ಪ್ರಧಾನಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮ ನಿರ್ಭರ ನಿಧಿ (ಪಿಎಂ ಸೇವಾನಿಧಿ)ಯಡಿ ಸಾಲ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಈ ಯೋಜನೆಯಡಿ ಬೀದಿ ಬದಿ ವ್ಯಾಪಾರಸ್ಥರು ಸಾಲ ಸೌಲಭ್ಯ ಪಡೆದುಕೊಂಡು ಲಾಭ ಪಡೆದುಕೊಳ್ಳಬೇಕೆಂದು ಹರಿಹರ ಜಿಲ್ಲಾ ಯೋಜನಾ ಕೋಶದ ಅಧಿಕಾರಿ ಜಿ. ನಜ್ಮಾ ಹಾಗೂ ವಿಜಯಪುರ ಮಹಾನಗರ ಪಾಲಿಕೆ ಪಟ್ಟಣ ಮರಾಟ ಸಮಿತಿಯ ಸದಸ್ಯ ಯಲ್ಲಪ್ಪ ಘೋರ್ಪಡೆ ಮನವಿ ಮಾಡಿದ್ದಾರೆ.
ಬೀದಿ ಬದಿ ವ್ಯಾಪಾರಿಗಳ ಆರ್ಥಿಕ ಸಬಲೀಕರಣಕ್ಕಾಗಿ ಆತ್ಮನಿರ್ಭರ್ ನಿಧಿ ಎಂಬ ವಿಶೇಷ ಕಿರು ಸಾಲ ಸೌಲಭ್ಯ ಯೋಜನೆಯಡಿಯಲ್ಲಿ ಬೀದಿ ಬದಿ ವ್ಯಾಪಾರಿಗಲು ಸಹಾಯ ಧನ ಪಡೆಯಬಹುದು.
ಲಾಕ್ಡೌನ್ ಅವಧಿಯಲ್ಲಿ ಬೀದಿ ಬದಿ ವ್ಯಾಪಾರಸ್ಥರ ಜೀವನೋಪಾಯದ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದು, ಬೀದಿ ವ್ಯಾಪಾರಿಗಳ ಜೀವನೋಪಾಯ ಅಭಿವೃದ್ಧಿಗಾಗಿ ಹಾಗೂ ಅವರ ವ್ಯವಹಾರ ಪುನರ್ ಪ್ರಾರಂಭಿಸಲು ಅವಕಾಶವಿದೆ. ಇದನ್ನು ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.
ಬೀದಿ ಬದಿ ವ್ಯಾಪಾರಸ್ಥರಿಗೆ ಕೈಗೆಟುಕುವ ದರದಲ್ಲಿ 10 ಸಾವಿರ ವರೆಗೆ ಕಿರು ಸಾಲ ನೀಡಲಾಗುವುದು. ನಿಯಮಿತ ಸಾಲ ಮರು ಪಾವತಿಗೆ ಉತ್ತೇಜಿಸುವುದು ಡಿಜಿಟಲ್ ವಹಿವಾಟಿಗೆ ಪ್ರೋತ್ಸಾಹ ನೀಡುವುದು ಹಾಗೂ ಸರಿಯಾದ ರೀತಿಯಲ್ಲಿ ಸೌಲಭ್ಯವನ್ನು ಪಡೆದುಕೊಂಡು ಸದ್ಬಳಕೆ ಮಾಡಿಕೊಂಡ ವ್ಯಕ್ತಿಗಳಿಗೆ ಬಹುಮಾನ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ವಾಣಿಜ್ಯ, ಪ್ರಾದೇಶಿಕ ಗ್ರಾಮೀಣ, ಸಣ್ಣ ಹಣಕಾಸು, ಸಹಕಾರಿ ಬ್ಯಾಂಕ್ ಗಳು ಸೇರಿದಂತೆ ಮೈಕ್ರೋ ಫೈನಾನ್ಸ್ ಕಂಪನಿಗಳು ಈ ಯೋಜನೆಯಡಿಯಲ್ಲಿ ಸಾಲ ನೀಡುವ ಸಂಸ್ಥೆಗಳಾಗಿವೆ. ಆದ್ದರಿಂದ ಸ್ಥಳಿಯವಾಗಿ ಜನಸಂಖ್ಯೆಗೆ ಅನುಗುಣವಾಗಿ ಶೇ. 1 ರಷ್ಟು ವ್ಯಾಪಾರಸ್ಥರಿಗೆ ಸಾಲ ನೀಡಲಾಗುವುದು.
ಸಕಾಲದಲ್ಲಿ ಸಾಲ ಮರುಪಾವತಿ ಮಾಡಿದರೆ ವಾರ್ಷಿಕ ಶೇ. 7 ರಷ್ಟು ಬಡ್ಡಿ ಸಬ್ಸಿಡಿ ಸಿಗುತ್ತದೆ. ಗುರುತಿನ ಚೀಟಿ, ವ್ಯಾಪಾರದ ಪ್ರಮಾಣದಪತ್ರ ಇಲ್ಲದಿದ್ದರೂ ಸ್ಥಳೀಯ ಸಂಸ್ಥೆಯ ಶಿಫಾರಸ್ಸು ಪತ್ರವಾದರೂ ಇರಬು. ಮಹಾನಗರ ಪಾಲಿಕೆ ವಿಜಯಪುರ ಹಾಗೂ ಸೇವಾ ಸಿಂಧು (ಕಾಮನ್ ಸರ್ವಿಸ್ ಸೆಂಟರ್) ನಲ್ಲಿ ಆನ್ ಲೈನ್ ಅರ್ಜಿ ಸಲ್ಲಿಸಿ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ 9880165121 ಗೆ ಸಂಪರ್ಕಿಸಲು ಕೋರಲಾಗಿದೆ. ಆನ್ ಲೈನ್ ಅರ್ಜಿ ಸಲ್ಲಿಸುವವರು www.pmsvanidhi.mohua.gov.in ಮೂಲಕ ಸಾಲ ಪಡೆಯಲು ಅರ್ಜಿ ಸಲ್ಲಿಸಬಹುದು.