News

ಸರ್ಕಾರಿ ನೌಕರರ ಗಮನಕ್ಕೆ: “ಆಗಲಿದೆಯಾ ಹಳೆ ಪಿಂಚಣಿ ಯೋಜನೆ ಮತ್ತೆ ಜಾರಿಗೆ!?

14 November, 2022 12:15 PM IST By: Kalmesh T
Attention of government employees: "The old pension scheme has been implemented again"!

ಸರ್ಕಾರಿ ನೌಕರರಿಗೆ ಶೀಘ್ರದಲ್ಲಿಯೇ ಶುಭಸುದ್ದಿ ಏನಾದರೂ ಸಿಗಲಿದೆಯೇ? ಅಧಿಕಾರಕ್ಕೆ ಬಂದರೆ ಹಳೆ ಪಿಂಚಣಿ ಯೋಜನೆ ಜಾರಿಗೆ ಎಂದು ಹೇಳಲಾಗಿದೆ. ಯಾರು, ಏನು? ತಿಳಿಯಿರಿ

ಇನ್ನಷ್ಟು ಓದಿರಿ: ಸಿಎಂ ಬೊಮ್ಮಾಯಿಯಿಂದ ಸರ್ಕಾರಿ ನೌಕರರ ಪರಿಷ್ಕೃತ ವೇತನ ಪ್ರಕಟ; ಹಾಗಿದ್ರೆ ಇನ್ಮುಂದೆ ಎಷ್ಟಾಗಲಿದೆ ವೇತನ?

ಈಗಾಗಲೇ ಸಾಕಷ್ಟು ಬಾರಿ ಸರ್ಕಾರಿ ನೌಕರರು ಮತ್ತು ಒಕ್ಕೂಟ, ಸಂಘ ಸಂಸ್ಥೆಗಳು ಹಳೆ ಪಿಂಚಣಿ ಯೋಜನೆ ಜಾರಿಗೆ ತರಬೇಕು ಎಂದು ಒತ್ತಾಯಿಸಿವೆ.

ಈ ಕುರಿತು ನೌಕರರು ಪ್ರತಿಭಟನೆ, ಹೋರಾಟಗಳನ್ನು ಮಾಡಿದ್ದಾರೆ ಕೂಡ. ಆದರೆ, ಈಗ ಮತ್ತೆ ಹಳೆ ಪಿಂಚಣಿ ಜಾರಿಗೆ ತರಲಾಗುವುದು ಎಂದು ಹೇಳಿಕೆ ನೀಡಿಲಾಗಿದೆ.

Pensioners Welfare: ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯಿಂದ ರಾಷ್ಟ್ರವ್ಯಾಪಿ ಅಭಿಯಾನ ಆರಂಭ!

ಹೌದು, ಹಿಮಾಚಲ ಪ್ರದೇಶ ಮತ್ತು ಗುಜರಾತ್‌ನಲ್ಲಿ ಬರಲಿರುವ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದರೆ “ಹಳೆಯ ಪಿಂಚಣಿ ಯೋಜನೆ”ಯನ್ನು(Old pension scheme) ಮತ್ತೆ ಜಾರಿಗೆ ತರಲಾಗುವುದು' ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra)  ಅವರು ಹೇಳಿದ್ದಾರೆ.

ಈ ವಿಷಯದ ಕುರಿತಾಗಿ ಅವರು ತಮ್ಮ ಫೇಸ್‌ಬುಕ್‌ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.

ಆಧಾರ್‌ ಕಾರ್ಡ್‌ ನವೀಕರಣದ ಕುರಿತು ಕೇಂದ್ರ ಸರ್ಕಾರದ ಮಹತ್ವದ ಮಾಹಿತಿ! ನೀವಿದನ್ನು ತಿಳಿದಿರಲೆಬೇಕು

ಹಳೆಯ ಪಿಂಚಣಿ ಯೋಜನೆಯನ್ನು ರದ್ದುಪಡಿಸುವ ಮೂಲಕ ಬಿಜೆಪಿಯು ವೃದ್ಧರ, ಹಿರಿಯ ನಾಗರಿಕೆ ಆರ್ಥಿಕ ಭದ್ರತೆಯನ್ನು ಕಸಿದುಕೊಂಡಿದೆ ಎಂದು ಟೀಕಿಸಿದ್ದಾರೆ.

'ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವ ಪ್ರತಿಯೊಬ್ಬ ಉದ್ಯೋಗಿಯು ಪಿಂಚಣಿ ಪಡೆಯಬೇಕೆಂದು ಕಾಂಗ್ರೆಸ್ ಬಯಸುತ್ತದೆ.  ಪಿಂಚಣಿ ಪಡೆಯುವುದು ಪ್ರತಿಯೊಬ್ಬ ಉದ್ಯೋಗಿಯ ಹಕ್ಕು ಕೂಡ ಹೌದು.

ಇದನ್ನು ಗಮನದಲ್ಲಿಟ್ಟುಕೊಂಡು ಛತ್ತೀಸಗಡ ಹಾಗೂ ರಾಜಸ್ಥಾನದ ಕಾಂಗ್ರೆಸ್ ಸರ್ಕಾರಗಳು ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿವೆ ಎಂದು ಹೇಳಿದ್ದಾರೆ.

Dearness Allowance: ಡಿಎ ಬಾಕಿ ಕುರಿತಂತೆ ಸರ್ಕಾರಿ ನೌಕರರಿಗೆ ಸಿಹಿಸುದ್ದಿ: ಅಂದಾಜು ₹12,500 ಕೋಟಿ ಮೀಸಲು ಸಾಧ್ಯತೆ!

ನಿಮ್ಮ ಮಾಹಿತಿಗಾಗಿ…

ನಿವೃತ್ತ ಉದ್ಯೋಗಿಗಳಿಗೆ ಆದಾಯ ಕಲ್ಪಿಸುವ ನಿಟ್ಟಿನಲ್ಲಿ ಛತ್ತೀಸ್‌ಗಢ ರಾಜ್ಯ ಹಳೆಯ ಪಿಂಚಣಿ ಯೋಜನೆಯನ್ನು (Old pension scheme)ಮರುಸ್ಥಾಪಿಸಿದ್ದು, ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ರಾಷ್ಟ್ರೀಯ ಪಿಂಚಣಿ ಯೋಜನೆ(National Pension Scheme)ಯಡಿ 17,000 ಕೋಟಿ ರೂ.ಗಳನ್ನು ನವೆಂಬರ್ 2004 ರಿಂದ ಹಿಂಪಡೆಯಲು ನಿರ್ಧರಿಸಿತ್ತು.

ರಾಜ್ಯ ಸರ್ಕಾರವು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ (PFRDA) ಪ್ರಸ್ತಾವನೆಯನ್ನು ಕಳುಹಿಸಿತ್ತು. ಈ ನಿರ್ಧಾರದಿಂದ ಹಳೆಯ ಪಿಂಚಣಿ ಯೋಜನೆಯು ನೌಕರರ ವೇತನದ 50 ಪ್ರತಿಶತವನ್ನು ಪಿಂಚಣಿಯಾಗಿ ನೀಡುತ್ತದೆ.

ರೈತರ ಕಬ್ಬು ಬಾಕಿ ಹಣ ಶೀಘ್ರ ಪಾವತಿ ಮಾಡುವಂತೆ ಸಕ್ಕರೆ ಕಾರ್ಖಾನೆಗಳಿಗೆ ಸರ್ಕಾರ ಸೂಚನೆ!

ಹಳೆಯ ಪಿಂಚಣಿ ಯೋಜನೆಯು ಎಪ್ರಿಲ್ 1, 2022 ರಿಂದ ಜಾರಿಗೆ ಬರಲಿದೆ ಎಂದು ಸರ್ಕಾರ ಅಧಿಸೂಚನೆಯನ್ನು ಕೂಡ ಹೊರಡಿಸಿತ್ತು.

ಅಲ್ಲದೆ, ಹೊಸ ಪಿಂಚಣಿ ಯೋಜನೆ ಹಿನ್ನೆಲೆ ಸರ್ಕಾರಿ ನೌಕರರ ವೇತನದಿಂದ ಮಾಸಿಕವಾಗಿ 10% ರಷ್ಟು ಕಡಿತಗೊಳ್ಳುತ್ತಿದ್ದ ತೆರಿಗೆಯನ್ನು ಏಪ್ರಿಲ್ 1 ರಿಂದ ರದ್ದುಗೊಳಿಸಲಾಗುವುದು.

ಈ ಸಾಮಾನ್ಯ ಭವಿಷ್ಯ ನಿಧಿ ನಿಯಮದ ಪ್ರಕಾರ ಮೂಲ ವೇತನದ ಕನಿಷ್ಠ 12 ಪ್ರತಿಶತವನ್ನು ಕಡಿತಗೊಳಿಸಲಾಗುತ್ತದೆ.

ಇದೇ ರೀತಿಯಲ್ಲಿ ರಾಜಸ್ಥಾನ ಸರ್ಕಾರದ ಮನವಿಯನ್ನು ಕೇಂದ್ರ ತಿರಸ್ಕರಿಸಿತ್ತು. ರಾಜಸ್ಥಾನ ಸರ್ಕಾರವು 2004 ರಿಂದ ರಾಷ್ಟ್ರೀಯ ಪಿಂಚಣಿ ಯೋಜನೆಯಡಿ 39,000 ಕೋಟಿ ರೂ.ಗಳನ್ನು ಹಿಂಪಡೆದು ಸಾಮಾನ್ಯ ಭವಿಷ್ಯ ನಿಧಿಯ ಅಡಿಯಲ್ಲಿ ವರ್ಗಾಯಿಸುವುದಾಗಿ ಹೇಳಿತ್ತು. ಆದ್ದರಿಂದ ಕೇಂದ್ರ ಮಾನ್ಯತೆ ನೀಡಿರಲಿಲ್ಲ.