News

ಅರ್ಜೆಂಟೀನಾದ ಪತ್ರಕರ್ತೆ, IFAJ ಅಧ್ಯಕ್ಷೆ ಲೀನಾ ಜಾನ್ಸನ್ ಕೃಷಿ ಜಾಗರಣ ಕಛೇರಿಗೆ ಭೇಟಿ ನೀಡಿದರು

16 September, 2022 5:15 PM IST By: Kalmesh T
Argentine journalist, Lina Johnson visited the Krishi Jagran Office

ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ಅಗ್ರಿಕಲ್ಚರಲ್ ಜರ್ನಲಿಸ್ಟ್ಸ್ (IFAJ) ಅಧ್ಯಕ್ಷೆ ಹಾಗೂ ಅರ್ಜೆಂಟೀನಾದ ಪತ್ರಕರ್ತೆ ಲೀನಾ ಜೋಹಾನ್ಸನ್ ,  ಎಲಿಡಾ ಥಿಯೆರಿ ಮತ್ತು ದಕ್ಷಿಣ ಆಫ್ರಿಕಾದ ಪತ್ರಕರ್ತೆ, ನಿರೂಪಕಿ ಮತ್ತು ಸಂವಹನ ತಜ್ಞ ಲಿಂಡಿ ಬೋಥಾ ಅವರೊಂದಿಗೆ  ಕೃಷಿ ಜಾಗರಣದ ಕೇಂದ್ರ ಕಛೇರಿಗೆ ಭೇಟಿ ನೀಡಿದರು.

ಕೃಷಿ ಜಾಗರಣ ಕಚೇರಿಗೆ ಆಗಮಿಸಿದ್ದ ವಿದೇಶಿ ಅತಿಥಿಗಳನ್ನು ಭಾರತೀಯ ಶೈಲಿಯಲ್ಲಿ ಆರತಿ ಮಾಡಿ ಸ್ವಾಗತಿಸಲಾಯಿತು

Indian Federation of agriculture journalism : ಕೃಷಿ ಕ್ಷೇತ್ರದಲ್ಲಿ ಪತ್ರಿಕೋದ್ಯಮದ ಪ್ರಾಮುಖ್ಯತೆಯ ಕುರಿತಾಗಿ ಚರ್ಚೆ ಮಾಡಿದರು. ಇಂಟರ್ ನ್ಯಾಷನಲ್ ಫೆಡರೇಶನ್ ಆಫ್ ಅಗ್ರಿಕಲ್ಚರಲ್ ಜರ್ನಲಿಸ್ಟ್ಸ್ ಪ್ರವಾಸದ ಬಗ್ಗೆ ಯುವ ಪತ್ರಕರ್ತರಿಗೆ ಲೀನಾ ಮಾಹಿತಿ ನೀಡಿದರು .

ಕೃಷಿ ಜಾಗರಣ ಕಚೇರಿಯ ವೇದಿಕೆಯಲ್ಲಿ ಅತಿಥಿಗಳ ಮಾತು-ಕತೆ

ಅಂತೆಯೇ, ಲಿಂಡಿ ಬೋಥಾ ಮತ್ತು ಎಲಿಡಾ ಥಿಯೆರಿ ಕೂಡ ತಮ್ಮ ಸಂಕ್ಷಿಪ್ತ ಮಾಹಿತಿಗಳನ್ನು ಹಂಚಿಕೊಂಡರು.

ಲೀನಾ ಜಾನ್ಸನ್ ಅವರು ಕೃಷಿ ಉದ್ಯಮದಲ್ಲಿ ಎಡಿಟರ್‌ ಇನ್‌ ಚೀಫ್‌ (Editor in Chief) ಆಗಿ ಕೆಲಸ ಮಾಡಿದ ಅನುಭವವನ್ನು ಹೊಂದಿದ್ದಾರೆ.

ಇದರ ಜೊತೆಗೆ, ಲೀನಾ ಅವರು ಛಾಯಾಗ್ರಹಣ, ಸುದ್ದಿ ಬರವಣಿಗೆ, ಬಿಕ್ಕಟ್ಟು ಸಂವಹನ, ಈವೆಂಟ್ ಮ್ಯಾನೇಜ್ಮೆಂಟ್ ಮತ್ತು ಎಡಿಟಿಂಗ್‌ನಲ್ಲೂ ಪರಿಣಿತಿಯನ್ನು ಪಡೆದುಕೊಂಡಿದ್ದಾರೆ.

ವಿದೇಶದಿಂದ ಆಗಮಿಸಿದ ಪತ್ರಕರ್ತ ಅತಿಥಿಗಳಿಗಾಗಿ ಕೃಷಿ ಜಾಗರಣ ಕಚೇರಿಯಲ್ಲಿ ಭಾರತೀಯ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು

ಲೀನಾ ಜಾನ್ಸನ್ ಅವರು ಇತ್ತೀಚೆಗೆ ಅಗ್ರಿಕಲ್ಚರ್ ಜರ್ನಲಿಸ್ಟ್ ಅಸೋಸಿಯೇಷನ್ ಆಫ್ ಇಂಡಿಯಾದ (AJAI) ಅಧಿಕೃತ ವೆಬ್‌ಸೈಟ್ ಮತ್ತು ಲೋಗೋವನ್ನು ಬಿಡುಗಡೆ ಮಾಡಿದರು. ಇದನ್ನು ಕೃಷಿ ಜಾಗೃತಿಯ ಪರವಾಗಿ ಪ್ರಾರಂಭಿಸಲಾಯಿತು.

ಕೃಷಿ ಜಾಗರಣ ಸಿಬ್ಬಂದಿಗಳೊಂದಿಗೆ ಅತಿಥಿಗಳು ಮಾತನಾಡುತ್ತಿರುವುದು

ವಿದೇಶದಿಂದ ಆಗಮಿಸಿದ್ದ ಅತಿಥಿಗಳನ್ನು ಕೃಷಿ ಜಾಗರಣ ಕಚೇರಿ ಸಿಬ್ಬಂದಿಯ ಪರವಾಗಿ ಸ್ವಾಗತಿಸಲಾಯಿತು. ಕೆ.ಜೆ. ಚೌಪಾಲ್‌ ವೇದಿಕೆಯಲ್ಲಿ ಕಾರ್ಯಕ್ರಮದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಅತಿಥಿಗಳೊಂದಿಗೆ ಸಿಬ್ಬಂದಿ ತಂಡ

ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ರಾಜ್ಯಗಳ ನೃತ್ಯಗಳನ್ನು ಪ್ರಸ್ತುತಪಡಿಸಲಾಯಿತು.  

ಕೃಷಿ ಜಾಗರಣ ಮಾಧ್ಯಮ ಸಂಸ್ಥೆಯ ನಿರ್ದೇಶಕಿ ಶೈನಿ ಡೊಮೆನಿಕ್‌ ಅವರು ಪತ್ರಕರ್ತೆ ಲಿಂದಿ ಬೋತಾ ಅವರಿಗೆ ಭಾರತೀಯ ಕಿವಿಯೋಲೆ ತೊಡಿಸುತ್ತಿರುವ ಸುಂದರ ಕ್ಷಣ...