News

ರಾಜ್ಯ ಕೃಷಿ ಇಲಾಖೆಯಿಂದ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ

09 May, 2021 7:06 PM IST By:

ರಾಜ್ಯ ಕೃಷಿ ಇಲಾಖೆಯಿಂದ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ರಾಜ್ಯ ಕೃಷಿ ಇಲಾಖೆಯಲ್ಲಿ ವಿವಿಧ ಹುದ್ದೆಗಳ ಅರ್ಜಿ ಆಹ್ವಾನಕ್ಕೆ ಸಂಪೂರ್ಣ ಅಧಿಸೂಚನೆಗಳನ್ನು ಪ್ರಕಟಿಸಲಾಗಿದೆ.

ಹುದ್ದೆಗಳ ವಿವರ

ಹುದ್ದೆಗಳ ಹೆಸರು                                  ಹುದ್ದೆಯ ಸಂಖ್ಯೆ

1.ರಾಜ್ಯ ತಾಂತ್ರಿಕ ಘಟಕದ ಮುಖ್ಯಸ್ಥರು -           1

2.ಕಾರ್ಯಕ್ರಮ ಸಂಯೋಜಕರು           -           1

3.ಸಂವಹನ ಅಧಿಕಾರಿ                          -           1

4.ಸಾಮರ್ಥ್ಯವೃದ್ಧಿ ಅಧಿಕಾರಿ                  -           1

5.ಮಾಹಿತಿ ತಂತ್ರಜ್ಞಾನ ಮತ್ತು               -           1

ನಿರ್ವಹಣಾ ವ್ಯವಸ್ಥೆ ತಜ್ಞರು           

6.ದತ್ತಾಂಶ ವಿಶ್ಲೇಷಕರು                       -           1

7.ಮೇಲ್ವಿಚಾರಣೆ ಮತ್ತು                      -           1

ಮೌಲ್ಯಮಾಪನ ತಜ್ಞರು

8.ತೋಟಗಾರಿಕಾ ತಜ್ಞರು                    -           1

9.ಗುಮಾಸ್ತ                                      -           1

10.ಡೇಟಾ ಎಂಟ್ರಿ ಆಪರೇಟರ್           -           1

ಒಟ್ಟು ಹುದ್ದೆಗಳ ಸಂಖ್ಯೆ :- 10

ಉದ್ಯೋಗ ಸ್ಥಳ:- ಬೆಂಗಳೂರು

ವಿದ್ಯಾರ್ಹತೆ:

ಹುದ್ದೆಗಳಿಗೆ ಅನುಗುಣವಾಗಿ ಪದವಿ / ಸ್ನಾತಕೋತ್ತರ ಪದವಿ / ಬಿ.ಎಸ್ಸಿ. ಅಥವಾ ಎಂ.ಎಸ್ಸಿ.ಅಗ್ರಿಕಲ್ಚರ್/ ಎಂ.ಟೆಕ್ ಅಥವಾ ಬಿ.ಟೆಕ್. ವಿದ್ಯಾರ್ಹತೆಯ ಜೊತೆಗೆ ನಿಗದಿತ ಅನುಭವ  ಹೊಂದಿರಬೇಕು.

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:-07-05-2021,  ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:-17-5-2021

ಅರ್ಜಿಶುಲ್ಕ:

 ಈ ಹುದ್ದೆಗಳಿಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ

ವೇತನ: ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ‌.20,000 ದಿಂದ ರೂ.70,000 ವೇತನ ನೀಡಲಾಗುವುದು.

ಆಯ್ಕೆ ವಿಧಾನ: ನೇರ ಸಂದರ್ಶನ ನಡೆಸುವ ಮುಖಾಂತರ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಅರ್ಜಿ ಸಲ್ಲಿಸುವ ವಿಧಾನ?

ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯಲ್ಲಿ ಮಾಹಿತಿಯನ್ನು ತುಂಬಿ ಅಗತ್ಯ ದಾಖಲೆಗಳೊಂದಿಗೆ ಖುದ್ದಾಗಿ ಕಛೇರಿಗೆ ಹಾಜರಾಗಿ ಸಲ್ಲಿಸಬಹುದು ಅಥವಾ ಭರ್ತಿ ಮಾಡಿದ ಅರ್ಜಿ ಹಾಗೂ ಮೂಲ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಕಛೇರಿಯ ಇಮೇಲ್ ವಿಳಾಸಕ್ಕೆ ಕಳುಹಿಸಬಹುದು.

ಅರ್ಜಿ ಸಲ್ಲಿಸುವ ವಿಳಾಸ:

ಕೃಷಿ ಆಯುಕ್ತರು, ಕೃಷಿ ಆಯುಕ್ತಾಲಯ, ಶೇಷಾದ್ರಿ ರಸ್ತೆ , ಬೆಂಗಳೂರು – 560001, ಇ ಮೇಲ್ ವಿಳಾಸ : stsuagri2020@gmail.com

ಅರ್ಜಿ ನಮೂನೆಯನ್ನು ಈ ಕೆಳಗೆ ಕೊಟ್ಟಿರುವ ಲಿಂಕ್ ಮುಖಾಂತರ ಡೌನೋಲ್ಡ್ ಮಾಡಿಕೊಳ್ಳಬಹುದು. https://drive.google.com/file/d/1UtA7gua77GO4RHjXtQWh1PnV3Pxp-yFO/view?usp=drivesdk

ನಿಮ್ಮ ಸಮಸ್ಯಗಳಿಗೆ ಅಥವಾ ಹೆಚ್ಚಿನ ಮಾಹಿತಿಗಾಗಿ ಕಛೇರಿಯನ್ನು ಸಂಪರ್ಕಿಸಿ. ದೂರವಾಣಿ ಸಂಖ್ಯೆ : 080 22074188