ಕೋವಿಡ್ ಕಾರಣದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರಿಗೆ ಸಾಲ ಸೌಲಭ್ಯ ಒದಗಿಸಲು ಮೈಕ್ರೋ ವೈಯುಕ್ತಿಕ ಸಾಲ ಯೋಜನೆಯಡಿಯಲ್ಲಿ ಸಾಲ ಸೌಲಭ್ಯ ನೀಡಲಾಗುವುದು. ಸಾಲ ಪಡೆಯು ಈಗ ನೀವು ಬ್ಯಾಂಕುಗಳಿಗೆ ಅಲೆದಾಡಬೇಕಾಗಿಲ್ಲ. ಮನೆಯಲ್ಲಿಯೇ ಕುಳಿತು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಸಾಲ ಸೌಲಭ್ಯ ಪಡೆಯಬಹದು. ಅದು ಹೇಗೆ ಅಂದುಕೊಂಡಿದ್ದೀರಾ.... ಇಲ್ಲಿದೆ ಸಂಪೂರ್ಣ ಮಾಹಿತಿ...
ಮೈಕ್ರೊ ಸಾಲ ಯೋಜನೆಯಡಿ ಅಲ್ಪಸಂಖ್ಯಾತ ಬಡ ಮಹಿಳೆಯರು ಅಂದರೆ ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ, ಜೈನ, ಸಿಖ್, ಹಾಗೂ ಆಂಗ್ಲೋ ಇಂಡಿಯನ್ ಜನಾಂಗದ ಮಹಿಳೆಯರು ಅರ್ಜಿ ಸಲ್ಲಿಸಬಹುದು. ಬಿಪಿಎಲ್ ಕಾರ್ಡ್ ಹೊಂದಿರುವ 25 ರಿಂದ 50 ವರ್ಷ ವಯೋಮಾನದವರು ಅರ್ಜಿ ಸಲ್ಲಿಸಬಹುದು.
ತಳ್ಳುವ ಗಾಡಿಯಲ್ಲಿ ವ್ಯಾಪಾರ, ಬೀದಿ ಬದಿ ವ್ಯಾಪಾರ, ಜಾತ್ರೆಗಳಲ್ಲಿ ವ್ಯಾಪಾರ, ಕಿರಾಣಿ ಅಂಗಡಿ, ಅರಿಶಿಣ ಕುಂಕುಮ, ಅಗರಬತ್ತಿ, ಕರ್ಪೂರ, ಫುಟ್‌ಪಾತ್‌ಗಳ ಮೇಲೆ ಕಾಫಿ-ಟೀ, ಎಳನೀರು, ಹೂವಿನ ವ್ಯಾಪಾರ, ಹಣ್ಣು-ತರಕಾರಿ ಮಾರಾಟದಂತಹ ಚಟುವಟಿಕೆಗಳನ್ನ ನಡೆಸಲು ಅಲ್ಪಾವಧಿ ಸಾಲ ನೀಡಲಾಗುತ್ತದೆ.
ತಳ್ಳುವ ಗಾಡಿ, ವ್ಯಾಪಾರ, ಬೀದಿ ವ್ಯಾಪಾರ ಹೀಗೆ ಸಣ್ಣ ಪುಟ್ಟ ಕೆಲಸಗಳಲ್ಲಿ ತೊಡಗಿರುವ ವ್ಯಾಪಾರಕ್ಕಾಗಿ 10 ಸಾವಿರ ಅಲ್ಪಾವಧಿ ಸಾಲ ನೀಡಲಾಗುತ್ತದೆ. ಇದಕ್ಕಾಗಿ ಇಂದಿನಿಂದ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದ್ದು, ಡಿ.10 ರೊಳಗೆ ಅರ್ಜಿ ಸಲ್ಲಿಸಲು ಕೊನೆದಿನವಾಗಿದೆ.
ಸಧ್ಯ ಆರಂಭಿಕ ಬಂಡವಾಳವಾಗಿ 10 ಸಾವಿರ ರೂಪಾಯಿ ಅಲ್ಪಾವಧಿ ಸಾಲ ನೀಡಲಾಗುವುದು. ಇದರಲ್ಲಿ 8 ಸಾವಿರ ರೂಪಾಯಿ ಸಾಲ ಮತ್ತು 2 ಸಾವಿರ ರೂಪಾಯಿ ಸರ್ಕಾರ ಸಬ್ಸಿಡಿ ನೀಡಲಿದೆ. ಸಾಲ ಪಡೆಯಲು ಆಸಕ್ತಿ ಇರುವ ಮಹಿಳೆಯರು ಮೈಕ್ರೊ ಸಾಲ(ವೈಯಕ್ತಿಕ) ಯೋಜನೆಯ ಅಧಿಕೃತ ವೆಬ್ಸೈಟ್ kmdcmicro.karnataka.gov.in ಗೆ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಆಯಾ ಜಿಲ್ಲೆಯ ವ್ಯವಸ್ಥಾಪಕ ಕಚೇರಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಕಚೇರಿಗಳಿಗೆ ಸಂಪರ್ಕಿಸಬಹುದು. ಅಥವಾ ವೆಬ್ ಸೈಟ್ ಗೆ ನಲ್ಲಿ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಓದಿ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.