News

ರೋಜಗಾರ್‌ ಯೋಜನೆ 9 ತಿಂಗಳು ವಿಸ್ತರಣೆ : ನಿರ್ಮಲಾ ಸೀತಾರಾಮನ್‌ ಘೋಷಣೆ

29 June, 2021 8:18 AM IST By:
Nirmala sitaraman

ಕೊರೋನಾ ಸೋಂಕಿನಿಂದ ನಲುಗಿಹೋಗಿರುವ ಆರ್ಥಿಕತೆಗೆ ಚೇತರಿಕೆ ನೀಡಲು ಮುಂದಾಗಿರುವ ಕೇಂದ್ರ ಸರ್ಕಾರ , ಆರೋಗ್ಯ, ಪ್ರವಾಸೋದ್ಯಮ ಸೇರಿದಂತೆ 8 ಕ್ಷೇತ್ರಗಳಿಗೆ ಉತ್ತೇಜನಕ್ಕೆ 1.5 ಲಕ್ಷ ಕೋಟಿ ಖಾತರಿ ಆಧಾರಿತ ಸಾಲ ಯೋಜನೆಯ ಆರ್ಥಿಕ ಪ್ಯಾಕೇಜ್ ಪ್ರಕಟಿಸಿದೆ.

ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಎರಡನೇ ಕೊರೊನಾ ಅಲೆಯಿಂದ ದೇಶದ ಎಲ್ಲ ಕ್ಷೇತ್ರಗಳು ಸಂಕಷ್ಟಕ್ಕೆ ಸಿಲುಕಿವೆ ಅವುಗಳಿಗೆ ಚೇತರಿಕೆ ನೀಡಲು ಹಲವು ಪರಿಹಾರ ಕ್ರಮಗಳನ್ನು ಪ್ರಕಟಿಸಲಾಗಿದೆ ಎಂದು ತಿಳಿಸಿದ್ದಾರೆ.

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯ ನಡುವೆ 'ಆತ್ಮನಿರ್ಭರ್ ಭಾರತ್ ರೋಜಗಾರ್ ಯೋಜನೆ' ನಿರ್ಮಾಣಕ್ಕಾಗಿ ಈ ಹಿಂದಿನ ಯೋಜನೆಯನ್ನು 2022ರ ಮಾರ್ಚ್ 31ರವರೆಗೂ ವಿಸ್ತರಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.

ರೋಜ್‌ ಗಾರ್‌ ಯೋಜನೆಯನ್ನು ಕೇಂದ್ರ ಸರಕಾರ ಇನ್ನೂ 9 ತಿಂಗಳ ಕಾಲ ವಿಸ್ತರಣೆ ಮಾಡಿದೆ. ಅಂದರೆ, 2022ರ ಮಾ.31ರ ವರೆಗೆ ಈ ಯೋಜನೆ ಚಾಲ್ತಿಯಲ್ಲಿರುತ್ತದೆ. ಪ್ರಸಕ್ತ ವರ್ಷದ ಜೂನ್‌ 18ರ ವರೆಗೆ 79,577 ಸಂಸ್ಥೆಗಳ ಸುಮಾರು 21.42 ಲಕ್ಷ ಮಂದಿ ಈ ಯೋಜನೆಯ ಅನುಕೂಲತೆ ಪಡೆದಿದ್ದಾರೆ ಎಂದು ಸಚಿವೆ ನಿರ್ಮಲಾ ಮಾಹಿತಿ ನೀಡಿದ್ದಾರೆ. 

ಕೊವಿಡ್-19 ಸಂಕಷ್ಟದಿಂದ ಉದ್ಯೋಗ ಕಳೆದುಕೊಂಡವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ವಾವಲಂಬನೆಯ ಪಾಠ ಹೇಳಿದ್ದರು. 2020ರ ಅಕ್ಟೋಬರ್ 1ರಂದು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವುದಕ್ಕಾಗಿ ಪ್ರಜೆಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಈ ಆತ್ಮನಿರ್ಭರ್ ಭಾರತ್ ಯೋಜನೆಯನ್ನು ಪರಿಚಯಿಸಲಾಗಿತ್ತು.

ದೇಶದ 58.50 ಫಲಾನುಭವಿಗಳಿಗೆ ಆತ್ಮನಿರ್ಭರ್ ಯೋಜನೆ ಅಡಿ ನೆರವು ನೀಡುವುದಕ್ಕಾಗಿ 22,810 ಕೋಟಿ ರೂಪಾಯಿ ಮೀಸಲು ಇರಿಸಲಾಗಿದೆ. ಜೂನ್ 30ರವರೆಗೂ ಹೆಸರು ನೋಂದಣಿಗೆ ಅವಕಾಶ ನೀಡಲಾಗಿದೆ.
ಈ ವರ್ಷದ ಮೇ ತಿಂಗಳಿಂದ ನವೆಂಬರ್‌ ಧಾನ್ಯವನ್ನು ಉಚಿತವಾಗಿ ಒದಗಿಸುವ ಯೋಜನೆಗೆ ಕೇಂದ್ರ ಸರಕಾರ 93,869 ಕೋಟಿ ರೂ.ಗಳನ್ನು ವೆಚ್ಚ ಮಾಡಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಘೋಷಿಸಿದ್ದಾರೆ.

ಕಳೆದ ವರ್ಷವೇ ರಾಷ್ಟ್ರೀಯ ಭದ್ರತಾ ಕಾಯ್ದೆಯ ಅನ್ವಯ ಕೇಂದ್ರ ಸರಕಾರ ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ್‌ ಅನ್ನ ಯೋಜನೆಯನ್ನು ಜಾರಿ ಮಾಡಿತ್ತು. 2020ರ ಎಪ್ರಿಲ್‌-ನವೆಂಬರ್‌ ಅವಧಿಯಲ್ಲಿ ಇದು ಚಾಲ್ತಿಯಲ್ಲಿತ್ತು. ಆದರೆ ಈ ವರ್ಷ ಕೊರೊನಾ ಎರಡನೇ ಅಲೆ ಅಪ್ಪಳಿಸಿದ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಮೊದಲಿಗೆ ಮೇ -ಜೂನ್‌ ಅವಧಿಗೆ, ಅನಂತರ ನವೆಂಬರ್‌ ಕಳೆದ ವಿತ್ತೀಯ ವರ್ಷದಲ್ಲಿ ಸರಕಾರವು ಈ ಯೋಜನೆಗೆ 1,33,972 ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ ಎಂದು ಸಚಿವೆ ತಿಳಿಸಿದ್ದಾರೆ.