Morarji Desai Residential School Admission : ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕಾಗಿ ವಿದ್ಯಾರ್ಥಿಗಳಿಂದ 2023-24ನೇ ಸಾಲಿಗೆ ಅರ್ಜಿ ಅಹ್ವಾನಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ಮೇ.13 ರೊಳಗಾಗಿ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.
Morarji Desai Residential School Admission: ಧಾರವಾಡ ಜಿಲ್ಲೆಯಲ್ಲಿನ 04 ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ 6ನೇ ತರಗತಿ (ಆಂಗ್ಲ ಮಾಧ್ಯಮ) ಪ್ರವೇಶಕ್ಕಾಗಿ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಂದ 2023-24ನೇ ಸಾಲಿಗೆ ಅರ್ಜಿ ಅಹ್ವಾನಿಸಲಾಗಿದೆ.
5ನೇ ತರಗತಿ ಪಾಸಾದ ಅಲ್ಪಸಂಖ್ಯಾತ ಸಮುದಾಯದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧ ಮತ್ತು ಪಾರ್ಸಿ ವಿದ್ಯಾರ್ಥಿಗಳಿಗೆ ಶೇ.75 ಹಾಗೂ ಪರಿಶಿಷ್ಠ ಜಾತಿ, ಪರಿಶಿಷ್ಠ ವರ್ಗ ಹಾಗೂ ಇತರೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ (ಒಬಿಸಿ) ಶೇ.25 ಸೀಟು ಲಭ್ಯವಿದೆ.
ಜಿಲ್ಲೆಯ ಹುಬ್ಬಳ್ಳಿ ತಾಲ್ಲೂಕು, ಅಂಚಟಗೇರಿ ಗ್ರಾಮದಲ್ಲಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ನಂ.01 ಮತ್ತು ನಂ.02 ಹಾಗೂ ಧಾರವಾಡ ಗ್ರಾಮೀಣ,
ಹಾಗೂ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಹೆಣ್ಣುಮಕ್ಕಳ ವಸತಿ ಶಾಲೆ ಧಾರವಾಡ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪ್ರವೇಶಕ್ಕಾಗಿ ಆಸಕ್ತ ವಿದ್ಯಾರ್ಥಿಗಳು ಮೇ.13 ರೊಳಗಾಗಿ ಅರ್ಜಿ ಸಲ್ಲಿಸಬಹುದು.
ವಸತಿ ಶಾಲೆಗಳಲ್ಲಿ ಉಚಿತ ಊಟ, ವಸತಿ, ಪಠ್ಯಪುಸ್ತಕ, ಲೇಖನ ಸಾಮಗ್ರಿ, ಸಮವಸ್ತ್ರಗಳೊಂದಿಗೆ ಇನ್ನಿತರೇ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುವುದು.
ಪ್ರವೇಶ ಬಯಸುವ ಅಲ್ಪಸಂಖ್ಯಾತರ ಮತ್ತು ಇತರೇ ಪ್ರವರ್ಗಗಳ ಆಸಕ್ತ ವಿದ್ಯಾರ್ಥಿಗಳು ಸಂಬಂಧಿಸಿದ ಸೇವಾ ಸಿಂಧು ಪೋರ್ಟಲ್ ಲಿಂಕ್ https://sevasindhuservices.karnataka.gov.in ಮೂಲಕ ಆನ್‍ಲೈನ್ ಅರ್ಜಿಗಳನ್ನು ಸಲ್ಲಿಸಬಹುದು.
ಉಚಿತ ಸೇವೆ ಪಡೆಯಲು ಸಮೀಪದ ಜಿಲ್ಲಾ ಅಲ್ಪಸಂಖ್ಯಾತರ ಕಚೇರಿ ಅಥವಾ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಅಥವಾ ತಾಲ್ಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳಿಗೆ ಭೇಟಿ ನೀಡಬಹುದು.
ಹೆಚ್ಚಿನ ವಿವರಗಳಿಗಾಗಿ ಕೇಂದ್ರ ಕಛೇರಿ ಸಹಾಯವಾಣಿ-8277799990, ಜಿಲ್ಲಾ ಕಚೇರಿ ಸಹಾಯವಾಣಿ ಧಾರವಾಡ-0836-2971590, ಪ್ರಾಂಶುಪಾಲರು, ಅಂಚಟಗೇರಿ
ನಂ.01- 8618429474, ಅಂಚಟಗೇರಿ ನಂ.02–9448054139, ಧಾರವಾಡ ಗ್ರಾಮೀಣ–8497847789, ಧಾರವಾಡ-9448054139, ತಾಲ್ಲೂಕು, ವಿಸ್ತರಣಾಧಿಕಾರಿಗಳ ಕಚೇರಿ ಧಾರವಾಡ- 0836-2971590, ತಾಲ್ಲೂಕು, ವಿಸ್ತರಣಾಧಿಕಾರಿಗಳ, ಕಚೇರಿ ಹುಬ್ಬಳ್ಳಿ-0836-2244261-9632521972 ಹಾಗೂ
ಅಲ್ಪಸಂಖ್ಯಾತರ ತಾಲ್ಲೂಕಾ ಮಾಹಿತಿ ಕೇಂದ್ರಗಳು: ಅಲ್ಪಸಂಖ್ಯಾತರ ತಾಲ್ಲೂಕಾ ಮಾಹಿತಿ ಕೇಂದ್ರ ಧಾರವಾಡ-9738287549, ಅಲ್ಪಸಂಖ್ಯಾತರ ತಾಲ್ಲೂಕಾ ಮಾಹಿತಿ ಕೇಂದ್ರ ಹುಬ್ಬಳ್ಳಿ-8867718261, ಅಲ್ಪಸಂಖ್ಯಾತರ ತಾಲ್ಲೂಕಾ ಮಾಹಿತಿ ಕೇಂದ್ರ ನವಲಗುಂದ-8746894524, ಅಲ್ಪಸಂಖ್ಯಾತರ ತಾಲ್ಲೂಕಾ ಮಾಹಿತಿ
ಕೇಂದ್ರ ಕಲಘಟಗಿ-8951674107, ಅಲ್ಪಸಂಖ್ಯಾತರ ತಾಲ್ಲೂಕಾ ಮಾಹಿತಿ ಕೇಂದ್ರ ಕುಂದಗೋಳ-8904661872 ಕಚೇರಿಗಳನ್ನು ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.