News

ಸ್ವಯಂ ಉದ್ಯೋಗ ಕೈಗೊಳ್ಳಲು ಎಚ್ಐವಿ ಸೋಂಕಿತ ಮಹಿಳೆಯರಿಗೆ ಸಾಲ ಸೌಲಭ್ಯ

15 November, 2020 7:30 AM IST By:

ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ 2020–21ನೇ ಸಾಲಿಗೆ ಧನಶ್ರೀ ಯೋಜನೆಯಡಿ ಎಚ್ಐವಿ ಸೋಂಕಿತ ಮಹಿಳೆಯರಿಗೆ ಸ್ವಯಂ ಉದ್ಯೋಗ ಕೈಗೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ನೀಡುವ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಫಲಾನುಭವಿಗೆ ಒಟ್ಟು 50 ಸಾವಿರ ಯೋಜನಾ ವೆಚ್ಚದಡಿ  25 ಸಾವಿರ ಬಡ್ಡಿ ರಹಿತ ಸಾಲ ಹಾಗೂ  25 ಸಾವಿರ ಸಹಾಯ ಧನ ನೀಡಲಾಗುತ್ತದೆ.

ಅರ್ಜಿದಾರರು 18ರಿಂದ 60ವರ್ಷದೊಳಗಿರಬೇಕು. ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಕಡ್ಡಾಯ ವಾಗಿ ಖಾತೆ ಹೊಂದಿರಬೇಕು. ಬ್ಯಾಂಕ್ ಖಾತೆಯ ಪ್ರತಿಯನ್ನು ಲಗತ್ತಿಸಬೇಕು ಹಾಗೂ ಬ್ಯಾಂಕ್ ಖಾತೆಯೊಂದಿಗೆ ಅರ್ಜಿದಾರರ ಆಧಾರ್ ಲಿಂಕ್ ಆಗಿರಬೇಕು.

ಯಾವುದೇ ಆರ್ಥಿಕ ಸಂಸ್ಥೆ, ಬ್ಯಾಂಕುಗಳಲ್ಲಿ ಸುಸ್ತಿದಾರರಾಗಿರ ಬಾರದು ಎಂಬ ಬಗ್ಗೆ ಧೃಡೀಕರಣ ಪತ್ರ ಸಲ್ಲಿಸಬೇಕು. ಕುಟುಂಬದಲ್ಲಿ ಎಚ್ಐವಿ ಸೋಂಕಿತ ಒಬ್ಬ ಮಹಿಳೆ ಮಾತ್ರ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. ಎಚ್ಐವಿ ಸೋಂಕಿನ ಕುರಿತು ಜಿಲ್ಲೆ, ತಾಲ್ಲೂಕು ಹತ್ತಿರದ ಆರೋಗ್ಯ ಕೇಂದ್ರದಲ್ಲಿನ ಐಸಿಟಿಸಿ, ಪಿಪಿಟಿಸಿಟಿ ಕೇಂದ್ರದ ವೈದ್ಯಕೀಯ ವರದಿ, ಬಿಪಿಎಲ್ ಪಡಿತರ ಚೀಟಿ ಹೊಂದಿರಬೇಕು.

ಅರ್ಜಿಯನ್ನು ಚಾಮರಾಜನಗರ ಜಿಲ್ಲೆಯವರು  ನಗರದ ಭ್ರಮರಾಂಬ ಬಡಾವಣೆಯ 5ನೇ ಕ್ರಾಸ್‌ನಲ್ಲಿರುವ ಚೈತನ್ಯ ನೆಟ್‌ವರ್ಕ್ ಸಂಸ್ಥೆಯಲ್ಲಿ (ದೂರವಾಣಿ ಸಂಖ್ಯೆ 08226–222960, 9972970470) ಉಚಿತವಾಗಿ ಪಡೆದು, ಭರ್ತಿ ಮಾಡಿದ ದಾಖಲೆಗಳೊಂದಿಗೆ ಇದೇ 30ರೊಳಗೆ ದ್ವಿ-ಪ್ರತಿಯಲ್ಲಿ ಸಲ್ಲಿಸಬೇಕು ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.