ಕೋವಿಡ್-19 ಎರಡನೇ ಅಲೆಯ ಸಂಕಷ್ಟದ ಹಿನ್ನೆಲೆಯಲ್ಲಿ 2021-22ನೇ ಸಾಲಿನಲ್ಲಿ ಪವರ್ ಲೂಮ್ ನೇಕಾರರಿಗೆ/ಕೆಲಸಗಾರರಿಗೆ ತಲಾ 3000 ರೂ.ಗಳ ನೆರವನ್ನು ನೀಡುವ ಯೋಜನೆಯನ್ನು ರಾಜ್ಯ ಸರ್ಕಾರವು ಜಾರಿಗೊಳಿಸಿದ್ದು, ಇದಕ್ಕಾಗಿ ಅರ್ಹ ಪವರ್ ಲೂಮ್ ನೇಕಾರರಿಗೆ/ಕೆಲಸಗಾರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ (ಜಿ.ಪಂ.) ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕರಾದ ಕಾಶಿನಾಥ ಎಂ. ಭಾವಿಕಟ್ಟಿ ಅವರು ತಿಳಿಸಿದ್ದಾರೆ.
ಪವರ್‌ಲೂಮ್ ಘಟಕಗಳಲ್ಲಿ ನೇಕಾರರು ಹಾಗೂ ಪ್ರೀ-ಲೂಮ್ ಚಟುವಟಿಗಳಾದ ಟ್ವಿಸ್ಟಿಂಗ್, ವೈಡಿಂಗ್, ಯಾರ್ನ ಡೈಯಿಂಗ್, ವಾರ್ಪಿಂಗ್, ಝರಿ ವೈಡಿಂಗ್, ಅಂಡ್ ವಾರ್ಪಿಂಗ್ ಹಾಗೂ ಸೈಜಿಂಗ್ ಕೆಲಸಗಾರರಿಗೆ ತಲಾ 3,000 ರೂ. ಗಳ ನೆರವು ನೀಡಲಾಗುತ್ತದೆ. ಈ ಯೋಜನೆಯಡಿ ವಿದ್ಯುತ್‌ಮಗ್ಗ ಘಟಕ ಮಾಲೀಕರು ಲೆಟರ್ ಹೆಡ್, 20 ರೂ.ಗಳ ಬಾಂಡ್ ಪೇಪರ್, ಸಾಮಾನ್ಯ ಕಾಗದದಲ್ಲಿ ನೇಕಾರರ/ಕೆಲಸಗಾರರ ವಿವರಗಳೊಂದಿಗೆ ಮುಚ್ಚಳಿಕೆ ಪತ್ರವನ್ನು ನೀಡಬೇಕು. ಇದರೊಂದಿಗೆ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಕೂಲಿ ಕಾರ್ಮಿಕರು ಸ್ವಯಂ ಧೃಢೀಕರಿಸಿದ ಆಧಾರ್ ಕಾರ್ಡ್ ಪ್ರತಿಗಳು, ಆಧಾರ್ ಮಾಹಿತಿಯನ್ನು ಡಿ.ಬಿ.ಟಿ. ಗಾಗಿ ಬಳಕೆ ಮಾಡಲು ಕಾರ್ಮಿಕರ ಒಪ್ಪಿಗೆ ಪತ್ರ, ವಿದ್ಯುತ್‌ಮಗ್ಗ ಘಟಕದ ಮುಂದೆ ವಿದ್ಯುತ್ ಮಗ್ಗ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಫಲಾನುಭವಿಗಳ ಗುಂಪಿನ ಪೋಟೋ, ಘಟಕವು ವಿದ್ಯುತ್ ಸಂಪರ್ಕ ಹೊಂದಿರುವ ಆರ್.ಆರ್. ನಂಬರಿನ ವಿದ್ಯುತ್ ಬಿಲ್ ಘಟಕವು ಬಾಡಿಗೆ ಅಥವಾ ಲೀಸ್ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದರೆ ಅದಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ಒದಗಿಸಬೇಕು. ಘಟಕದ ಉದ್ಯೋಗ ಆಧಾರ, ಪಿ.ಎಂ.ಟಿ., ಉದ್ದಿಮೆದಾರರ ಪರವಾನಿಗೆ ಪತ್ರದ ಪ್ರತಿ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೂಲಿ ನೇಕಾರರ, ಕೆಲಸಗಾರರ ವಿವರಗಳನ್ನು ಒಳಗೊಂಡ ಮಜೂರಿ ಪಾವತಿಯ ಪ್ರತಿ (ಲಭ್ಯವಿದ್ದಲ್ಲಿ) ಸಲ್ಲಿಸಬೇಕು.
ಈಗಾಗಲೇ 2020-21ನೇ ಸಾಲಿನಲ್ಲಿ ಸೇವಾಸಿಂಧು ತಂತ್ರಾಂಶದಲ್ಲಿ ನೊಂದಾಯಿಸಲಾದ ಫಲಾನುಭವಿಗಳನ್ನು ಹೊರತುಪಡಿಸಿ ಹೊಸದಾಗಿ ಜಿಲ್ಲೆಯಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿರುವ ವಿದ್ಯುತ್ ಮಗ್ಗ ಘಟಕ ಮಾಲೀಕರು ಲೆಟರ್ ಹೆಡ್, 20 ರೂ. ಗಳ ಬಾಂಡ್ ಪೇಪರ್, ಸಾಮಾನ್ಯ ಕಾಗದದಲ್ಲಿ ನೇಕಾರರ, ಕೆಲಸಗಾರರ ವಿವರಗಳೊಂದಿಗೆ ಮುಚ್ಚಳಿಕೆ ಪತ್ರ ಹಾಗೂ ಅಗತ್ಯ ದಾಖಲಾತಿಗಳೊಂದಿಗೆ 2021ರ ಆಗಸ್ಟ್ 9 ರೊಳಗಾಗಿ ಕಲಬುರಗಿ (ಜಿ.ಪಂ.) ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿಗಳನ್ನು ಸಲ್ಲಿಸಿದ ನಂತರ ಇಲಾಖೆಯಿಂದ ಸೇವಾ ಸಿಂಧು ಆನ್‌ಲೈನ್ ವೆಬ್ ಸೈಟ್‌ನಲ್ಲಿ ನೊಂದಾಯಿಸಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಗುರು ಬಸವ ಕಟ್ಟಡ, ಮನೆ ನಂ. 2-910, ಓಕಳಿ ಕ್ಯಾಂಪ್, ಸೌಭಾಗ್ಯ ಕಲ್ಯಾಣ ಮಂಟಪ ಹತ್ತಿರ, ಸೇಡಂ ರಸ್ತೆ, ಕಲಬುರಗಿ-585105 ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-278629ಗೆ ಸಂಪರ್ಕಿಸಲು ಕೋರಲಾಗಿದೆ.