News

ಶಿಕ್ಷಕರ ಅರ್ಹತಾ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಜುಲೈ 20 ಕೊನೆಯ ದಿನ

05 July, 2021 9:50 PM IST By:

ಶಿಕ್ಷಕರಾಗಿ ನೇಮಕಾತಿ ಹೊಂದಲು ಕನಿಷ್ಠ ಅರ್ಹತೆಯಾಗಿ ಪರಿಗಣಿಸುವ ಶಿಕ್ಷಕರ ಅರ್ಹತಾ ಪರೀಕ್ಷೆಗೆ(ಟಿಇಟಿ-2021) ಸಾರ್ವಜನಿಕ ಶಿಕ್ಷಣ ಇಲಾಖೆ ಅರ್ಜಿ ಆಹ್ವಾನಿಸಿದೆ. ಆಗಷ್ಟ್ 22 ಪರೀಕ್ಷೆ ನಿಗದಿಯಾಗಿದ್ದು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಜುಲೈ ತಿಂಗಳು 20 ಕೊನೆಯ ದಿವಾಗಿದೆ.

* ಪತ್ರಿಕೆ – 1 (1 ರಿಂದ 5ನೇ ತರಗತಿ ವರೆಗೆ) :
ದ್ವಿತೀಯ ಪಿ.ಯು.ಸಿಯಲ್ಲಿ ಕನಿಷ್ಠ ಶೇ 50 ಅಂಕ ಗಳಿಸಿ, ಡಿ.ಇಡಿ ಅಥವಾ ಬಿ.ಇಡಿ ಅಥವಾ ಡಿ.ಎಲ್.ಇಡಿ ಕೋರ್ಸ್ ಮುಗಿಸಿದವರು. ಅಥವಾ ಡಿ.ಇಡಿ ಅಥವಾ ಡಿ.ಎಲ್.ಇಡಿ ಕೋರ್ಸ್ನ ಅಂತಿಮ ವರ್ಷದ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವವರು. ಡಿಪ್ಲೊಮಾ ಇನ್ ಎಜುಕೇಷನ್(ವಿಶೇಷ ಶಿಕ್ಷಣ) ಕೋರ್ಸ್ ಮಾಡಿದವರು ಅರ್ಜಿ ಸಲ್ಲಿಸಬಹುದಾಗಿದೆ.

*  ಪತ್ರಿಕೆ – 2 ( 6 ರಿಂದ 8ನೇ ತರಗತಿ ವರೆಗೆ)

ಪದವಿ ಪರೀಕ್ಷೆಯಲ್ಲಿ ಕನಿಷ್ಠ ಶೇ 50 ಅಂಕ ಗಳಿಸಿ, ಬಿ.ಇಡಿ ಅಥವಾ ಡಿ.ಎಲ್.ಇಡಿ ಕೋರ್ಸ್ ಮುಗಿಸಿದವರು. ಅಥವಾ ಡಿ.ಎಲ್.ಇಡಿ ಕೋರ್ಸ್ನ ಅಂತಿಮ ವರ್ಷದ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವವರು. ಅರ್ಜಿ ಸಲ್ಲಿಸಬಹುದಾಗಿದೆ. ಅಥವಾ ಪಿಯುಸಿ ಪರೀಕ್ಷೆಯಲ್ಲಿ ನಿಷ್ಠ ಶೇ 50 ಅಂಕ ಗಳಿಸಿ ನಾಲ್ಕು ವರ್ಷದ ಡಿ.ಎಲ್.ಇಡಿ ಕೋರ್ಸ್ ಮುಗಿಸಿದವರು ಹಾಗೂ ಅಂತಿಮ ವರ್ಶದ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವವರು ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಇದೇ ತಿಂಗಳು 20 ಆಗಿದ್ದು, ಆನ್ ಲೈನ್ ಮೂಲಕವೇ ನಿಗದಿಪಡಿಸಿದ ಶುಲ್ಕ ಪಾವತಿಸಬೇಕು. ಆಗಸ್ಟ್ 22 ರಂದು ಬೆಳಗ್ಗೆ 9.30 ರಿಂದ 12ರವರೆಗೆ ಮತ್ತು ಮಧ್ಯಾಹ್ನ 2 ರಿಂದ 4.30ರವರೆಗೆ ಪರೀಕ್ಷೆಗಳು ನಡೆಯಲಿವೆ. ಪತ್ರಿಕೆ 150 ಅಂಕಗಳನ್ನು ಹೊಂದಿರುತ್ತದೆ. ಪ್ರವೇಶ ಪತ್ರಗಳನ್ನು ಆಗಸ್ಟ್ 12 ರಿಂದ ಆನ್ ಲೈನ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು.

ಅರ್ಜಿ ಸಲ್ಲಿಸಲಿಚ್ಚಿಸುವವರು http://www.schooleducation.kar.nic.in/ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬಹುದು. ಶಿಕ್ಷಕರ ಅರ್ಹತಾ ಪರೀಕ್ಷೆಯ ಪ್ರಮಾಣ ಪತ್ರ ಜೀವಾತಾವಧಿಯವರಿಗೆ ಮಾನ್ಯತೆ ಹೊಂದಿರುತ್ತದೆ. ಒಮ್ಮೆ ಅರ್ಹತೆ ಪಡೆದವರು ಮತ್ತೆ ಮತ್ತೆ ಪರೀಕ್ಷೆ ಬರೆಯುವ ಅವಶ್ಯಕತೆಯಿಲ್ಲ. ಒಂದು ವೇಳೆ ಹೆಚ್ಚು ಅಂಕ ಪಡೆಯಲಿಚ್ಚಿಸುವ ಅಭ್ಯರ್ಥಿಗಳು ಮಾತ್ರ ಮತ್ತೆ ಪರೀಕ್ಷೆ ಬರೆಯಬಹುದು.

ಅಭ್ಯರ್ಥಿಯು ಇತ್ತೀಚಿನ ಭಾವಚಿತ್ರ, ಮತ್ತು ಸಹಿ ಅಪ್ಲೋಡ್ ಮಾಡಬೇಕು. ಅಂಗವಿಕಲ ಕೋಟಾದಡಿ ವಿನಾಯಿತಿ ಬಯಸಿದಲ್ಲಿ ಪಿಎಚ್ ಪ್ರಮಾಣದಪತ್ರ ಅಪ್ಲೋಡ್ ಮಾಡಬೇಕು. ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಜಾತಿ ಮತ್ತು ಆದಾಯ ಪ್ರಮಾಣ ಪತ್ರಹೊಂದಿರಬೇಕು.

ಶುಲ್ಕ- ಸಾಮಾನ್ಯವರ್ಗ, 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ ಪತ್ರಿಕೆ 1ಕ್ಕೆ 700 ರೂಪಾಯಿ ಪತ್ರಿಕೆ 1 ಹಾಗೂ ಪತ್ರಿಕೆ 2ಕ್ಕೆ ಸೇರಿ 1000 ರೂಪಾಯಿ ಪಾವತಿಸಬೇಕು. ಪಜಾ,ಪ.ವರ್ಗ, ದವರಿಗೆ ಪತ್ರಿಕೆ -1ಕ್ಕೆ 350 ರೂಪಾಯಿ ಪತ್ರಿಕೆ 1 ಮತ್ತು 2 ಸೇರಿ 500 ರೂಪಾಯಿ ಇರುತ್ತದೆ.  ಎಲ್ಲಾ ಬ್ಯಾಂಕುಗಳಲ್ಲಿ ಇಂಟರ್ನೆಟ್ ಬ್ಯಾಂಕಿಂಗ್, ಡೆಬಿಟ್ ಅಥವಾ ಕ್ರೇಡಿಟ್ ಕಾರ್ಡ್ ಮೂಲಕ ಅರ್ಜಿ ಸಲ್ಲಿಸಬಹುದು.