News

ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ರೈತರಿಂದ ಅರ್ಜಿ ಆಹ್ವಾನ, ಆಯ್ಕೆಯಾದ ರೈತರಿಗೆ 50 ಸಾವಿರ ನಗದು ಬಹುಮಾನ

20 August, 2020 9:29 AM IST By:

2020-21ನೇ ಸಾಲಿನಲ್ಲಿ ಆತ್ಮ ಯೋಜನೆಯಡಿ ರಾಜ್ಯ, ಜಿಲ್ಲಾ, ತಾಲ್ಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗಳನ್ನು ಕೃಷಿ, ಕೃಷಿ ಸಂಬಂಧಿತ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿರುವ ರೈತರನ್ನು ಗುರುತಿಸಿ ನೀಡಲಾಗುವುದು.

ಕೃಷಿ, ತೋಟಗಾರಿಕೆ(Horticulture), ಪಶು ಸಂಗೋಪನೆ, ಮೀನುಗಾರಿಕೆ (Fishers), ರೇಷ್ಮೆ, ಅರಣ್ಯ ಕೃಷಿ (Agro forestry) ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿರುವವರು ಅರ್ಜಿ ಸಲ್ಲಿಸಬಹುದು.

ರಾಜ್ಯ ಮಟ್ಟದ ಕೃಷಿ ಪಂಡಿತ ಅಥವಾ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಆಯ್ಕೆಯಾದ ರಾಜ್ಯದ 10 ರೈತರಿಗೆ (ತಲಾ 50 ಸಾವಿರ), ಜಿಲ್ಲಾಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗಳನ್ನು ಜಿಲ್ಲೆಯ 10 ರೈತರಿಗೆ (ಒಂದು ಕ್ಷೇತ್ರಕ್ಕೆ 2ರಂತೆ, ತಲಾ 25 ಸಾವಿರ), ತಾಲ್ಲೂಕು ಮಟ್ಟದ ಪ್ರಶಸ್ತಿಗಳಿಗೆ ಆಯ್ಕೆಯಾದ ತಾಲ್ಲೂಕಿನ ಐವರು ರೈತರಿಗೆ (ಆಯ್ಕೆಯಾದ 5 ಕ್ಷೇತ್ರಗಳಲ್ಲಿ ಒಬ್ಬರಂತೆ) ತಲಾ 10 ಸಾವಿರ ನಗದನ್ನು ಆಯ್ಕೆ ಸಮಿತಿ (Select committee) ತೀರ್ಮಾನದಂತೆ ನೀಡಲಾಗುತ್ತದೆ.

ಆತ್ಮ ಯೋಜನೆಯಡಿ ರಚಿತವಾಗಿ ಗುರುತಿಸಲ್ಪಟ್ಟಿರುವ ರೈತರು ಮತ್ತು ರೈತ ಮಹಿಳೆಯರ ಆಸಕ್ತ ಗುಂಪುಗಳು, ಆಹಾರ ಭದ್ರತಾ ಗುಂಪುಗಳು ಇತ್ಯಾದಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗುಂಪುಗಳನ್ನು ಗುರುತಿಸಿ, ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ 5 ರೈತರ ಗುಂಪುಗಳಿಗೆ ಜಿಲ್ಲಾ ಹಂತದಲ್ಲಿ ತಲಾ 20 ಸಾವಿರ ಪ್ರಶಸ್ತಿ ನೀಡಲು ಅವಕಾಶವಿರುತ್ತದೆ. ಇದನ್ನು ಸಹ ಆಯ್ಕೆ ಸಮಿತಿಯ ತೀರ್ಮಾನದಂತೆ ಕೊಡಲಾಗುವುದು.

ರೈತರು, ರೈತ ಮಹಿಳೆಯರು ಮತ್ತು ರೈತರ ಗುಂಪುಗಳು ಸಂಬಂಧ ಪಟ್ಟ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಿಂದ ಅರ್ಜಿ ನಮೂನೆ ಪಡೆದು, ಭರ್ತಿ ಮಾಡಿದ ಅರ್ಜಿಗಳನ್ನು ಸೆ.7ರೊಳಗಾಗಿ ಅಲ್ಲಿಯೇ ಅರ್ಜಿ ಸಲ್ಲಿಸಬಹುದು ಎಂದು ಯೋಜನಾ ನಿರ್ದೇಶಕರು (ಆತ್ಮ) ಹಾಗೂ ಉಪ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.