News

ಉದ್ಯೋಗ ಖಾತ್ರಿ ಯೋಜನೆಯಡಿ ತೋಟಗಾರಿಕೆಗೆ ಸಹಾಯಧನ ಪಡೆಯಲು ಅರ್ಜಿ ಆಹ್ವಾನ

09 November, 2020 11:05 AM IST By:

ಉದ್ಯೋಗ ಖಾತ್ರಿ ಯೋಜನೆಯಡಿ ಚಿತ್ರದುರ್ಗದಲ್ಲಿ ತೋಟಗಾರಿಕೆ ಬೆಳೆಗಳಿಗೆ ಸಂಬಂಧಿಸಿದ ವಿವಿಧ ಕಾಮಗಾರಿಗಳಿಗೆ ಸಹಾಯ ಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ತೋಟಗಾರಿಕೆ ಬೆಳೆಗಳ ವಿಸ್ತರಣೆ, ಮಣ್ಣು ಮತ್ತು ನೀರು ಸಂರಕ್ಷಣೆಗೆ ಸಂಬಂಧಿಸಿದ ಕಾಮಗಾರಿಗೆ ಅರ್ಜಿ ಸಲ್ಲಿಸಬಹುದು. ತೆಂಗು, ಮಾವು, ಸಪೋಟ, ದಾಳಿಂಬೆ, ಸೀಬೆ, ನಿಂಬೆ, ಹುಣಸೆ, ನುಗ್ಗೆ, ನೇರಳೆ, ಕಾಳುಮೆಣಸು ಮತ್ತು ಮಲ್ಲಿಗೆ ಹೂ ಬೆಳೆ ಸಂಬಂಧಿಸಿದ ಕಾಮಗಾರಿ, ಕೊಳವೆಬಾವಿ ಮರುಪೂರಣ, ಬದು ನಿರ್ಮಾಣ, ಕಾಮಗಾರಿಗಳಿಗೆ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗೆ 08194–231480ಗೆ  ಕರೆ ಮಾಡಿ ಸಂಪರ್ಕಿಸಬಹುದು.

ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ತೋಟಗಾರಿಕೆ ಬೆಳೆಗಳಿಗೆ ಉತ್ತೇಜನ ನೀಡಲು ಸರ್ಕಾರದ ವತಿಯಿಂದ ಹಲವಾರು ಕಾಮಗಾರಿ ಕೈಗೊಂಡು ರೈತಬಾಂಧವರು ಇದರ ಸದುಪಯೋಗ ಪಡೆದುಕೊಳ್ಳಬಹುದು. ತೋಟಗಾರಿಕೆ ಬೆಳೆ ವಿಸ್ತರಣೆ ಮಾಡಬಹುದು. ನಿಮ್ಮ ಹೊಲದಲ್ಲಿ ಮಣ್ಣು ಸಂರಕ್ಷಣೆ ಮಾಡಬಹುದು. ತೋಟಗಾರಿಕೆ ಬೆಳೆ ಕಾಮಗಾರಿಗಳನ್ನು ಸಹ ಕೈಗೊಳ್ಳಬಹುದು. ಅಷ್ಟೇ ಅಲ್ಲ ಬದು ನಿರ್ಮಾಣಕ್ಕೂ ಸಹ ಸಹಾಯಧನ ನೀಡಲಾಗುವುದು.

ತೋಟಾಗಾರಿಕೆ ಮಾಡುವ ರೈತಬಾಂಧವರು ಮೇಲೆ ತಿಳಿಸಿದ ನಂಬರಿಗೆ ಕರೆ ಮಾಡಿ ಅರ್ಜಿ ಸಲ್ಲಿಸುವ ವಿಧಾನ ಸೇರಿದಂತೆ ಇತರ ಮಾಹಿತಿ ಪಡೆದುಕೊಳ್ಳಬೇಕು. ಅಥವಾ ನಿಮ್ಮ ಹತ್ತಿರದ ತೋಟಾಗಾರಿಕೆ ಇಲಾಖೆ, ರೈತ ಸಂಪರ್ಕ ಕೇಂದ್ರಕ್ಕೆ ತೆರಳಿ ಮಾಹಿತಿ ಪಡೆಯಬಹುದು.