ಧಾರವಾಡ : 2023-24ನೇ ಪ್ರಸಕ್ತ ಸಾಲಿಗಾಗಿ ರೇಷ್ಮೆ ಇಲಾಖೆಯ ಜಿಲ್ಲಾ ಪಂಚಾಯತ್ ಅನುದಾನದಡಿ ದೊರಕುವ ಸಹಾಯಧನ (subsidy) ಸೌಲಭ್ಯಗಳನ್ನು ವಿತರಿಸಲು ರೇಷ್ಮೆ ಬೆಳೆಗಾರರಿಂದ ಅರ್ಜಿ ಆಹ್ವಾನಿಸಿದೆ.
ಹೊಸದಾಗಿ ಹಿಪ್ಪುನೇರಳೆ ತೋಟ ಸ್ಥಾಪನೆಗೆ, ಹಿಪ್ಪು ನೇರಳೆ ನರ್ಸರಿ ಉತ್ಪಾದನೆಗೆ ಹಾಗೂ ಮಹತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ವ್ಯಯಕ್ತಿಕ ಕಾಮಗಾರಿ ಅಡಿಯಲ್ಲಿ ರೇಷ್ಮೆ ಕೃಷಿ ಅಭಿವೃಧ್ಧಿ ಚಟುವಟಿಕೆ ಕೈಗೂಳ್ಳಲು ಆಸಕ್ತಿಯುಳ್ಳವರು ಇಲಾಖೆಯ ಕಛೇರಿಗಳನ್ನು ಸಂಪರ್ಕಿಸಿ, ಮಾಹಿತಿ ಪಡೆದು ಸೆಪ್ಟೆಂಬರ್ 15, 2023 ರೊಳಗಾಗಿ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ರೇಷ್ಮೆ ಉಪನಿರ್ದೇಶಕರು ಜಿಲ್ಲಾ ಪಂಚಾಯತ್ ಧಾರವಾಡ ಮೊ.9448223920, ರೇಷ್ಮೆ ವಿಸ್ತರಣಾಧಿಕಾರಿಗಳು ತಾಂತ್ರಿಕ ಸೇವಾ ಕೇಂದ್ರ ಹುಬ್ಬಳ್ಳಿ ಮೊ.9448873799,
ರೇಷ್ಮೆ ನಿರೀಕ್ಷಕರು ಕುಂದಗೋಳ ಮೊ.9449086736 ಹಾಗೂ ಪ್ರಭಾರಿ ಅಧಿಕಾರಿಗಳು ತಾಂತ್ರಿಕ ಸೇವಾ ಕೇಂದ್ರ ಕಲಘಟಗಿ ಮೊ.9590774373 ಅವರನ್ನು ಸಂಪರ್ಕಿಸಿಬಹುದು ಎಂದು ರೇಷ್ಮ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾಹಿತಿಗಾಗಿ : ಭಾರತದಲ್ಲಿ ರೇಷ್ಮೆ ಕೃಷಿಯಲ್ಲಿ ಮೂರು ವಿಧಗಳಿವೆ
1. ಮಲ್ಬೆರಿ ಕೃಷಿ
2. ಟಸ್ಸಾರ್ ಕೃಷಿ ಮತ್ತು
3. ಏರಿ ಕೃಷಿ.
ರೇಷ್ಮೆ ಒಂದು ಕೀಟದ ಪ್ರೋಟೀನ್‌ನಿಂದ ತಯಾರಿಸಿದ ಫೈಬರ್ ಆಗಿದೆ. ಮಲ್ಬರಿ, ಅರ್ಜುನ ಎಲೆಗಳನ್ನು ತಿನ್ನುವ ಕೀಟಗಳ ಲಾರ್ವಾಗಳಿಂದ ಅತ್ಯುತ್ತಮ ರೇಷ್ಮೆ ತಯಾರಿಸಲಾಗುತ್ತದೆ.
ಕೀಟವು ಮಲ್ಬರಿ ಎಲೆಗಳನ್ನು ತಿನ್ನುವ ಮೂಲಕ ಮಾಡುವ ರೇಷ್ಮೆಯನ್ನು ಮಲ್ಬರಿ ರೇಷ್ಮೆ ಎಂದು ಕರೆಯಲಾಗುತ್ತದೆ.
ಮಲ್ಬೆರಿ ರೇಷ್ಮೆಯನ್ನು ಇಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಜಮ್ಮು ಮತ್ತು ಕಾಶ್ಮೀರ ಮತ್ತು ಪಶ್ಚಿಮ ಬಂಗಾಳದಲ್ಲಿ ಉತ್ಪಾದಿಸಲಾಗುತ್ತದೆ.
ಮಲ್ಬೆರಿ ಅಲ್ಲದ ರೇಷ್ಮೆಯನ್ನು ಜಾರ್ಖಂಡ್, ಛತ್ತೀಸ್‌ಗಢ, ಒಡಿಶಾ, ಉತ್ತರ ಪ್ರದೇಶ ಮತ್ತು ಈಶಾನ್ಯ ರಾಜ್ಯಗಳಲ್ಲಿ ಉತ್ಪಾದಿಸಲಾಗುತ್ತದೆ.
ಕೇಂದ್ರವೂ ಸೇರಿದಂತೆ ಪ್ರತಿಯೊಂದು ರಾಜ್ಯ ಸರ್ಕಾರವೂ ತಮ್ಮದೇ ಮಟ್ಟದಲ್ಲಿ ರೈತರಿಗೆ ರೇಷ್ಮೆ ಕೃಷಿ ಯೋಜನೆಗಳನ್ನು ಸಿದ್ಧಪಡಿಸುತ್ತದೆ.
ತಮ್ಮ ಒಂದು ಎಕರೆ ಜಮೀನಿನಲ್ಲಿ ಹಿಪ್ಪುನೇರಳೆ ತೋಟ ಹಾಗೂ ರೇಷ್ಮೆ ಹುಳು ಸಾಕಲು ಬಯಸುವ ರೈತರಿಗೆ ಸರಕಾರ ಎಲ್ಲ ರೀತಿಯ ನೆರವು ನೀಡುತ್ತಿದೆ.