ಒಂದು ಟೊಮ್ಯಾಟೋ ಗಿಡ ಅಬ್ಬಬ್ಬಾ ಎಂದರೆ 5 ರಿಂದ 10 ಕೆಜಿ ಇಳುವರಿ ಕೊಡುತ್ತದೆ ಎಂಬುದನ್ನು ಕೇಳಿರಬಹುದು ಅಥವಾ ನೋಡಿರಬಹುದು. ಆದರೆ ಇಲ್ಲೊಂದು ತಳಿಯಿದೆ. ಇದು ಬರೋಬ್ಬರಿ 19 ಕೆಜಿಯವರೆಗೆ ಇಳುವರಿ ನೀಡಿದೆ. ನಂಬಲು ಅಸಾಧ್ಯವಾದರೂ ಇದು ಸತ್ಯ. ಅದು ಯಾವ ತಳಿ ಎಂದುಕೊಂಡಿದ್ದೀರಾ... ಇಲ್ಲಿದೆ ಸಂಪೂರ್ಣ ಮಾಹಿತಿ.
ನಾವು ಇಲ್ಲಿ ಹೇಳುತ್ತಿರುವುದು ಟೊಮ್ಯೋಟಾ ಸಾಧಾರಣ ಗಿಡವಲ್ಲ. ಇದನ್ನು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ಐಐಎಚ್ ಆರ್) ಈ ಹೊಸ ತಳಿಗಳ ಟೊಮ್ಯಾಟೋವನ್ನು ಅಭಿವೃದ್ಧಿ ಪಡಿಸಿದೆ. ಒಂದೇ ಒಂದು ಗಿಡ 19 ಕೆ.ಜಿಯಷ್ಟು ಟೊಮ್ಯಾಟೋ ಉತ್ಪಾದಿಸಿದೆ. ಈ ಹೊಸ ಉತ್ತಮ ಗುಣಮಟ್ಟದ ಟೊಮ್ಯಾಟೊ ತಳಿಗಳ ಹೆಸರು "ARKA RAKSHAK ಇನ್ನೊಂದು ARKA SAMRAT. ಇವರೆಡು ತಳಿಗಳು 19 ಕೆಜಿಗಿಂತಲೂ ಹೆಚ್ಚು ಇಳುವರಿ ಕೊಡುತ್ತದೆ.
ಅರ್ಕಾ ರಕ್ಷಕ್:
ಅಧಿಕ ಇಳುವರಿ ನೀಡುವ ಈ ಹೈಬ್ರಿಡ್ ತಳಿಗೆ ಮೂರು ರೋಗಗಳನ್ನು (ಎಲೆ ಮುರುಟು, ನಂಜುರೋಗ, ದುಂಡು ರೋಗಾಣುವಿನಿಂದ ಸೊರಗು ಹಾಗೂ ಎಲೆಚುಕ್ಕೆರೋಗ) ನಿರೋಧಿಸುವ ಶಕ್ತಿಯಿದೆ. ಮಧ್ಯಮ ಬೆಳವಣಿಗೆಯ ಈ ತಳಿಯುದಟ್ಟಹಸಿರು ಬಣ್ಣದ ಎಲೆಗಳನ್ನು ಹೊಂದಿದ್ದು, ಸೂರ್ಯನ ಕಿರಣಗಳಿಂದ ಕಾಯಿಗಳಿಗೆ ರಕ್ಷಣೆ ನೀಡುತ್ತದೆ. ನಾಟಿ ಮಾಡಿದ 65 ರಿಂದ 70 ದಿನಗಳ ನಂತರ ಮೊದಲ ಕಟಾವು ಮಾಡಬಹುದು. ಹಣ್ಣುಗಳು 80 ರಿಂದ 90 ಗ್ರಾಂ ಸರಾಸರಿ ತೂಕ ಇರುತ್ತದೆ. ಹಣ್ಣುಗಳು ದಟ್ಟ ಕೆಂಪು ಬಣ್ಣದ್ದಾಗಿರುತ್ತವೆ. ಕಟಾವು ಮಾಡಿದ ನಂತರ 20 ರಿಂದ 25 ದಿನಗಳ ವರೆಗೆ ಇಡಬಹುದು. ಎಲ್ಲಾ ಕಾಲದಲ್ಲಿಯೂ ಬೆಳೆಯಲು ಯೋಗ್ಯವಾಗಿದೆ. ಪ್ರತಿ ಹೆಕ್ಟೇರಿಗೆ 75 ರಿಂದ 80 ಟನ್ ಸರಾಸರಿ ಇಳುವರಿಯನ್ನು 140-145 ದಿನಗಳಲ್ಲಿ ನೀಡುತ್ತದೆ.
ಅರ್ಕಾ ಸಾಮ್ರಾಟ್
ಅಧಿಕ ಇಳುವರಿ ನೀಡುವ ಈ ಹೈಬ್ರಿಡ್ ತಳಿಗೆ ಮೂರು ರೋಗಗಳನ್ನು (ಎಲೆ ಮುರುಟು, ನಂಜುರೋಗ, ದುಂಡು ರೋಗಾಣುವಿನಿಂದ ಸೊರಗು ಹಾಗೂ ಎಲೆಚುಕ್ಕೆರೋಗ) ನಿರೋಧಿಸುವ ಶಕ್ತಿಯಿದೆ. ಮಧ್ಯಮ ಬೆಳವಣಿಗೆಯ ಈ ತಳಿಯುದಟ್ಟಹಸಿರು ಬಣ್ಣದ ಎಲೆಗಳನ್ನು ಹೊಂದಿದ್ದು, ಸೂರ್ಯನ ಕಿರಣಗಳಿಂದ ಕಾಯಿಗಳಿಗೆ ರಕ್ಷಣೆ ನೀಡುತ್ತದೆ. ನಾಟಿ ಮಾಡಿದ 65 ರಿಂದ 70 ದಿನಗಳ ನಂತರ ಮೊದಲ ಕಟಾವು ಮಾಡಬಹುದು.
ಹಣ್ಣುಗಳು ಗುಂಡಾಗಿದ್ದು, ಪ್ರತಿ ಹಣ್ಣಿನ ತೂಕ ಸರಾಸರಿ 90 ರಿಂದ 100 ಗ್ರಾಂ ಇರುತ್ತದೆ. ಕಟಾವು ಮಾಡಿದ ನಂತರ 20 ರಿಂದ 25 ದಿನಗಳ ವರೆಗೆ ಇಡಬಹುದು. ಎಲ್ಲಾ ಕಾಲದಲ್ಲಿಯೂ ಬೆಳೆಯಲು ಯೋಗ್ಯವಾಗಿದೆ. ಪ್ರತಿ ಹೆಕ್ಟೇರಿಗೆ 80 ರಿಂದ 85 ಟನ್ ಸರಾಸರಿ ಇಳುವರಿಯನ್ನು 140-145 ದಿನಗಳಲ್ಲಿ ನೀಡುತ್ತದೆ.