News

ಕೊರೋನಾ ವಾರಿಯರ್ಸ್‌ಗೆ ಸೇನೆಯ ಸಲಾಂ. ಆಕಾಶದಿಂದ ಸುರಿಯಿತು ಹೂ ಮಳೆ!

03 May, 2020 6:18 PM IST By:

ಕೊರೋನಾ ವೈರಸ್‌ ವಿರುದ್ಧ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ಕೊರೋನಾ ವಾರಿಯರ್‌ಗಳಿಗೆ ದೇಶದ ಉದ್ದಗಲಕ್ಕೂ ಭಾರತೀಯ ಸೇನೆ ಧನ್ಯವಾದ ಸಮರ್ಪಿಸಿದೆ. ಭಾರತದ ಮೂರು ಸೇನೆಯ ಯೋಧರು ಕೊರೋನಾ ವೀರರ ಮೇಲೆ ಪುಷ್ಪವೃಷ್ಠಿ ಮೂಲಕ ನಿಮಗೊಂದು ಸಲಾಂ ಎಂದಿದೆ.
ವಿಮಾನಗಳಿಂದ ಫ್ಲೈ ಪಾಸ್ಟ್, ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ, ಹಡುಗುಗಳಲ್ಲಿ ದೀಪ ಬೆಳಗುವುದು, ಮತ್ತಿತರ ಕಾರ್ಯಕ್ರಮಗಳನ್ನು ಎಲ್ಲೆಡೆ ಆಯೋಜಿಸಲಾಯಿತು
ಕೊರೋನಾ ವೈರಸ್ ವಿರುದ್ಧ ಹೋರಾಟಡುತ್ತಿರುವ ಯೋಧರಾದ ವೈದ್ಯರು, ಶುಶ್ರೂಷಕರು, ಪೊಲೀಸರು ಹಾಗೂ ನೈರ್ಮಲ್ಯ ಕೆಲಸಗಾರರು ಮುಂತಾಗಿ  ಮುನ್ನೆಲೆಯಲ್ಲಿ ನಿಂತು ಹೋರಾಡುತ್ತಿರುವ ಆರೋಗ್ಯ ವೀರರಿಗೆ ಗೌರವ ಸಲ್ಲಿಸಲು ದೇಶದ ಸಶಸ್ತ್ರ ಪಡೆಗಳು ಹಾಕಿಕೊಂಡಿರುವ ಯೋಜನೆಗೆ ದೇಶದಲ್ಲೆಡೆ ಶ್ಲಾಘಿಸಿಗಲಾಗುತ್ತಿದೆ. ದಾದಿಯರು, ವೈದ್ಯರು ಕೂಡ ವಾಯುಸೇನೆಯನ್ನು ಚಪ್ಪಾಳೆ ತಟ್ಟಿ ಸ್ವಾಗತಿಸಿದರು.

ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಮತ್ತು ಈಶಾನ್ಯದ ಅಸ್ಸಾಂನಿಂದ ಗುಜರಾತ್‌ನ ಕಚ್‌ವರೆಗೆ ವಾಯು ಪಡೆ ವಿಮಾನಗಳಿಂದ ಗೌರವ ಹಾರಾಟ ನಡೆಯಿತು ಜತೆಗೆ ದೇಶದ ಕರಾವಳಿ ತೀರದುದ್ದಕ್ಕೂ ನಿಂತಿರುವ ಹಡಗುಗಳ ದೀಪಗಳನ್ನು ಬೆಳಗಿಸುವ ಮೂಲಕ ನೌಕಾ ಪಡೆ ವಿಶೇಷ ಗೌರವ ಸಲ್ಲಿಸಿತು.
ಮೂರನೆಯದಾಗಿ ದೇಶದ ಆಸ್ಪತ್ರೆಗಳ ಮೇಲೆ ಹೆಲಿಕಾಪ್ಟರ್‌ಗಳ ಮೂಲಕ ಪುಷ್ಪ ವೃಷ್ಟಿ ಸುರಿಸುವ ಜತೆಗೆ ಬಹುತೇಕ ಜಿಲ್ಲೆಗಳಲ್ಲಿನ ವೈದ್ಯಕೀಯ ಕಟ್ಟಡಗಳ ಹೊರಗೆ ಸೇನಾ ಬ್ಯಾಂಡ್‌ ನುಡಿಸುವ ಮೂಲಕ ಆರೋಗ್ಯ ವೀರರಿಗೆ ವಿಶೇಷ ಕೃತಜ್ಞತೆಯ ಗೌರವ ಸಲ್ಲಿಸಲಾಯಿತು.

ಪ್ರಧಾನಿ ನರೇಂದ್ರ ಮೋದಿಯವರಿಂದ ಶ್ಲಾಘನೆ

ಮೂರು ರಕ್ಷಣಾ ಸೇವೆಗಳ ಮಹತ್ವದ ಕಾರ್ಯವನ್ನು  ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದ್ದಾರೆ.  ಆರೋಗ್ಯ ಯೋಧರು  ಕಾಳಜಿ ವಹಿಸಿದ್ದರಿಂದಲೇ ಭಾರತವು ಕೋವಿಡ್ 19  ವಿರುದ್ಧ ಬಲವಾದ ಹೋರಾಟ ನಡೆಸಿದೆ. ಅವರ ಸೇವೆಯನ್ನು ಎಂದೂ ಮರೆಯಲಾಗದು.  ಭಾರತ  ಆರೋಗ್ಯ ಯೋಧರನ್ನು  ಮತ್ತು ಅವರ ಕುಟುಂಬವನ್ನು ಶ್ಲಾಘಿಸುತ್ತದೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.