News

ಕೊರೋನಾದಿಂದ ತಪ್ಪಿಸಲು ಆರೋಗ್ಯ ಸೇತು ಆ್ಯಪ್ ಡೌನ್ಲೋಡ್ ಮಾಡಿ

05 May, 2020 9:36 PM IST By:

ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಜನತೆ ಈ ಸೋಂಕಿನ ಬಗ್ಗೆ ಮಾಹಿತಿ ತಿಳಿದುಕೊಳ್ಳುವ ಅಗತ್ಯವಿದೆ. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಆರೋಗ್ಯ ಸೇತು ಆ್ಯಪ್‌ ಅನ್ನು ಎಲ್ಲರೂ ಕಡ್ಡಾಯವಾಗಿ ಬಳಸಬೇಕು ಎಂದು ರಾಜ್ಯ ಸರ್ಕಾರ ಆದೇಶ ನೀಡಿದೆ.
 ಆ್ಯಪ್‌ನಲ್ಲಿ ರೋಗ ಲಕ್ಷಣಗಳನ್ನು ದಾಖಲಿಸಿದ ಕೂಡಲೇ,  ಸಂಬಂಧ ಪಟ್ಟವರಿಗೆ ಮಾಹಿತಿ ರವಾನೆಯಾಗುವುದು. ಜತೆಗೆ, ಮಾಹಿತಿ ಒದಗಿಸುವ ವ್ಯಕ್ತಿ ಇರುವ ಸ್ಥಳವನ್ನೂ ಸುಲಭವಾಗಿ ಪತ್ತೆ ಮಾಡುವಂಥ ವ್ಯವಸ್ಥೆ ಆ್ಯಪ್‌ನಲ್ಲಿದೆ.
ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸರ್ಕಾರದ ಆರೋಗ್ಯ ಸೇತು ಆ್ಯಪ್ ಬಳಸುವಂತೆ ಕರೆ ಕೊಟ್ಟಿದ್ದಾರೆ. ಈ ಆ್ಯಪ್ ಬಳಸೋದು ಹೇಗೆ..? ಇದರಿಂದ ಆಗುವ ಪ್ರಯೋಜನಗಳೇನು ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

ಆ್ಯಪ್ ಬಳಕೆ ಹೇಗೆ?

ಈ Arogya Setup COVID-19 ಆ್ಯಪ್‌ ಅನ್ನು ಐಒಎಸ್‌ ಮತ್ತು ಆ್ಯಂಡ್ರಾಯ್ಡ್ ಸ್ಮಾರ್ಟ್‌ ಫೋನ್‌ನಲ್ಲಿ ಬಳಕೆ ಮಾಡಬಹುದು. ಗೂಗಲ್ ಪ್ಲೇ ಸ್ಟೋರ್ನಿಂದ ಆ್ಯಪ್ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಬಳಿಕ ಬ್ಲೂಟೂತ್‌ ಮತ್ತು ಲೊಕೇಶನ್‌ ಸದಾ ಆನ್‌ ಮಾಡಿರಬೇಕು. ಅದರಲ್ಲಿ ಸೆಟ್‌ ಲೊಕೇಶನ್‌ ಎಂದಿರುವುದನ್ನು ALWAYS ಎಂದು ಕೊಡಬೇಕು.

ಅಲರ್ಟ್ ಮೂಲಕ ಎಚ್ಚರಿಕೆ!

ಆರೋಗ್ಯ ಸೇತು ಆ್ಯಪ್, ಕೊರೋನಾ ವೈರಸ್ ಸೋಂಕಿತರು ಹಾಗೂ ಶಂಕಿತರ ಚಲನವಲನವನ್ನು ಜಿಪಿಎಸ್‌ ತಂತ್ರಜ್ಞಾನ ಸಹಾಯದಿಂದ ಸೆರೆಹಿಡಿಯಲಿದೆ. ಈ ಆ್ಯಪ್‌ಗೆ ಟ್ರ್ಯಾಕರ್ ಅಳವಡಿಸಲಾಗಿದ್ದು, ಕೊರೋನಾ ಸೋಂಕಿತ ವ್ಯಕ್ತಿ ಹತ್ತಿರ ಬಂದರೆ ಅಲರ್ಟ್‌ ಮೂಲಕ ಎಚ್ಚರಿಸುತ್ತೆ. ಕನ್ನಡ, ಹಿಂದಿ, ಇಂಗ್ಲಿಷ್‌ ಸಹಿತ 11 ಭಾಷೆಗಳ ಆಯ್ಕೆಯನ್ನು ಹೊಂದಿದೆ ಈ ಆ್ಯಪ್. ಕೋವಿಡ್-19 ಸೋಂಕು ಹರಡುವ ಬಗೆ, ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳು, ಚಿಕಿತ್ಸಾ ವಿಧಾನ, ಸಹಾಯವಾಣಿ ಸೇರಿದಂತೆ ಹಲವು ಮಾಹಿತಿಗಳು ಇದರಲ್ಲಿ ಲಭ್ಯ ಇವೆ. ಸ್ವಯಂ ಮೌಲ್ಯ ಮಾಪನ ಪರೀಕ್ಷೆಗೂ ಅವಕಾಶ ಕಲ್ಪಿಸಲಾಗಿದೆ.
ಈ ಆ್ಯಪ್ ಮೂಲಕವೇ ಜನಸಾಮಾನ್ಯರು ತಮ್ಮ ಸುತ್ತಲಿನ ಸೋಂಕಿತರು ಹಾಗೂ ಸೋಂಕು ವಲಯಗಳನ್ನು ಗುರುತಿಸಬಹುದಾಗಿದೆ. ನೀವು ಡೌನ್ಲೌಡ್ ಮಾಡಿ ನಿಮ್ಮ ಸ್ನೇಹಿತರಿಗೂ ಆರೋಗ್ಯ ಸೇತು ಆ್ಯಪ್ ಬಗ್ಗೆ ತಿಳಿಸಿ.
ಈ ಲಿಂಕ್ ಬಳಸಿ COVID19 ವಿರುದ್ಧ ಹೋರಾಡಲು ಆರೋಗ್ಯಾ ಸೆಟು ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ.
https://play.google.com/store/apps/details?id=nic.goi.aarogyasetu