ಸಾರ್ವಜನಿಕ ಶಿಕ್ಷಣ ಇಲಾಖೆಯು 2020-21ನೇ ಶೈಕ್ಷಣಿಕ ಸಾಲಿಗೆ 2 ವರ್ಷಗಳ ಬಿ.ಇಡಿ ಕೋರ್ಸಿನ ವ್ಯಾಸಂಗಕ್ಕೆ ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಿಸಲಾಗಿದೆ.ರಾಜ್ಯದ ಸರ್ಕಾರಿ ಹಾಗೂ ಮಾನ್ಯತೆ ಪಡೆದ ಅನುದಾನಿತ ಹಾಗೂ ಅನುದಾನರಹಿತ ಕಾಲೇಜುಗಳಲ್ಲಿನ ಸರ್ಕಾರಿ ಕೋಟಾದ ಸೀಟುಗಳ ದಾಖಲಾತಿಗೆ ಆನ್‌ಲೈನ್ ಮೂಲಕ ಸಾರ್ವಜನಿಕ ಶಿಕ್ಷಣ ಇಲಾಖೆ ವೆಬ್‌ಸೈಟ್‌ನಲ್ಲಿ (www.schooleducation.kar.nic.in) ಅರ್ಜಿ ಸಲ್ಲಿಸಬಹುದು.
B.ed ಕೋರ್ಸು ಗಳಿಗಾಗಿ ಪ್ರವೇಶಾತಿಯನ್ನು ಕರೆಯಲಾಗಿತ್ತು. ಹಾಗೂ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 26-01-2021 ರಂದು ನಿಗದಿಪಡಿಸಿತ್ತು.ಈ ಗಡುವಿನ ದಿನಾಂಕವನ್ನು ವಿಸ್ತರಿಸಲಾಗಿದೆ.
ಆದರಿಂದ ಆಸಕ್ತಿವುಳ್ಳ ಅಭ್ಯರ್ಥಿಗಳು ಯಾರು ಅರ್ಜಿ ಸಲ್ಲಿಸದೇ ಅವಕಾಶವಂಚಿತರಾಗಿದ್ದರು, ಅಂಥವರಿಗಾಗಿ ಸಂತಸದ ಸುದ್ದಿ ಇಲ್ಲಿದೆ. ಬಿ.ಎಡ್. ಕೋರ್ಸ್ ಗಳಿಗಾಗಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ.
ಬಿ.ಎಡ್. ಪ್ರವೇಶಾತಿಗಾಗಿ ಅರ್ಜಿಸಲ್ಲಿಸಲು ಕೊನೆಯ ದಿನಾಂಕ: 31-01-2021 ಆಸಕ್ತ ವಿದ್ಯಾರ್ಥಿಗಳು ಸದುಪಯೋಗವನ್ನು ಬಳಸಿಕೊಂಡು ಬೇಗನೆ ಆನ್ಲೈನ್ ಮುಖಾಂತರ ಬಿ.ಎಡ್.ಕೋರ್ಸಿನ ಪ್ರವೇಶಾತಿಗಾಗಿ ಅರ್ಜಿಯನ್ನು ಸಲ್ಲಿಸಬೇಕಾಗಿ ವಿನಂತಿ.
ಅರ್ಜಿ ಶುಲ್ಕ: ಸಾಮಾನ್ಯ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ – 300 ರೂಪಾಯಿ, ಎಸ್ಸಿ,ಎಸ್ಟಿ ಅಭ್ಯರ್ಥಿಗಳಿಗೆ - 100 ರೂಪಾಯಿ ಶುಲ್ಕವಿದೆ.
ಬಿ.ಎಡ್. ಪ್ರವೇಶಾತಿಗಾಗಿ ಅರ್ಜಿ ಸಲ್ಲಿಸುವುದು ಹೇಗೆ?
https://sts.karnataka.gov.in/GPSTRHK/ ಈ ಲಿಂಕ್ ಮುಖಾಂತರ ರಿಜಿಸ್ಟರ್ ಆಗಿ ಇದೇ ವೆಬ್ಸೈಟ್ನಲ್ಲಿ ನೀವು ನಿಮ್ಮ ಅರ್ಜಿಯನ್ನು ಸಲ್ಲಿಸಬಹುದು.