News

ಗುತ್ತಿಗೆ ಆಧಾರದ ಮೇಲೆ ಡಿಸ್ಟ್ರಿಕ್ಟ್ ಡಿಸಾಸ್ಟರ್ ಪ್ರೊಫೆಶನಲ್” ಹುದ್ದೆಗೆ ಅರ್ಜಿ ಆಹ್ವಾನ

19 April, 2021 7:46 PM IST By:
job

ವಿಪತ್ತು ನಿರ್ವಹಣಾ ಇತರೆ ಯೋಜನೆಯಡಿ ಕಲಬುರಗಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವನ್ನು ಬಲಪಡಿಸಲು ಗುತ್ತಿಗೆ ಆಧಾರದ ಮೇಲೆ “ಡಿಸ್ಟಿçಕ್ಟ್ ಡಿಸಾಸ್ಟರ್ ಪ್ರೊಫೆಶನಲ್” ಹುದ್ದೆಗೆ ಅರ್ಜಿ ಆಹ್ವಾನಿಸಿದೆ ಎಂದು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾನ ತಿಳಿಸಿದ್ದಾರೆ.

12 ತಿಂಗಳ ಅವಧಿಯ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳ ವಯೋಮಿತಿಯು ಗರಿಷ್ಠ 65 ವರ್ಷ ಮೀರಿರಬಾರದು. ಅರ್ಜಿ ಸಲ್ಲಿಸಲು ಯಾವುದೇ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ವಿಪತ್ತು ನಿರ್ವಹಣೆ, ಸಾಮಾಜಿಕ ಕಾರ್ಯ, ಸಮಾಜಶಾಸ್ತ್ರ, ಕೃಷಿ, ವಾಸ್ತುಶಿಲ್ಪ, ಇಂಜಿನೀಯರಿಂಗ್ ನಗರ ಯೋಜನೆ ಹಾಗೂ ಇನ್ನಿತರ ಸಾಮಾಜಿಕ ವಿಜ್ಞಾನದಲ್ಲಿ ಪದವಿ ಪಡೆದವರಿಗೆ ಆದ್ಯತೆ ನೀಡಲಾಗುವುದು.

ಶೈಕ್ಷಣಿಕ ಅರ್ಹತೆಯೊಂದಿಗೆ ವಿಪತ್ತು ನಿರ್ವಹಣೆಗೆ ಸಂಬAಧಿಸಿದ ಕ್ಷೇತ್ರಗಳಲ್ಲಿ 5 ವರ್ಷಗಳ ಅನುಭವ ಹೊಂದಿರಬೇಕು. ಪಿಎಚ್‌ಡಿ ಪದವಿ ಪಡೆದ ಅಭ್ಯರ್ಥಿಗಳು ಕನಿಷ್ಠ 3 ವರ್ಷಗಳ ಅನುಭವ ಹೊಂದಿದ್ದರೆ ಸಾಕು. ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಪ್ರಭುತ್ವದ ಜೊತೆಗೆ ಉತ್ತಮ ಸಂವಹನ ಕೌಶಲ್ಯ ಹೊಂದಿರಬೇಕು. ಎಂ.ಎಸ್.ಆಫೀಸ್ ಹಾಗೂ ಇಂಟರ್ನೆಟ್‌ನಲ್ಲಿ ಜ್ಞಾನ ಹೊಂದಿರಬೇಕು. ಪ್ರತಿ ಮಾಹೆ 44,೦೦೦ ರೂ. ವೇತನ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಆಸಕ್ತ ಅಭ್ಯರ್ಥಿಗಳು ಇತ್ತೀಚಿನ ಸ್ವ-ವಿವರದೊಂದಿಗೆ (ಬಯೋಡೆಟಾ) ಸ್ವಯಂ ದೃಢೀಕರಿಸಿದ ಶೈಕ್ಷಣಿಕ ಮತ್ತು ಅನುಭವ ಪ್ರಮಾಣ ಪತ್ರಗಳೊಂದಿಗೆ ಅರ್ಜಿಯನ್ನು ಜಿಲ್ಲಾಧಿಕಾರಿಗಳು (ವಿಪತ್ತು ನಿರ್ವಹಣಾ ಕೋಶ) ಕಲಬುರಗಿ-೫೮೫೧೦೨ ಕಚೇರಿಗೆ ನೋಂದಾಯಿತ ಅಂಚೆ ಮೂಲಕ ಏಪ್ರಿಲ್ 26 ರ ಮಧ್ಯಾಹ್ನ 1.3೦ ಗಂಟೆ ಒಳಗಾಗಿ ಕಳುಹಿಸಬೇಕು. ಕೊನೆಯ ದಿನದ ಬಳಿಕ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂ.ಸಂ. 08472-278677ಗೆ ಸಂಪರ್ಕಿಸಲು ಕೋರಲಾಗಿದೆ.