಗಳವರೆಗೆ ಉಚಿತ ಚಿಕಿತ್ಸೆ ಲಭ್ಯ.  ಎಪಿಎಲ್ ಕಾರ್ಡುದಾರರು ಆಥವಾ ಬಿಪಿಎಲ್ ಕಾರ್ಡು ಹೊಂದಿಲ್ಲದ ಕುಟುಂಬಗಳಿಗೆ (APL) ಸಹ ಚಿಕಿತ್ಸೆಯ ಪ್ಯಾಕೇಜ್‌ ದರದ ಶೇ.30ರಷ್ಟು ಚಿಕಿತ್ಸಾ ವೆಚ್ಚವನ್ನು ಯೋಜನೆಯಡಿಯಲ್ಲಿ ಭರಿಸಲಾಗುವುದು. ವಾರ್ಷಿಕ ಮಿತಿ ಅಂತಹ ಕುಟುಂಬಗಳಿಗೆ 1.50 ಲಕ್ಷ ರೂ. ಇರುತ್ತದೆ.

ಆಯುಷ್ಮಾನ್ ಕಾರ್ಡ್ ಎಲ್ಲಿ ಪಡೆಯಬೇಕು?(Aumshman card)

ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯ ಅಡಿಯಲ್ಲಿ ಎಬಿ-ಎಆರ್.ಕೆ ಕಾರ್ಡನ್ನು ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ರೂ.10/ಶುಲ್ಕದೊಂದಿಗೆ ನೀಡಲಾಗುತ್ತದೆ. ಬೆಂಗಳೂರು ಒನ್, ಕರ್ನಾಟಕ ಒನ್ ಮತ್ತು ಸೇವ ಸೀಂಧು ಕೇಂದ್ರಗಳಲ್ಲಿ ರೂ. 35/- ಶುಲ್ಕದೊಂದಿಗೆ ಎಬಿ-ಎಆರ್.ಕೆ ಕಾರ್ಡ್ ನೀಡಲಾಗುತ್ತದೆ. ಆಧಾರ್ ಕಾರ್ಡ್ ಮತ್ತು ಪಡಿತರ ಕಾರ್ಡ್ ಗಳನ್ನು ನೀಡಿ  ಆರೋಗ್ಯ ಕಾರ್ಡ್ ಪಡೆಯಬಹುದು. ಟೋಲ್ ಫ್ರೀ ಸಂಖ್ಯೆ: 1800 4258330  ಗೆ  ಕರೆ ಮಾಡಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬಹುದು

ಸರಕಾರಿ ಆಸ್ಪತ್ರೆ ಮತ್ತು ಉಚಿತ ಚಿಕಿತ್ಸೆ (Treatment)

ಈ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿರುವ ಸರಕಾರಿ ಆಸ್ಪತ್ರೆಗಳಲ್ಲಿ ಯಾವೆಲ್ಲ ಚಿಕಿತ್ಸೆ ಲಭ್ಯವಿದೆಯೋ ಅವನ್ನೆಲ್ಲವನ್ನು ಸರಕಾರಿ ಆಸ್ಪತ್ರೆಯಲ್ಲಿಯೇ ಪಡೆದುಕೊಳ್ಳಬೇಕು. ಉದಾ: ಸಾಮಾನ್ಯ ಹೆರಿಗೆ ಸೇವೆಗಳನ್ನು ಸರಕಾರಿ ಆಸ್ಪತ್ರೆ, ತಾಲೂಕು ಆಸ್ಪತ್ರೆ, ಜಿಲ್ಲಾ ಆಸ್ಪತ್ರೆಯಲ್ಲಿ ಲಭ್ಯವಿರುವುದರಿಂದ ಅಲ್ಲಿಯೇ ಪಡೆದುಕೊಳ್ಳಬೇಕಾಗುತ್ತದೆ. ರೋಗಿಯು ಸರಕಾರಿ ಆಸ್ಪತ್ರೆಯಲ್ಲಿಯೇ ಈ ಯೋಜನೆಯ ಅಡಿಯಲ್ಲಿ ಚಿಕಿತ್ಸೆ ಪಡೆದುಕೊಂಡರೆ ಚಿಕಿತ್ಸೆಗೆ ಯೋಜನೆಯಡಿಯಲ್ಲಿ ನಿಗದಿಪಡಿಸಿದ ಪ್ಯಾಕೇಜ್‌ ದರ ಆ ಸರಕಾರಿ ಆಸ್ಪತ್ರೆಗೆ ದೊರೆಯಲಿದೆ. ಈ ಹಣವನ್ನು ಆಸ್ಪತ್ರೆಯವರು ಸೇವಾ ಸೌಲಭ್ಯ ಹೆಚ್ಚಿಸಲು ಹಾಗೂ ಚಿಕಿತ್ಸೆ ನೀಡಿದ ವೈದ್ಯಕೀಯ, ಅರೆ ವೈದ್ಯಕೀಯ ಸಿಬಂದಿಗೆ ಪ್ರೋತ್ಸಾಹ ಧನವಾಗಿ ನೀಡಲಾಗುತ್ತದೆ.