News

ಬೆಲ್ಲ ತಯಾರಿಕಾ ಘಟಕ ಸ್ಥಾಪನೆಗೆ ರೈತರಿಂದ ಅರ್ಜಿ ಆಹ್ವಾನ

07 April, 2021 8:27 PM IST By:
Jaggery

ಆತ್ಮ ನಿರ್ಭರ ಭಾರತ ಅಭಿಯಾನದ ಅಂಗವಾಗಿ ಕೇಂದ್ರ ಸರ್ಕಾರವು ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ಯಮಗಳ ನಿಯಮಬದ್ಧಗೊಳಿಸುವಿಕೆ (ಫಿ.ಎಂ.ಎಫ್.ಎಂ.ಇ) ಯೋಜನೆ ಜಾರಿಗೆ ತಂದಿದ್ದು, ಈ ಯೋಜನೆಯಡಿ ಬಾಗಲಕೋಟೆ ಜಿಲ್ಲೆಯ ರೈತರಿಂದ ಸಹಾಯಧಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಈ ಯೋಜನೆಯಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಕರಣಾ ಘಟಕವನ್ನು ಉನ್ನತೀಕರಿಸಲು ಒಂದು ಜಿಲ್ಲೆ ಒಂದು ಉತ್ಪನ್ನ ಉಪಕ್ರಮದಲ್ಲಿ ಸಹಾಯಧನ ನೀಡಲಾಗುತ್ತಿದ್ದು, ಈ ಯೋಜನೆ ಅಡಿಯಲ್ಲಿ ಜಿಲ್ಲೆಯ ಬೆಲ್ಲದ ಉತ್ಪಾದನೆ ಆಯ್ಕೆಯಾಗಿದ್ದು, ಬೆಲ್ಲ ತಯಾರಿಕೆ ಘಟಕಗಳ ಸ್ಥಾಪನೆ, ಉತ್ಪಾದನೆ, ಬ್ರ್ತ್ರ್ಯಾಂಡಿಂಗ್,ಲೆಬಲಿಂಗ್, ಮಾರುಕಟ್ಟೆಯ ಬೆಂಬಲ, ರಫ್ತಿಗೆ ಪೆÇ್ರೀತ್ಸಾಹ ನೀಡುವ ಮೂಲ ಅಂತಹ ವ್ಯೆಕ್ತಿ ಅಥವಾ ಸಂಸ್ಥೆಗಳನ್ನು ಉದ್ದಿಮೆದಾರರಾಗಿ ರೂಪಿಸಲು ಮತ್ತು ಮಾರಾಟ, ರಫ್ತು, ಘಟಕಗಳನ್ನು ಸ್ಥಾಪಿಸುವವರಿಗೆ ಧನ ಸಹಾಯ ಸಿಗಲಿದೆ.

ಈ ಯೋಜನೆಯು 2020-21 ರಿಂದ ಪ್ರಾರಂಭವಾಗಿ 2024-25 ವರಗೆ ಅನುಷ್ಠಾನಗೊಳ್ಳಲಿದೆ. ಮೈಸೂರಿನಲ್ಲಿರುವ ಕೇಂದ್ರೀಯ ಆಹಾರ ಸಂಸ್ಕರಣಾ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯ ಮೂಲಕ ಅಗತ್ಯ ತಾಂತ್ರಿಕ ಮತ್ತು ಸಂಶೋಧನಾ ಬೆಂಬಲವನ್ನು ಫಲಾನುಭವಿಗಳಿಗೆ ನೀಡಲಾಗುವುದು . ವೈಯಕ್ತಿಕವಾಗಿ ಹೊಸದಾಗಿ ಘಟಕಗಳನ್ನು ಸ್ಥಾಪಿಸಿದರೆ ಗರಿಷ್ಠ 10 ಲP್ಷÀ ರೂ. ಮೀತಿಯೊಂದಿಗೆ ಯೋಜನಾ ವೆಚ್ಚದ 35%ಸಾಲ ಸಂಪರ್ಕಿತ ಬಂಡವಾಳ ಸಹಾಯಧನ ಪಡೆದುಕೊಳ್ಳಬಹುದಾಗಿದೆ.

ಫಲಾನುಭವಿಗಳ ಕೊಡುಗೆ ಯೋಜನಾ ವೆಚ್ಚದ ಕನಿಷ್ಠ ಶೇ.10 ರಷ್ಟು ಇರಬೇಕು. ಬಾಕಿ ಬ್ಯಾಂಕ್ ಸಾಲವಾಗಿರಬೇಕು. ಆಸಕ್ತ ಸಂಘ ಸಂಸ್ಥೆಗಳು, ಸ್ವಸಹಾಯ ಗುಂಪುಗಳ ಸದಸ್ಯರು, ಒಕ್ಕೊಟಗಳು, ಸಹಕಾರ ಸಂಸ್ಥೆಗಳು ಕೊಡ ಈ ಯೋಜನೆಯಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಆಸಕ್ತರು ಮೂಲಕ ಆನಲೈನ್ ಅರ್ಜಿಗಳನ್ನು ಸಲ್ಲಿಸಬಹುದು.

ಕ್ಷೇತ್ರಮಟ್ಟದಲ್ಲಿ ಕಿರು ಆಹಾರ ಸಂಸ್ಕರಣಾ ಉದ್ಯಮಗಳ ಸ್ಥಾಪನೆಗೆ ಅವಶ್ಯವಾದ ತರಬೇತಿ, ಸಮಗ್ರ ಯೋಜನಾ ವರದಿ ತಯಾರಿಕೆ, ಕೈ ಆಸರೆ ಬೆಂಬಲ, ಮಾರುಕಟ್ಟೆ ಬೆಂಬಲ ಹಾಗೂ ಎಫ್‍ಎಸ್‍ಎಸ್‍ಐ ಪ್ರಮಾಣ ಪತ್ರಗಳನ್ನು ದೊರಕಿಸಿಕೊಡಲು ಮತ್ತು ಯೋಜನೆಯ ವಿವಿರವಾದ ಮಾಹಿತಿಗಾಗಿ ಕೈಷಿ ಇಲಾಖೆ/ತೋಟಗಾರಿಕೆಯ ಅýಕಾರಿಗಳನ್ನು ಸಂಪರ್ಕಿಸುವಂತೆ ಜಿಲ್ಲಾ ಜಂಟಿ ಕೈಷಿ ನಿರ್ದೇಶಕಿ ಚೇತನಾ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.