ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಮೀನುಗಾರಿಕೆ ಇಲಾಖೆಯಿಂದ ಪ್ರಸಕ್ತ ಸಾಲಿಗೆ ಸಹಾಯಧನ ನೀಡುವ ಸಲುವಾಗಿ ಅರ್ಹ ಮೀನುಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಯೋಜನೆಯಡಿ ಹೊಸದಾಗಿ ಮೀನುಮರಿ ಪಾಲನಾ ಹ್ಯಾಚರಿ ನಿರ್ಮಾಣ, ಮೀನುಮರಿ ಪಾಲನಾ ನರ್ಸರಿ ಕೊಳಗಳ ನಿರ್ಮಾಣ, ಮೀನು ಕೈಷಿ ಕೊಳ ನಿರ್ಮಾಣ, ಮೀನು ಪಾಲನೆಗಾಗಿ ಪೂರಕ ವೆಚ್ಚ, ಬಯೋಪ್ಲಾಕ್ ಘಟಕಗಳ ನಿರ್ಮಾಣ, ದೊಡ್ಡ ಮತ್ತು ಸಣ್ಣ ಆರ್.ಎ.ಎಸ್ ಘಟಕಗಳ ನಿರ್ಮಾಣ, ಮೀನು ಸಾಗಾಣಿಕೆಗಾಗಿ ಇನ್ಸುಲೆಟೆಡ್ ವಾಹನಗಳ ಖರೀದಿ, ಮೀನು ಮಾರಾಟಕ್ಕಾಗಿ ದ್ವಿಚಕ್ರ ವಾಹನ ಹಾಗೂ ಶಾಖ ನಿರೋಧಕ ಪೆಟ್ಟೆಗೆ ಖರೀದಿ, ಮೀನು ಮಾರಾಟಕ್ಕಾಗಿ ತ್ರಿಚಕ್ರ ವಾಹನ ಹಾಗೂ ಶಾಖ ನಿರೋಧಕ ಪೆಟ್ಟಿಗೆ ಖರೀದಿಗೆ ಸಹಾಯಧನ ನೀಡಲಾಗುತ್ತದೆ. ಸೆಪ್ಟೆಂಬರ್ 30 ರೊಳಗೆ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಬಾದಾಮಿ, ಗುಳೇದಗುಡ್ಡ, ಇಲಕಲ್ಲ, ಬಾಗಲಕೋಟೆ ಹಾಗೂ ಹುನಗುಂದ ತಾಲೂಕಿನವರು ಬಾದಾಮಿ ಮೀನುಗಾರಿಕೆ ಸಹಾಯಕ ನಿರ್ದೇಶಕರು (9902203684) ಮತ್ತು ಜಮಖಂಡಿ, ರಬಕವಿ-ಬನಹಟ್ಟಿ, ಮುಧೋಳ ಹಾಗೂ ಬೀಳಗಿ ತಾಲೂಕಿನವರು ಜಮಖಂಡಿ ಮೀನುಗಾರಿಕೆ ಸಹಾಯಕ ನಿರ್ದೇಶಕರು (9886820861) ಮತ್ತು ಜಿಲ್ಲಾ ಮಟ್ಟದಲ್ಲಿ ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು, ಬಾಗಲಕೋಟೆ (9986132717) ಇವರನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು.