News

ವಾಟ್ಸಪ್‌ ಬಳಕೆದಾರರೇ ಎಚ್ಚರಿಕೆ: ಇನ್ಮುಂದೆ ಫ್ರೀ ಇದೆಯಂತ ವಾಟ್ಸಪ್‌ ಸ್ಟೇಟಸ್‌ನಲ್ಲಿ ಏನಬೇಕಾದ್ರು ಹಾಕುವಂತಿಲ್ಲ!

27 December, 2022 2:37 PM IST By: Kalmesh T
Attention WhatsApp users: From now on, you can't put anything in WhatsApp status!

ಹಳ್ಳಿಯಿಂದ ಪಟ್ಟಣದವರೆಗೂ ಇಂದು ಬಹಳಷ್ಟು ಜನರು ವಾಟ್ಸಪ್‌ ಬಳಸುವುದು ಸರ್ವೇ ಸಾಮಾನ್ಯವಾಗಿದೆ. ಆಗಾಗ ವಾಟ್ಸಪ್‌ನಲ್ಲಿ ಇಷ್ಟದ ಸ್ಟೇಟಸ್‌ಗಳನ್ನು ಕೂಡ ಅಪ್ಡೇಟ್‌ ಮಾಡುತ್ತಾರೆ. ಆದರೆ, ಇದೀಗ ಮೊದಲಿನಂತೆ ಸಿಕ್ಕ ಸಿಕ್ಕಿದ್ದನ್ನೆಲ್ಲ ವಾಟ್ಸಪ್‌ ಸ್ಟೇಟಸ್‌ಗೆ ಹಾಕುವಂತಿಲ್ಲ ಗೊತ್ತೆ?

81.35 ಕೋಟಿ ಫಲಾನುಭವಿಗಳಿಗೆ ಕೇಂದ್ರ ಸರ್ಕಾರದಿಂದ ಉಚಿತ ಆಹಾರಧಾನ್ಯ: ಸಚಿವ ಸಂಪುಟ ನಿರ್ಧಾರ

ಹೊಸ ಅಪ್ಡೇಟ್‌ ಪ್ರಕಾರ ಸ್ಟೇಟಸ್‌ ವಿಭಾಗದಲ್ಲಿ ನೂತನ ಮೆನುವಿನೊಳಗೆ ಸ್ಟೇಟಸ್‌ ಅಪ್ಡೇಟ್‌ ಅನ್ನು ವರದಿ (Report) ಮಾಡಲು ಬಳಕೆದಾರರಿಗೆ ಅನುಮತಿಸುತ್ತದೆ ಎಂದು WABetaInfo ವರದಿ ಮಾಡಿದೆ.

ಮೆಟಾ-ಮಾಲೀಕತ್ವದ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್‌ (WhatsApp) ಹೊಸ ಫೀಚರ್‌ ಅಪ್ಡೇಟ್‌ ಮಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅದು ಬಳಕೆದಾರರಿಗೆ ಡೆಸ್ಕ್‌ಟಾಪ್ ಬೀಟಾದಲ್ಲಿ (DeskTop Beta) ಸ್ಟೇಟಸ್‌ ಅಪ್ಡೇಟ್‌ಗಳನ್ನ ರಿಪೋರ್ಟ್‌ (Report) ಮಾಡುವ ಸಾಮರ್ಥ್ಯವನ್ನು ಒದಗಿಸುತ್ತದೆ.

ಆಧಾರಕಾರ್ಡ್‌ ಹೊಂದಿರುವವರಿಗೆ ಕೇಂದ್ರದಿಂದ ಮಹತ್ವದ ಮಾಹಿತಿ: ನೀವಿದನ್ನು ಪಾಲಿಸಲೇಬೇಕು!

ಸೇವಾ ನಿಯಮಗಳನ್ನು ಉಲ್ಲಂಘಿಸಬಹುದಾದ ಯಾವುದೇ ಅನುಮಾನಾಸ್ಪದ ಸ್ಟೇಟಸ್‌ ಅಪ್ಡೇಟ್‌ ಅನ್ನು ಬಳಕೆದಾರರು ನೋಡಿದರೆ, ಹೊಸ ಆಯ್ಕೆಯೊಂದಿಗೆ ಅದನ್ನು ಮಾಡರೇಶನ್ ತಂಡಕ್ಕೆ ರಿಪೋರ್ಟ್‌ ಮಾಡಲು ಅವರಿಗೆ ಸಾಧ್ಯವಾಗುತ್ತದೆ.

ಇನ್ನು ವರದಿ ಮಾಡುವ ಸಂದೇಶಗಳಂತೆಯೇ, ಸ್ಟೇಟಸ್‌ ಅಪ್‌ಡೇಟ್ ಅನ್ನು ಮಾಡರೇಶನ್ ಕಾರಣಗಳಿಗಾಗಿ ಕಂಪನಿಗೆ ಫಾರ್ವರ್ಡ್ ಮಾಡಲಾಗುತ್ತದೆ. ಬಳಿಕ ಅವರು ಈ ಸ್ಟೇಟಸ್‌ ನಿಯಮ ಉಲ್ಲಂಘನೆಯಾಗಿದೆಯೇ ಎಂದು ಪರಿಶೀಲನೆ ನಡೆಸುತ್ತಾರೆ.

ಗಮನಿಸಿ: ಮತ್ತೆ ಮದರ್ ಡೈರಿ ಹಾಲಿನ ದರದಲ್ಲಿ ಏರಿಕೆ

ಆದರೂ ಈ ವೈಶಿಷ್ಟ್ಯವು ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ನಿಯಮ ಹೊಂದಿದೆ. ಈ ಹಿನ್ನೆಲೆ WhatsApp ಮತ್ತು Meta ಕೂಡ, ಬಳಕೆದಾರರ ಸಂದೇಶಗಳ ವಿಷಯವನ್ನು ನೋಡಲು ಮತ್ತು ಅವರ ಖಾಸಗಿ ಕರೆಗಳನ್ನು ಕೇಳಲು ಸಾಧ್ಯವಿಲ್ಲ.

ಆದರೆ ಪ್ಲಾಟ್‌ಫಾರ್ಮ್ ಮತ್ತು ಬಳಕೆದಾರರನ್ನು ಸುರಕ್ಷಿತವಾಗಿರಿಸಲು ಕಂಪನಿಯು ವರದಿ ಆಯ್ಕೆಯನ್ನು ತರುವುದು ಮುಖ್ಯವಾಗಿದೆ. ಇನ್ನು, ಸ್ಟೇಟಸ್‌ ಅಪ್ಡೇಟ್‌ಗಳನ್ನು ರಿಪೋರ್ಟ್‌ ಮಾಡುವ ಸಾಮರ್ಥ್ಯವು ಅಭಿವೃದ್ಧಿ ಹಂತದಲ್ಲಿದೆ ಮತ್ತು WhatsApp ಡೆಸ್ಕ್‌ಟಾಪ್ ಬೀಟಾದ ಭವಿಷ್ಯದ ಅಪ್‌ಡೇಟ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ವರದಿ ತಿಳಿಸಿದೆ.