ಕರ್ನಾಟಕ ರಾಜ್ಯ ಬಾಲವಿಕಾಸ ಅಕಾಡೆಮಿಯಿಂದ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ವಿಶೇಷ ಸಾಧನೆಗೈದ 18 ವರ್ಷದೊಳಗಿನ ಮಕ್ಕಳಿಗೆ ಬಾಲಗೌರವ ಪ್ರಶಸ್ತಿ ನೀಡಲಾಗುತ್ತಿದೆ. ಇದಕ್ಕಾಗಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ವಿಶೇಷ ಸಾಧನೆಗೈದ 18 ವರ್ಷದೊಳಗಿನ ಮಕ್ಕಳಿಂದ ಅರ್ಜಿ ಅಹ್ವಾನಿಸಲಾಗಿದೆ ಎಂದು ಧಾರವಾಡದ ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷರಾದ ಈರಣ್ಣ ಜಡಿ ಅವರು ತಿಳಿಸಿದ್ದಾರೆ.
ಮಕ್ಕಳು ಸಂಗೀತ, ನೃತ್ಯ, ನಟನೆ, ಕ್ರೀಡೆ ಮತ್ತು ಚಿತ್ರಕಲೆ, ಕರಕುಶಲ, ಬರವಣಿಗೆ ಹಾಗೂ ಸಂಶೋಧನೆ (ಹೊಸ ಆವಿಷ್ಕಾರ) ಈ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆಯನ್ನು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಪುರಷ್ಕೃತ ಮಗುವಾಗಿರಬೇಕು. ಇಂತಹ ಮಕ್ಕಳು ಅಕಾಡೆಮಿ ಬಾಲ ಗೌರವಪ್ರಶಸ್ತಿಗಾಗಿ ತಮ್ಮ ಸ್ವಯಂ ದೃಢೀಕೃತ ನಕಲು ದಾಖಲೆಗಳು ಹಾಗೂ ಸ್ವ-ವಿವರನ್ನೊಳಗೊಂಡ ಮನವಿಯೊಂದಿಗೆ ಅರ್ಜಿಯನ್ನು ಯೋಜನಾಧಿಕಾರಿಗಳು, ಕರ್ನಾಟಕ ಬಾಲವಿಕಾಸ ಅಕಾಡೆಮಿ, ಚಂದ್ರಿಕಾ ಲೇಔಟ್ ಹಿಂಭಾಗ, ಕೆ.ಎಚ್.ಬಿ. ಕಾಲೋನಿ, ಲಕಮನಹಳ್ಳಿ ಧಾರವಾಡ-580004 ಈ ವಿಳಾಸಕ್ಕೆ 2021ರ ಫೆಬ್ರುವರಿ 20ರೊಳಗಾಗಿ ಕಳಿಸಬೇಕು. ಕೊನೆಯ ದಿನಾಂಕದ ನಂತರ ಬರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಅರ್ಜಿ ಸಲ್ಲಿಸುವ ಲಕೋಟೆ ಮೇಲೆ “ಅಕಾಡೆಮಿ ಬಾಲಗೌರವ ಪ್ರಶಸ್ತಿಗಾಗಿ ಅರ್ಜಿ” ಎಂದು ನಮೂದಿಸಿ ಅರ್ಜಿ ಕಳುಹಿಸಬೇಕು. ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿಯ ಕಚೇರಿ ಸಂಖ್ಯೆ 0836-2461666 ಗೆ ಸಂಪರ್ಕಿಸಲು ಕೋರಲಾಗಿದೆ.