ಜಗತ್ತನ್ನೇ ತಲ್ಲಣಗೊಳಿಸಿ, ಲಕ್ಷಾಂತರ ಜನರ ಅಕಾಲಿಕ ಮರಣಕ್ಕೆ ಕಾರಣವಾದ ಕೋವಿಡ್-19ನ ಮೂಲ ಚೀನಾವೇ ಎನ್ನುವ ಅನುಮಾನ
ಮೊದಲಿನಿಂದಲೂ ವಿಶ್ವವನ್ನು ಕಾಡುತ್ತಲೇ ಇದೆ. ಇದೀಗ ಚೀನಾದ ಪ್ರಯೋಗಾಲಯದಿಂದಲೇ ಕೊರೊನಾ ಸೋಂಕು ವ್ಯಾಪಿಸಿತು ಎನ್ನುವುದಕ್ಕೆ ಇನ್ನಷ್ಟು ಪುರಾವೆಗಳು ಲಭಿಸಿವೆ!
38.30 ಲಕ್ಷ ಕೋಟಿ ಡಿಜಿಟಲ್ ಪಾವತಿ; ಚಿನ್ನ- ಬೆಳ್ಳಿ ದರ ತುಸು ಹೆಚ್ಚಳ!
ಹೌದು ವಿಶ್ವದ ಆರ್ಥಿಕತೆಯ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆಯನ್ನಾಕಿ, ವಿಶ್ವದಾದ್ಯಂತ ಲಕ್ಷಾಂತರ ಮಂದಿಯ ಸಾವಿಗೆ
ಕಾರಣವಾಗಿದ್ದೂ ಅಲ್ಲದೇ ವಿಶ್ವವನ್ನೂ ಇನ್ನೂ ನಿಗಿನಿಗಿ ಕಾಡುತ್ತಿರುವ ಕೊರೊನಾ ವೈರಸ್ನ ಮೂಲ ಚೀನಾದ
ವುಹಾನ್ ಪ್ರಯೋಗಾಲಯದಿಂದಲೇ ಹರಡಿರುವ ಸಾಧ್ಯತೆ ಇದೆ ಎಂದು ಬ್ರಿಟನ್‌ನ ಬೇಹುಗಾರರು ಉಲ್ಲೇಖಿಸಿದ್ದಾರೆ.
Heavy Rain| ರಾಜ್ಯದ ವಿವಿಧೆಡೆ ಧಾರಾಕಾರ ಮಳೆ!
ಚೀನಾದ ವುಹಾನ್ ಇನ್ಸ್‌ಟಿಟ್ಯೂಟ್ ಆಫ್‌ವೈರಾಲಜಿಯಿಂದ ವೈರಸ್ ಹರಡಿರುವ ಸಾಧ್ಯತೆ ಬಗ್ಗೆ ಬ್ರಿಟನ್ ಬೇಹುಗಾರರು ಮಾಹಿತಿಯನ್ನು ಕಲೆಹಾಕಲು ಪ್ರಾರಂಭಿಸಿದ್ದಾರೆ.
2019ರ ಡಿಸೆಂಬರ್ 31ರಂದು ಕೊರೊನಾ ವೈರಸ್ ಹರಡಿರುವ ಬಗ್ಗೆ ಚೀನಾವು ವಿಶ್ವ ಆರೋಗ್ಯ ಸಂಸ್ಥೆಗೆ (ಡಬ್ಲ್ಯುಎಚ್‌ಒ) ಮಾಹಿತಿ ನೀಡಿತ್ತು.
PmKisan | ಪಿ.ಎಂ ಕಿಸಾನ್ ಸಮ್ಮಾನ್ 13ನೇ ಕಂತಿನ ಹಣಕ್ಕೆ ಕ್ಷಣಗಣನೆ!
ಕೊರೊನಾ ಸೋಂಕು ಹರಡಿದರ ಬಗ್ಗೆ ಅಮೆರಿಕಾ ಸೇರಿದಂತೆ ಹಲವು ರಾಷ್ಟ್ರಗಳು ತನಿಖೆ ನಡೆಸಬೇಕು ಎಂದು ಆಗ್ರಹಿಸುತ್ತಲೇ ಬಂದಿವೆ.
ಈ ನಡುವೆ ಬೇಹುಗಾರರ ಮೂಲಕವೂ ಹಲವು ತನಿಖೆಗಳು ನಿರಂತರವಾಗಿ ನಡೆದೇ ಇವೆ. ಆದರೆ, ಕೊರೊನಾ ಸೋಂಕಿನ ಬಗ್ಗೆ ತನಿಖೆ ನಡೆಸಬೇಕು
ಎಂಬ ಬೇಡಿಕೆಗಳ ಬಗ್ಗೆ ಚೀನಾ ಗಮನಹರಿಸಿರಲಿಲ್ಲ. ಇದು ಮತ್ತಷ್ಟು ಅನುಮಾನವನ್ನು ಹುಟ್ಟುಹಾಕಿತ್ತು.
ಚಿನ್ನದ ಬೆಲೆಯಲ್ಲಿ ಅಲ್ಪ ಬದಲಾವಣೆ, ಇಂದಿನ ಚಿನ್ನದ ಬೆಲೆ ಎಷ್ಟಿದೆ ?
ವುಹಾನ್‌ಗೆ ಮೊದಲು ಭೇಟಿ ನೀಡಿದ್ದ ವಿಶ್ವ ಆರೋಗ್ಯ ಸಂಸ್ಥೆಯ ತಂಡ ಸಹ ಮಾರುಕಟ್ಟೆಯಿಂದಲೇ ವೈರಸ್ ಹರಡಿರುವ ಸಾಧ್ಯತೆ
ಇದೆ ಎಂದು ವರದಿ ಮಾಡಿತ್ತು. ಆದರೆ, ಬಳಿಕ ತನಿಖೆಯ ವಿಶ್ವಾಸಾರ್ಹತೆ ಮತ್ತು ಸಂಶೋಧನೆಗಳ ಸಿಂಧುತ್ವದ ಬಗ್ಗೆ ಅನುಮಾನ ಮೂಡಿತ್ತು.
ಇತ್ತೀಚಿನ ದಿನಗಳಲ್ಲಿ ವುಹಾನ್ ಲ್ಯಾಬ್‌ನಿಂದ ವೈರಸ್ ಹರಡಿದೆಯೇ ಎಂಬ ಬಗ್ಗೆ ತನಿಖೆಯಾಗಬೇಕೆಂಬ ಆಗ್ರಹ ವಿಶ್ವದಾದ್ಯಂತ ವ್ಯಕ್ತವಾಗಿದೆ.
ಕೋವಿಡ್–19 ಸಾಂಕ್ರಾಮಿಕದ ಕುರಿತು ಚೀನಾ ಅಧಿಕೃತವಾಗಿ ಬಹಿರಂಗಪಡಿಸುವ ಕೆಲ ತಿಂಗಳ ಮೊದಲೇ ವುಹಾನ್‌ವೈರಾಣು
ಸಂಸ್ಥೆಯ ಮೂವರು ಸಂಶೋಧಕರು ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಅಮೆರಿಕದ ‘ವಾಲ್‌ಸ್ಟ್ರೀಟ್‌ಜರ್ನಲ್’ ಈಚೆಗೆ ವರದಿ ಮಾಡಿತ್ತು.
ಅಮೆರಿಕದ ಗುಪ್ತಚರ ವರದಿಯನ್ನು ಆಧರಿಸಿ ಅದು ವರದಿ ಮಾಡಿತ್ತು. ಇದೇ ಹಿನ್ನೆಲೆಯಲ್ಲಿ ‘ಲ್ಯಾಬ್–ಲೀಕ್ ಸಿದ್ಧಾಂತದ ವಾದ ಮುನ್ನೆಲೆಗೆ ಬಂದಿದೆ.