News

ಮಾವು,ದಾಳಿಂಬೆ, ಪೇರಲ, ಲಿಂಬೆ, ಚಿಕ್ಕು ನಾಟಿ ಮಾಡಲಿಚ್ಚಿಸುವ ರೈತರಿಗೆ ಸಹಾಯಧನ ನೀಡಲು ಅರ್ಜಿ ಆಹ್ವಾನ

02 December, 2020 7:05 PM IST By:

ಬಹು ವಾರ್ಷಿಕ ತೋಟಗಾರಿಕೆ ಬೆಳೆಗಳಾದ ಮಾವು, ದಾಳಿಂಬೆ, ಪೇರಲ, ಲಿಂಬೆ, ಚಿಕ್ಕು ನಾಟಿ ಮಾಡಿ ಯಾವುದೇ ಸರ್ಕಾರದ ಸವಲತ್ತು ಪಡೆಯದ ಪರಿಶಿಷ್ಟ ಜಾತಿ ರೈತರು ಮತ್ತು 15 ದಿನಗಳಲ್ಲಿ ನಾಟಿ ಮಾಡಲು ಇಚ್ಚಿಸುವ ರೈತರು ರಾಷ್ಟ್ರೀಯ ಸುಸ್ಥಿರ ಕೈಷಿ ಅಭಿಯಾನ ಯೋಜನೆಯಡಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಜಲಾನಯನ ಗುಚ್ಚ ಗ್ರಾಮಗಳಾದ ಬಾಗಲಕೋಟೆ ಜಿಲ್ಲೆಯ ತುಳಸಿಗೇರಿ, ಗೋವಿಂದಕೊಪ್ಪ, ಹಿರೇಸಂಶಿ, ಚಿಕ್ಕಸಂಶಿ, ದೇವನಾಳ, ಸೊಕನಾದಗಿ, ಛಬ್ಬಿ, ಸಾವಳಗಿ, ತುಂಗಳ, ಕನ್ನೊಳ್ಳಿ, ಕುರಗೋಡ, ಕಿತ್ತಲಿ, ಗೋವಿಂದಕೊಪ್ಪ, ಕಳಸ, ವಡವಟ್ಟಿ ಗ್ರಾಮದ ರೈತರು ಅರ್ಜಿ ಸಲ್ಲಿಸಬಹುದು.

ಇದಕ್ಕಿಂತ ಮುಂಚಿತವಾಗಿ ಸಾಲಸೌಲಭ್ಯ ಪಡೆಯದ ರೈತರಿಗೆ ಆದ್ಯತೆ ನೀಡಲಾಗುವುದು ಬಾಗಲಕೋಟೆ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರೈತರು  ಹೆಚ್ಚಿನ ಮಾಹಿತಿಗಾಗಿ ಮೊನಂ.8660471504ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.