ಅಫಜಲಪುರ ತಾಲೂಕಿನ ತೋಟಗಾರಿಕೆ ಬೆಳೆಗಳ ಬೀಜ, ಗಿಡಗಳ ಹಾಗೂ ಸಸಿಗಳ ಮಾರಾಟಗಾರರು ಸಕಾಲ ಸೇವೆಯಡಿ ಸೇವಾ ಸಿಂಧು ತಂತ್ರಾಂಶದಲ್ಲಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿ ಪರವಾನಿಗೆ ಪತ್ರ ಪಡೆಯಬೇಕೆಂದು ಅಫಜಲಪೂರ (ಜಿ.ಪಂ.) ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.
ಅಫಜಲಪುರ ತಾಲೂಕಿನ ಬೀಜ, ಗಿಡ ಹಾಗೂ ಸಸಿಗಳ ಮಾರಾಟಗಾರರು ಮಾರಾಟದ ಪರವಾನಿಗೆ ಪಡೆಯುವುದು ಕಡ್ಡಾಯವಾಗಿದೆ. ಮುಂದಿನ ದಿನಗಳಲ್ಲಿ ತಮ್ಮ ಮಳಿಗೆ, ನರ್ಸರಿ ಪರವಾನಿಗೆ ಪಡೆಯುವುದು ಅವಶ್ಯಕವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಅಫಜಲಪೂರ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಶಂಕರಗೌಡ ಇವರ ಮೊಬೈಲ್ ಸಂಖ್ಯೆ 7760969088 ನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 80470-28342ಗೆ ಸಂಪರ್ಕಿಸಲು ಕೋರಲಾಗಿದೆ.