ರಾಷ್ಟ್ರೀಯ ಸುಸ್ಥಿರ ಕೃಷಿ ಅಭಿಯಾನ-ಮಳೆಯಾಶ್ರಿತ ಪ್ರದೇಶಾ ಭಿವೃದ್ಧಿ ಕಾರ್ಯಕ್ರಮದ ಜಾನುವಾರು ಘಟಕದಡಿ ಆಕಳು, ಎಮ್ಮೆ, ಕುರಿ ಖರೀದಿಸಲು ಹಾವೇರಿ ಜಿಲ್ಲೆಯ ಕನಿಷ್ಠ 2 ಎಕೆರೆ 20 ಗುಂಟೆ ಸ್ವಂತ ಜಮೀನು ಹೊಂದಿರುವ ರೈತ ಮತ್ತು ರೈತ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಘಟಕದಡಿ ಶೇ 50ರಷ್ಟು ಸಹಾಯಧನವಿದೆ. ಒಂದು ಘಟಕಕ್ಕೆ 80 ಸಾವಿರ ನಿಗದಿಯಾಗಿದ್ದು, ಅದರಲ್ಲಿ ಶೇ 50ರಷ್ಟು ಹಣವನ್ನು ರೈತರು ಭರಿಸಬೇಕು. 10 ಆಡು, ಕುರಿ ಖರೀದಿಸಲು ಒಂದು ಘಟಕಕ್ಕೆ 50 ಸಾವಿರ ನಿಗದಿಯಾಗಿದ್ದು, ಅದರಲ್ಲಿ 25 ಸಾವಿರ ಮೊತ್ತವನ್ನು ರೈತರು ಭರಿಸಬೇಕು.
ರೈತರು ತಮ್ಮ ಜಮೀನಿನ ಸರ್ವೆ ಹಾಗೂ ಹಿಸ್ಸಾ ಸಂಖ್ಯೆ, ಐಎಫ್‌ಎಸ್‌ಸಿ ಕೋಡ್‌ನೊಂದಿಗೆ ಬ್ಯಾಂಕ್ ಖಾತೆ ಸಂಖ್ಯೆ, ಆಧಾರ ಕಾರ್ಡ್ ಸಂಖ್ಯೆಯ ವಿವರಗಳೊಂದಿಗೆ ತಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಗಳಿಗೆ ಡಿ.5ರೊಳಗೆ ಅರ್ಜಿ ಸಲ್ಲಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.