News

ಮತ್ಸ್ಯ ಸಂಪದ ಸಹಾಯಧನಕ್ಕೆ ಅರ್ಜಿ ಆಹ್ವಾನ: ಅರ್ಜಿ ಸಲ್ಲಿಕೆಗೆ ಜುಲೈ 16 ಕೊನೆ ದಿನ

19 June, 2023 3:47 PM IST By: Kalmesh T
Applications invited for Fisheries Subsidy: July 16 is the last date for submission

Applications invited for Fisheries Subsidy: ಬೀದರ್- ಮೀನುಗಾರಿಕೆ ಇಲಾಖೆಯಿಂದ 2022-23ನೇ ಸಾಲಿನಲ್ಲಿ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ರಾಜ್ಯ ವಲಯ ಹಾಗೂ ಜಿಲ್ಲಾ ವಲಯ ರೈತರು, ಮೀನುಗಾರರು ಹಾಗೂ ಮೀನು ಕೃಷಿಕರಿಂದ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಯೋಜನೆಗಳ ವಿವರ:

ಮೀನು ಕೃಷಿಕೊಳ ನಿರ್ಮಾಣ, ಮೀನು ಮರಿ ಪಾಲನಾ ಕೇಂದ್ರಗಳ ನಿರ್ಮಾಣ, ಮೀನುಮರಿ ಉತ್ಪಾದನಾ ಕೇಂದ್ರಗಳ ನಿರ್ಮಾಣ, ಒಳನಾಡು ಮತ್ತು ಹಿನ್ನೀರು ಮೀನು, ಸಿಗಡಿ ಕೃಷಿ ಕೊಳಗಳ ನಿರ್ಮಾಣಕ್ಕೆ ಸಹಾಯ,

ಒಳನಾಡು ಮತ್ತು ಹಿನ್ನೀರು ಪ್ರದೇಶಗಳಲ್ಲಿ ಬಯೋಫ್ಲಾಕ್ ಆರ್.ಎ.ಎಸ್‌. ತಂತ್ರಜ್ಞಾನ ಬಳಿಸಿ ಮೀನು ಸೀಗಡಿ ಕೃಷಿ ಕೊಳಗಳ ನಿರ್ಮಾಣಕ್ಕೆ, ಮೀನು ಸಾಗಾಟಕ್ಕಾಗಿ ಇನ್ಸುಲೇಟೆಡ್ ಟ್ರಕ್ ಖರೀದಿ,

ಮೀನು ಮಾರಾಟಕ್ಕಾಗಿ ಉಪಯೋಗಿಸುವ ದ್ವೀಚಕ್ರ, ತ್ರಿಚಕ, ವಾಹನ ಖರೀದಿಗಾಗಿ ಸಹಾಯಧನ, ಮೀನು ಮಾರಾಟ ಕಿಯೋಸ್ಕ್‌ ಸ್ಥಾಪನೆ ಸಹಾಯ, ಜೀವಂತ ಮೀನು ಮಾರಾಟ ಕೇಂದ್ರಗಳ ನಿರ್ಮಾಣ, ಐಸ್ ಪ್ಲಾಂಟ್ ಮತ್ತು ಕೋಲ್ಡ್‌ ಸ್ಟೋರೇಜ್ ಘಟಕ ಮತ್ತು ಮನ‌ ನಿರ್ಮಾಣ ಸಹಾಯಧನ,

ಅಲಂಕಾರಿಕಾ ಮೀನುಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಸಹಾಯ ಸೇರಿದಂತೆ ಇತರೆ ಯೋಜನೆಗಳು, ರಾಜ್ಯವಲಯ ಯೋಜನೆಯಡಿ ಮತ್ತು ಜಿಲ್ಲಾ ವಲಯ ಯೋಜನೆಯಡಿ

ಸಾಮಾನ್ಯ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮೀನುಗಾರರಿಗೆ ಮೀನುಗಾರಿಕೆ ಒಲೆ, ಸಲಕರಣಿ ಕಿಟ್ (ಐಸ್ ಬಾಕ್ಸ್, ತಕ್ಕಡಿ, ಜೀವರಕ್ಷಕ ಸಾಮಾಗ್ರಿಗಳು ಇತ್ಯಾದಿ) ವಿತರಣೆ ಯೋಜನೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಹ ಮೀನುಗಾರರು ಮತ್ತು ಮೀನು ಕೃಷಿಕರು ಅಗತ್ಯ ದಾಖಲೆಗಳೊಂದಿಗೆ ಮೀನುಗಾರಿಕೆ ಇಲಾಖೆಯ ತಾಲೂಕು ಮಟ್ಟದ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಜುಲೈ 16 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.