News

ಅಬ್ಬಬ್ಬಾ ಆಗಸ್ಟ್‌ನಲ್ಲಿ ಬ್ಯಾಂಕ್‌ಗಳಿಗೆ ಇಷ್ಟು ದಿನ ರಜೆ.. ! ಇಲ್ಲಿದೆ ನೋಡಿ ಸಂಪೂರ್ಣ ರಜಾ ಪಟ್ಟಿ

23 July, 2022 2:01 PM IST By: Maltesh

ಗ್ರಾಹಕರೇ ಇಲ್ನೋಡಿ ಆಗಸ್ಟ್‌ನಲ್ಲಿ ಸುಮಾರು ಅರ್ಧ ತಿಂಗಳವರೆಗೆ ಬ್ಯಾಂಕ್‌ಗಳು ಮುಚ್ಚಲ್ಪಟ್ಟಿರುವುದರಿಂದ, ನೀವು ಬ್ಯಾಂಕ್‌ಗೆ ಸಂಬಂಧಿಸಿದ ಎಲ್ಲಾ ಕಾರ್ಯಗಳನ್ನು ಸಮಯಕ್ಕಿಂತ ಮುಂಚಿತವಾಗಿ ಯೋಜಿಸಬೇಕು. ರಜಾದಿನಗಳಲ್ಲಿ, ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳು ಲಭ್ಯವಿರುತ್ತವೆ.

ಭಾರತೀಯ ರಿಸರ್ವ್ ಬ್ಯಾಂಕ್ ಆಗಸ್ಟ್ ತಿಂಗಳಲ್ಲಿ ಬ್ಯಾಂಕ್ ರಜೆಗಳ ಪಟ್ಟಿಯನ್ನು ಇದೀಗ ಪ್ರಕಟಿಸಿದೆ. ಆರ್‌ಬಿಐ ಕ್ಯಾಲೆಂಡರ್ ಪ್ರಕಾರ, ಈ ತಿಂಗಳು ಅಂದ್ರೆ ಆಗಸ್ಟ್‌ನಲ್ಲ ಬರೋಬ್ಬರಿ  13 ದಿನಗಳ ಕಾಲ ಬ್ಯಾಂಕ್‌ಗಳು ರಜಾ ದಿನಗಳನ್ನು ಹೊಂದಿವೆ.

ಗೆಜೆಟ್ ರಜಾದಿನಗಳು, ಶಾಸನಬದ್ಧ ರಜಾದಿನಗಳು ಮತ್ತು ಭಾನುವಾರದಂದು ಖಾಸಗಿ ಮತ್ತು ಸಾರ್ವಜನಿಕ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರದಂದು ಬ್ಯಾಂಕುಗಳು ಬಂದ್‌ ಆಗುತ್ತವೆ.

ಈ ರಜಾ ದಿನಗಳ ಹೊರತಾಗಿ, ರಾಜ್ಯಗಳಾದ್ಯಂತ ಹಲವಾರು ಪ್ರಾದೇಶಿಕ ಉತ್ಸವಗಳು ನಡೆಯುತ್ತವೆ. ಅಂತಹ ಸಂದರ್ಭಗಳಲ್ಲಿ, ವಿವಿಧ ರಾಜ್ಯಗಳಲ್ಲಿನ ಬ್ಯಾಂಕ್‌ಗಳ ಸ್ಥಳೀಯ ಶಾಖೆಗಳಿಗೆ ರಜರಯನ್ನು ಘೋಷಿಸಲಾಗುತ್ತದೆ.

ರಜಾದಿನಗಳ ಪಟ್ಟಿಯನ್ನುನಿಮ್ಮ ಮಾಹಿತಿಗಾಗಿ ಇಲ್ಲಿ ಕೊಡಲಾಗಿದೆ.

ಕ್ರ.ಸಂ

 ರಜಾ ದಿನಗಳೂ

1.       

ಆಗಸ್ಟ್ 1 - ದ್ರುಕ್ಪಾ ತ್ಶೆ-ಜಿ (ಸಿಕ್ಕಿಂ), ಭಾನುವಾರ

2.       

ಆಗಸ್ಟ್ 8 ಮತ್ತು 9 - ಮುಹರಂ, ಭಾನುವಾರ

3.       

ಆಗಸ್ಟ್ 11 ಮತ್ತು 12 - ರಕ್ಷಾ ಬಂಧನ

4.       

ಆಗಸ್ಟ್ 13 - Patriot's day

5.       

ಆಗಸ್ಟ್ 14 - ಎರಡನೇ ಶನಿವಾರ

6.       

ಆಗಸ್ಟ್ 15 - ಸ್ವಾತಂತ್ರ್ಯ ದಿನ, ಭಾನುವಾರ

7.       

ಆಗಸ್ಟ್ 16 - ಪಾರ್ಸಿ ಹೊಸ ವರ್ಷ (ಶಾಹೆನ್ಶಾಹಿ

8.       

ಆಗಸ್ಟ್ 18 - ಜನ್ಮಾಷ್ಟಮಿ

9.       

ಆಗಸ್ಟ್ 19 - ಶ್ರಾವಣ ವದ/ಕೃಷ್ಣ ಜಯಂತಿ

10.    

ಆಗಸ್ಟ್ 20 - ಶ್ರೀ ಕೃಷ್ಣ ಅಷ್ಟಮಿ

11.    

ಆಗಸ್ಟ್ 22 - ಭಾನುವಾರ

12.    

ಆಗಸ್ಟ್ 28 - ನಾಲ್ಕನೇ ಶನಿವಾರ

13.    

ಆಗಸ್ಟ್ 29 - ಶ್ರೀಮಂತ ಶಂಕರದೇವರ ತಿಥಿ, ಭಾನುವಾರ

14.    

ಆಗಸ್ಟ್ 31 - ಸಂವತ್ಸರಿ (ಚತುರ್ಥಿ ಪಕ್ಷ)/ಗಣೇಶ ಚತುರ್ಥಿ/ವರಸಿದ್ಧಿ ವಿನಾಯಕ ವ್ರತ/ವಿನಾಯಕರ ಚತುರ್ಥಿ

ಮನೆಯಲ್ಲೇ ಕುಳಿತು ಹಣ ಗಳಿಸೋಕೆ ಭರ್ಜರಿ ಆಫರ್‌ ಕೊಡ್ತಿದೆ SBI, ಹೇಗೆ?

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆಗಸ್ಟ್ 15 ರಂದು ದೇಶಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಗಣೇಶ ಚತುರ್ಥಿ, ಜನ್ಮಾಷ್ಟಮಿ, ಶಾಹೆನ್‌ಶಾಹಿ ಮತ್ತು ಮುಹರಂ ಇತರ ಪ್ರಾದೇಶಿಕ ರಜಾದಿನಗಳಾಗಿವೆ.

SBI ನಲ್ಲಿ ಹಣ ಇಟ್ಟವರಿಗೆ ಸಿಕ್ತು ಗುಡ್‌ನ್ಯೂಸ್‌.. FD ಮೇಲಿನ  ಬಡ್ಡಿದರದಲ್ಲಿ ಜಬರ್ಧಸ್ತ್‌ ಏರಿಕೆ..!

ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿರ್ದಿಷ್ಟ ಅವಧಿಗಳಿಗೆ ತನ್ನ ನಿಶ್ಚಿತ ಠೇವಣಿ (Fixed Deposits) ಮೇಲಿನ ಬಡ್ಡಿ ದರಗಳನ್ನು ಹೆಚ್ಚಿಸಿರುವುದಾಗಿ ತಿಳಿಸಿದೆ.

ಹೊಸದಾಗಿ ಜಾರಿಗೆ ತಂದಿರುವ FD  ಮೇಲಿನ ಬಡ್ಡಿ ದರಗಳು ಮೊನ್ನೆ ಜುಲೈ 15, ಶುಕ್ರವಾರದಿಂದ ಜಾರಿಗೆ ಬಂದಿವೆ ಎಂದು ಮಾಹಿತಿ ನೀಡಿದೆ. ಬ್ಯಾಂಕ್ ತನ್ನ ಎಫ್‌ಡಿ ದರಗಳನ್ನು ಒಂದು ವರ್ಷದಿಂದ ಎರಡು ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗಳ ಮೇಲೆ 50 ಬೇಸಿಸ್ ಪಾಯಿಂಟ್‌ಗಳಿಂದ ಸಾಮಾನ್ಯ ಜನರಿಗೆ 4.75 ಶೇಕಡಾದಿಂದ 5.25 ಕ್ಕೆ ಹೆಚ್ಚಿಸಿದೆ.

SBI ಸ್ಥಿರ ಠೇವಣಿ ಬಡ್ಡಿ ದರಗಳು ರೂ 2 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಅವಧಿಯ ಠೇವಣಿಗಳ ಮೇಲೆ ಇದು  ಅನ್ವಯಿಸುತ್ತದೆ ಎಂದು ತಿಳಿಸಿದೆ.