News

ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ದಿ ನಿಗಮದಲ್ಲಿ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

20 August, 2020 9:32 AM IST By:

ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದಿಂದ 2020-21ನೇ ಸಾಲಿನಲ್ಲಿ ಸ್ವಯಂ ಉದ್ಯೋಗಕ್ಕಾಗಿ (Self Employee) ಈ ಕೆಳಕಂಡ ಯೋಜನೆಗಳಡಿ ಸಾಲ ಸೌಲಭ್ಯ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ಪ್ರಕಟಣೆಯಲ್ಲಿ ತಿಳಿಸಿದೆ.

ರಾಜ್ಯ ಸರ್ಕಾರದ ವಿವಿಧ ಯೋಜನೆಗಳಾದ ಪಂಚವೃತ್ತಿ ಅಭಿವೃದ್ದಿಗಾಗಿ ಆರ್ಥಿಕ ನೆರವು,  ಸ್ವಯಂ ಉದ್ಯೋಗ ನೇರಸಾಲ ಯೋಜನೆ, ಬ್ಯಾಂಕ್‍ಗಳ ಸಹಯೋಗದೊಂದಿಗೆ ಸ್ವಯಂ ಉದ್ಯೋಗ ಸಾಲ,  ಅರಿವು-ಶೈಕ್ಷಣಿಕ ಸಾಲ ಯೋಜನೆ, ಗಂಗಾ ಕಲ್ಯಾಣ ವೈಯಕ್ತಿಕ ನೀರಾವರಿ ಯೋಜನೆ,  ಮಹಿಳೆಯರಿಗೆ ಮೈಕ್ರೋ ಕ್ರೆಡಿಟ್ (Micro credit loan) ಸಾಲ ಯೋಜನೆ ಹಾಗೂ ಕಮ್ಮಾರಿಕೆ, ಅಕ್ಕಸಾಲಿ ಮತ್ತು ಬಡಗಿ ಉದ್ಯಮಿಗಳಿಗೆ ತರಬೇತಿ ಮತ್ತು ಸಾಲ ಯೋಜನೆಗಳಡಿ ಅರ್ಜಿ  ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ವಿಶ್ವಕರ್ಮ ಸಮುದಾಯ ಹಾಗೂ ಅದರ ಉಪ ಜಾತಿಗಳಿಗೆ ಸೇರಿದವರಾಗಿರಬೇಕು.  ವಯೋಮಿತಿ 18 ರಿಂದ 55 ವರ್ಷದೊಳಗಿರಬೇಕು.

 ಅರ್ಹ ಅಭ್ಯರ್ಥಿಗಳು ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ದಿ ನಿಗಮದ ಆಯಾ ಜಿಲ್ಲಾ ವ್ಯವಸ್ಥಾಪಕರ ಕಚೇರಿಯಿಂದ ಉಚಿತವಾಗಿ ಅರ್ಜಿ  ನಮೂನೆಯನ್ನು 2020ರ ಆಗಸ್ಟ್ 31 ರೊಳಗಾಗಿ ಪಡೆಯಬೇಕು.  ಅಥವಾ ನಿಗಮದ www.karnataka.gov.in/kvcdcl  ವೆಬ್‍ಸೈಟ್‍ದಿಂದ ಪಡೆದು  ಭರ್ತಿ ಮಾಡಿದ (Application) ಅರ್ಜಿಯೊಂದಿಗೆ  ಅಗತ್ಯ ದಾಖಲೆಗಳನ್ನು ಲಗತ್ತಿಸಿ ಸೆಪ್ಟೆಂಬರ್ 16 ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ನಿಗಮದ ಕಚೇರಿಯನ್ನು ಅಥವಾ ನಿಗಮದ   ವೆಬ್‍ಸೈಟ್‍ನ್ನು ಸಂಪರ್ಕಿಸಲು ಕೋರಲಾಗಿದೆ.