News

ಗ್ರಾಮೀಣ ಕೃಷಿ ಯಂತ್ರೋಪಕರಣ ಸೇವಾ ಕೇಂದ್ರಗಳನ್ನು ಸ್ಥಾಪಿಸಲು ಅರ್ಜಿ ಆಹ್ವಾನ

25 February, 2021 5:21 PM IST By:
Farm machinary

ಪ್ರಸಕ್ತ 2020-21ನೇ ಸಾಲಿನಲ್ಲಿ ಕೃಷಿ ಯಾಂತ್ರೀಕರಣ ಉಪಭಿಯಾನ ಯೋಜನೆಯಡಿ ಜಿಲ್ಲೆಯ ಆಯಾ ತಾಲೂಕುಗಳಲ್ಲಿನ ಆಯ್ದ ಗ್ರಾಮಗಳಲ್ಲಿ ಒಟ್ಟು 9 ಗ್ರಾಮೀಣ ಕೃಷಿ ಯಂತ್ರೋಪಕರಣಗಳ ಸೇವಾ ಕೇಂದ್ರಗಳನ್ನು ಸ್ಥಾಪಿಸಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ಅಫಜಲಪುರ ತಾಲೂಕಿನ ಅಫಜಲಪುರ ಹೋಬಳಿಯ ಬಿಲ್ವಾಡ್ (ಕೆ)., ಆಳಂದ ತಾಲೂಕಿನ ನಿಂಬರ್ಗಾ ಹೋಬಳಿಯ ಕಡಗಂಚಿ ಮತ್ತು ಮಾದನಹಿಪ್ಪರಗಾ ಹೋಬಳಿಯ ನಿಂಬಾಳದಲ್ಲಿ, ಚಿಂಚೋಳಿ ತಾಲೂಕಿನ ಚಿಂಚೋಳಿ ಹೋಬಳಿಯ ಭೋಗನಿಂಗದಳ್ಳಿ, ಚಿತ್ತಾಪುರ ತಾಲೂಕಿನ ಚಿತ್ತಾಪುರ ಹೋಬಳಿಯ ಮಾಲಗತ್ತಿ, ಕಲಬುರಗಿ ತಾಲೂಕಿನ ಕಲಬುರಗಿ ಹೋಬಳಿಯ ನಂದೂರ (ಕೆ) ಮತ್ತು ಕಮಲಾಪುರ ಹೋಬಳಿಯ ಕಲಮೂಡದಲ್ಲಿ, ಜೇವರ್ಗಿ ತಾಲೂಕಿನ ಯಡ್ರಾಮಿ ಹೋಬಳಿಯ ಮಳ್ಳಿ ಹಾಗೂ ಸೇಡಂ ತಾಲೂಕಿನ ಸೇಡಂ ಹೋಬಳಿಯ ಯಡಗಾಗಳಲ್ಲಿ ಗ್ರಾಮೀಣ ಕೃಷಿ ಯಂತ್ರೋಪಕರಣಗಳ ಸೇವಾ ಕೇಂದ್ರಗಳನ್ನು ಸ್ಥಾಪಿಸಲು ಸಂಬಂಧಪಟ್ಟ ಆಯಾ ಗ್ರಾಮಗಳ ನೋಂದಾಯಿತ ರೈತ ಸಹಕಾರಿ ಸಂಘಗಳು, ನೋಂದಾಯಿತ ರೈತ ಸಂಘಗಳು ಹಾಗೂ ರೈತ ಉತ್ಪಾದಕ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯತ್‍ಗಳು ಅರ್ಜಿ ಸಲ್ಲಿಸಬಹುದಾಗಿದೆ.

ನಿಗದಿತ ಅರ್ಜಿ ನಮೂನೆಯನ್ನು ಆಯಾ ತಾಲೂಕುಗಳ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗಳಿಂದ 2021ರ ಫೆಬ್ರವರಿ 25 ರ ಬೆಳಿಗ್ಗೆ 11 ರಿಂದ ಮಾರ್ಚ್ 3 ರ ಸಂಜೆ 5 ಗಂಟೆಯೊಳಗಾಗಿ ಪಡೆಯಬೇಕು. ಭರ್ತಿ ಮಾಡಿದ ಅರ್ಜಿಗಳೊಂದಿಗೆ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ 2021ರ ಮಾರ್ಚ್ 4 ರ ಸಂಜೆ 5 ಗಂಟೆಯೊಳಗಾಗಿ ಸಂಬಂಧಪಟ್ಟ ಆಯಾ ತಾಲೂಕುಗಳ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು.

       ಕೃಷಿ ಯಂತ್ರೋಪಕರಣಗಳು, ಪಂಪ್‍ಸೆಟ್‍ಗಳು, ಕೊಳವೆ ಬಾವಿಗಳು ರಿಪೇರಿ ಮಾಡುವ ಸೌಲಭ್ಯಗಳನ್ನು ಪ್ರಮುಖವಾಗಿ ಜಿಲ್ಲಾ ಮಟ್ಟದಲ್ಲಿ ಲಭ್ಯವಿದ್ದು, ರೈತರು ಹೋಬಳಿ/ ತಾಲೂಕುಗಳಿಂದ ಜಿಲ್ಲಾ ಕೇಂದ್ರಗಳಿಗೆ ಬರಬೇಕಾಗುತ್ತದೆ. ಆದ್ದರಿಂದ ರೈತರಿಗೆ ಸ್ಥಳಿಯವಾಗಿ ಕೃಷಿ ಯಂತ್ರೋಪಕರಣಗಳು, ಪಂಪ್‍ಸೆಟ್‍ಗಳು, ಕೊಳವೆ ಬಾವಿಗಳು ರಿಪೇರಿ ಮಾಡುವ ಮತ್ತು ಸೂಕ್ಷ್ಮ ನೀರಾವರಿ ಘಟಗಳ ದುರಸ್ತಿ ಮಾಡುವ ಸೌಲಭ್ಯಗಳನ್ನು ಒದಗಿಸಲು ಪ್ರಾರಂಭಿಕವಾಗಿ ತಾಲೂಕಿನ ಆಯ್ದ ಗ್ರಾಮಗಳಲ್ಲಿ ಗ್ರಾಮೀಣ ಕೃಷಿ ಯಂತ್ರೋಪಕರಣ/ ಸೇವಾ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಲಾಗಿದೆ. ಈ ಕೇಂದ್ರಗಳನ್ನು ಬ್ಯಾಂಕ್ ಲೋನ್ ಆಧಾರದ ಮೇಲೆ ಒಂದು ಬಾರಿ (Back Ended Subsidy) ನೀಡುವ ಮೂಲಕ ಗ್ರಾಮೀಣ ಕೃಷಿ ಯಂತ್ರೋಪಕರಣ ಕೇಂದ್ರ ಸ್ಥಾಪಿಸಿ ಹಾಗೂ ಮುನ್ನಡೆಸಲು ಅರ್ಜಿಗಳನ್ನು  ಆಹ್ವಾನಿಸಲಾಗಿದೆ.

ಮತ್ತಿತರ ಹೆಚ್ಚಿನ ಮಾಹಿತಿಗಾಗಿ ರೈತರು ಆಯಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಅಥವಾ ಕಲಬುರಗಿ ಜಂಟಿ ಕೃಷಿ ನಿರ್ದೇಶಕರ ಕಾರ್ಯಾಲಯಕ್ಕೆ ಸÀಂರ್ಪಕಿಸಲು ಕೋರಲಾಗಿದೆ.