2022-23 ನೇ ಸಾಲಿನ ರಾಜ್ಯ ಮಟ್ಟ, ಜಿಲ್ಲಾ ಮಟ್ಟದ ಮತ್ತು ತಾಲ್ಲೂಕು ಮಟ್ಟದ ಕೃಷಿ ಪ್ರಶಸ್ತಿ ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದೆ. ನೀವು ರೈತರಾಗಿದ್ದರೆ ಈಗಲೆ ಅರ್ಜಿ ಸಲ್ಲಿಸಿ
ಇನ್ನಷ್ಟು ಓದಿರಿ: #Recruitment: ಯುವ ವೃತ್ತಿಪರ ಹುದ್ದೆಗಳಿಗೆ ನೇಮಕಾತಿ, 50,000 ಸಂಬಳ!
2022-23 ನೇ ಸಾಲಿನ ರಾಜ್ಯ ಮಟ್ಟ, ಜಿಲ್ಲಾ ಮಟ್ಟದ ಮತ್ತು ತಾಲ್ಲೂಕು ಮಟ್ಟದ ಕೃಷಿ ಪ್ರಶಸ್ತಿ ಯೋಜನೆಯಡಿ ರೈತ ಮಹಿಳೆ ಹಾಗೂ ಇತರೆ ರೈತರಿಗೆ ಉತ್ಪಾದನೆ ಬಹುಮಾನಗಳನ್ನು ನೀಡುವ ಮೂಲಕ ಕೃಷಿ ವಲಯದ ಉತ್ಪಾದನೆ ಹೆಚ್ಚಿಸಲು ಹಾಗೂ ರೈತರಿಗೆ ಸ್ಪರ್ಧಾ ಮನೋಭಾವ ಬೆಳೆಸಲು ಹಿಂಗಾರು ಬೆಳೆ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಈ ಸ್ಪರ್ಧೆಯಲ್ಲಿ ವಿಜೇತರಾದ ರೈತರಿಗೆ ಕೃಷಿ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
#Tabebuia rosea: ಹೂವುಗಳ ಲೋಕದ ರಾಣಿಯಂತೆ ಕಂಗೊಳಿಸುತ್ತಿರುವ ʼಪಿಂಕ್ ತಬೂಬಿಯಾ ರೋಸಿಯಾʼ!
ಜಿಲ್ಲೆಯ ಪ್ರಮುಖ ಬೆಳೆಯಾದ ಕಡಲೆ (ಮಳೆಯಾಶ್ರಿತ) ಬೆಳೆಗೆ ರೈತರು ಹೆಸರನ್ನು ನೊಂದಾಯಿಸಬಹುದಾಗಿರುತ್ತದೆ. ಭಾಗವಹಿಸಲು ಇಚ್ಛಿಸುವ ರೈತರು ಕನಿಷ್ಟ ಒಂದು ಎಕರೆ ಜಮೀನನ್ನು ಹೊಂದಿರುಬೇಕಾಗಿರುತ್ತದೆ.
ಆಸಕ್ತ ರೈತರು ಹಿಂಗಾರು ಬೆಳೆಗಳಿಗೆ ಬೆಳೆ ಸ್ಪರ್ಧೆಯಲ್ಲಿ ಭಾಗವಹಿಸಲು/ಅರ್ಜಿ ಸಲ್ಲಿಸಲು ನವೆಂಬರ್.30 ಕೊನೆಯ ದಿನಾಂಕ ಆಗಿರುತ್ತದೆ.
ಸಿಎಂ ಬೊಮ್ಮಾಯಿಯಿಂದ ಸರ್ಕಾರಿ ನೌಕರರ ಪರಿಷ್ಕೃತ ವೇತನ ಪ್ರಕಟ; ಹಾಗಿದ್ರೆ ಇನ್ಮುಂದೆ ಎಷ್ಟಾಗಲಿದೆ ವೇತನ?
ಸಾಮಾನ್ಯ ವರ್ಗದವರಿಗೆ ಎಲ್ಲಾ ಮಟ್ಟಕ್ಕೆ 100 ರೂ. ಮತ್ತು ಪ.ಜಾತಿ & ಪ.ಪಂಗಡ ವರ್ಗದವರಿಗೆ 25 ರೂ. ಶುಲ್ಕ ಪಾವತಿ ಮಾಡಿ ತಮ್ಮ ಹೆಸರನ್ನು ಅರ್ಜಿ ಮತ್ತು ಇನ್ನಿತರ ದಾಖಲಾತಿಗಳೊಂದಿಗೆ ನೋಂದಣಿ ಮಾಡಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ನಮೂನೆಗಳನ್ನು ಸಂಬಂಧಪಟ್ಟ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರುಗಳಿಗೆ ಅಥವಾ ರೈತ ಸಂಪರ್ಕ ಕೇಂದ್ರದ ಅಧಿಕಾಯವರನ್ನು ಸಂಪರ್ಕಿಸಬಹುದು ಎಂದು ಬೀದರ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.