News

Applications invited : 45 ದಿನಗಳ ಕೈಮಗ್ಗ ನೇಯ್ಗೆ ತರಬೇತಿಗಾಗಿ ಅರ್ಜಿ ಅಹ್ವಾನ

28 August, 2023 6:05 PM IST By: Kalmesh T
Applications invited for 45 Days Handloom Weaving Training

ದಾವಣಗೆರೆ : 2023-24 ನೇ ಸಾಲಿನ ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ಜಿಲ್ಲಾವಲಯ ಯೋಜನೆಯಡಿ 45 ದಿನಗಳ ಕೈಮಗ್ಗ ನೇಯ್ಗೆ ತರಬೇತಿಗಾಗಿ ಜಿಲ್ಲೆಯ ಗ್ರಾಮೀಣ ಮತ್ತು ನಗರ ಪ್ರದೇಶದ ನಿರುದ್ಯೋಗಿ ಯುವಕ, ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ.

18-35 ವರ್ಷ ವಯೋಮಾನದವರಾಗಿ 5ನೇ ತರಗತಿ ವ್ಯಾಸಂಗ ಮಾಡಿರಬೇಕು. ಆಸಕ್ತರು  ಅರ್ಜಿ ನಮೂನೆಯೊಂದಿಗೆ ವಿದ್ಯಾರ್ಹತೆ ದಾಖಲಾತಿ, ನಿವಾಸಿ ದೃಢೀಕರಣ, ರೇಷನ್ ಕಾರ್ಡ್, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್‍ಬುಕ್ ಹಾಗೂ ಭಾವಚಿತ್ರದೊಂದಿಗೆ ಅರ್ಜಿಯನ್ನು ಭರ್ತಿ ಮಾಡಿ ಕೈಮಗ್ಗ ನೇಕಾರರ ಸಹಕಾರ ಸಂಘಗಳ ಕಾರ್ಯದರ್ಶಿಗಳಿಗೆ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನವಾಗಿರುತ್ತದೆ.

ಆಯ್ಕೆಯಾದ ಅಭ್ಯರ್ಥಿಗಳಿಗೆ ನೋಂದಣಿಯಾದ ಕೈಮಗ್ಗ ನೇಕಾರರ ಸಹಕಾರ ಸಂಘಗಳ ಮೂಲಕ ಕೈಮಗ್ಗ ನೇಯ್ಗೆ ತರಬೇತಿಯನ್ನು ನೀಡಲಾಗುವುದು.

ತರಬೇತಿ ಪಡೆದ ನಂತರ ಕೈಮಗ್ಗ ನೇಕಾರರ ಸಹಕಾರ ಸಂಘಗಳಲ್ಲಿ ಉದ್ಯೋಗ ಪಡೆಯಲು ಅವಕಾಶವಿರುತ್ತದೆ.

ಅರ್ಜಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಕಾರ್ಯದರ್ಶಿ, ಪಟ್ಟಸಾಲೆ ಕೈಮಗ್ಗ ನೇಕಾರರ ಉತ್ಪಾದನೆ ಮತ್ತು ಮಾರಾಟ ಸಹಕಾರ ಸಂಘನಿ, ಶ್ರೀರಾಮ ಬಡಾವಣೆ, (ನೇಕಾರಕಾಲೋನಿ) ಕೊಂಡಜ್ಜಿ ರಸ್ತೆ, ಮೊ.9743426985, ಕಾರ್ಯದರ್ಶಿ,

ಮಾರ್ಕಂಡೇಯ ಹತ್ತಿ ಕೈಮಗ್ಗ ನೇಕಾರರ ಸಹಕಾರ ಸಂಘನಿ, ಮೇನ್ರೋಡ್, ಗುತ್ತೂರು. ಮೊ.9916039303, ಅಧ್ಯಕ್ಷರು/ಕಾರ್ಯದರ್ಶಿ,

ಶ್ರೀರೇಣುಕ ಕೈಮಗ್ಗ ನೇಕಾರರ ವಿವಿದೋದ್ದೇಶ ಮತ್ತು ಅಭಿವೃದ್ಧಿ ಸಹಕಾರ ಸಂಘ ನಿ, ವಿಜಯನಗರ ಬಡಾವಣೆ, ಕೊಂಡಜ್ಜಿ ರಸ್ತೆ, ಮೊ. 9449364823, ಕಾರ್ಯದರ್ಶಿ, ಹತ್ತಿ ಕೈಮಗ್ಗ ನೇಕಾರರ ಸಹಕಾರ ಸಂಘನಿ, ಸುರಹೊನ್ನೆ,

ನ್ಯಾಮತಿ ತಾಲ್ಲೂಕು. ಮೊ.9916300206 ನೇಕಾರರ ಸಹಕಾರ ಸಂಘಗಳನ್ನು ಕಚೇರಿ ಸಮಯದಲ್ಲಿ ಸಂಪರ್ಕಿಸಲು ಜಿಲ್ಲಾ ಪಂಚಾಯತ್, ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕ ಶಿವಲಿಂಗಪ್ಪ ಎನ್ ಕುಂಬಾರ ತಿಳಿಸಿದ್ದಾರೆ.

ಕೆಡಿಪಿ ಸಭೆ : ಕೃಷಿ ಸಂಬಂಧಿ, ನೀರಾವರಿ ಇಲಾಖೆ, ಪಶುಪಾಲನಾ ಇಲಾಖೆ ಕುರಿತು ಚರ್ಚೆ