News

ಅಡಿಕೆ ಬೆಲೆಯಲ್ಲಿ ಹೆಚ್ಚಳ, ಲಾಕ್ಡೌನ್ ವರವಾಯಿತು ಅಡಿಕೆ ಬೆಳೆಗಾರರಿಗೆ

20 August, 2020 2:55 PM IST By:

ಲಾಕ್​ಡೌನ್ ಘೋಷಣೆಯಾದ ಬಳಿಕ ಎಲ್ಲಾ ವಲಯಗಳಲ್ಲಿ ನಷ್ಟವಾದರೆ ಕೃಷಿ ಉದ್ಯಮಕ್ಕೆ ಮಾತ್ರ ಅಷ್ಟೋಂದು ಹಾನಿಯಾಗಿಲ್ಲ. ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದಾಗಿ ಕೆಲವು ಬೆಳೆಗಳಿಗೆ ಹಾನಿಯಾಗುತ್ತಿರುವುದು ಹೊರತುಪಡೆಸಿದರೆ ಹೇಳಿಕೊಳ್ಳುವಷ್ಠು ಕೃಷಿ ವಲಯಕ್ಕೆ ಹಾನಿಯಾಗಿಲ್ಲ. ಮಾರುಕಟ್ಟೆಯಲ್ಲಿ ತರಕಾರಿ ಸೇರಿದಂತೆ ವಾಣಿಜ್ಯ ಬೆಳೆಗಳಿಗೂ ಉತ್ತಮ  ಬೆಲೆಯಿದೆ. ವಿಶೇಶವಾಹಗಿ ಅಡಿಕೆಗೆ (Arecanut ) ಬಂಗಾರದ ಬೆಲೆ  ಬರುತ್ತಿದ್ದರಿಂದ ರೈತರು ಖುಷ್ ಆಗಿದ್ದಾರೆ.

ಚಾಲಿ ಅಡಕೆಗೀಗ ಬಂಗಾರದ ಬೆಲೆ ಬಂದಿದೆ. ದಿನದಿಂದ ದಿನಕ್ಕೆ ಬೆಲೆ ನಾಗಾಲೋಟದಲ್ಲಿ ಏರುತ್ತಿದೆ. ಆದರೆ ಬಹುತೇಕ ರೈತರು ಈಗಾಗಲೇ ತಮ್ಮ ಬಳಿಯಿದ್ದ ಬಹುತೇಕ ದಾಸ್ತಾನನ್ನು ಕಡಿಮೆ ಬೆಲೆಗೆ ಕೊಟ್ಟು ಖಾಲಿ ಮಾಡಿಕೊಂಡಿದ್ದು, ಕೈ ಕೈ ಹಿಸುಕಿಕೊಳ್ಳುವಂತಾಗಿದೆ.

ಲಾಕ್ಡೌನ್ ನಿಂದಾಗಿ  ಈ ಹಿಂದೆ ಇಂಡೋನೇಷ್ಯಾ, ಬರ್ಮಾ, ನೇಪಾಳ, ಬಾಂಗ್ಲಾದೇಶಗಳಿಂದ ಈಶಾನ್ಯ ರಾಜ್ಯಗಳ ಗಡಿಗಳ ಮೂಲಕ ವ್ಯಾಪಕ ಪ್ರಮಾಣದ ಅಡಿಕೆ ಅಕ್ರಮವಾಗಿ (Import) ಆಮದಾಗುತ್ತಿತ್ತು. ಈ ಕಳ್ಳ ಸಾಗಾಟದಿಂದಲೇ ಇದುವರೆಗೆ ದೇಶದ ಅಡಿಕೆ ಬೆಳೆಗೆ ಮಾರುಕಟ್ಟೆಯಲ್ಲಿ ಧಾರಣೆ ಏರುತ್ತಿರಲಿಲ್ಲ. ಆದರೆ ಕೊರೋನಾ ಲಾಕ್‌ಡೌನ್‌ ಕಾರಣಕ್ಕೆ ಎಲ್ಲ ಗಡಿಗಳು ಬಂದ್‌ ಆಗಿದ್ದರಿಂದ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿದೆ.

ಇದರಿಂದಾಗಿ ಸ್ಥಳೀಯ ಅಡಿಕೆಗೆ ಭಾರೀ ಬೇಡಿಕೆ ಬಂದಿದೆ. ಅಡಿಕೆಯನ್ನು ಮಾರದೆ, ತಮಲ್ಲಿಯೇ ಉಳಿಸಿಕೊಂಡಿದ್ದ ಅಡಿಕೆ ಬೆಳೆಗಾರರಿಗೆ ಈಗ ಬಂಗಾರದ ಬೆಲೆ ಸಿಕ್ಕಿದೆ. ಅಡಿಕೆ ದರ ಇತಿಹಾಸದಲ್ಲೇ ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಕಳೆದ ಐದು ವರ್ಷಗಳಲ್ಲಿ ಏರಿಕೆಯಾಗದ ಅಡಿಕೆ ದರ ಈ ಬಾರಿ ದಾಖಲೆ ಪ್ರಮಾಣದಲ್ಲಿ (Price Hike) ಏರಿಕೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆಯನ್ನು ಪ್ರಮುಖ ವಾಣಿಜ್ಯ ಬೆಳೆಯಾಗಿ ಬೆಳೆಯಲಾಗುತ್ತದೆ. ಇದೀಗ ಈ ವಾಣಿಜ್ಯ ಬೆಳೆ ಅಡಿಕೆಗೆ ಬಂಗಾರದ ಬೆಲೆ ಲಭಿಸುತ್ತಿದೆ. . ಈ ಹಿಂದೆ ಕೆ.ಜಿ.ಗೆ 200ರಿಂದ 250 ರೂ.ಗೆ ಖರೀದಿಯಾಗುತ್ತಿದ್ದ ಅಡಿಕೆಗೆ ಈಗ 400 ರೂಪಾಯಿಯವರೆಗೆ ಖರೀದಿಯಾಗುತ್ತದೆ.  ಕ್ಯಾಂಪ್ಕೊ ಶಾಖೆಗಳಲ್ಲಿ ಹೊಸ ಅಡಿಕೆ ದರ 360 ರೂ.ಗೆ ಖರೀದಿ ಆಗಿದೆ. ಇದೇ ವೇಳೆ ಹಳೆ ಅಡಿಕೆಗೆ 390 ರೂ.ವರೆಗೆ ದರ ಏರಿದೆ. ಇತ್ತ ಖಾಸಗಿ ವಲಯದಲ್ಲಿ ಹಳೇ ಅಡಿಕೆಗೆ 400ರಿಂದ 410 ರೂಪಾಯಿಯವರೆಗೂ ಖರೀದಿ ಆಗಿದೆ.