News

ಪಿಎಂ ಸ್ವನಿಧಿ ಯೋಜನೆಯಡಿ ಸಾಲ ಪಡೆಯುವುದು ಹೇಗೆ ಗೊತ್ತಾ..... ಇಲ್ಲಿದೆ ಸಂಪೂರ್ಣ ಮಾಹಿತಿ

06 July, 2021 10:20 PM IST By:

ಕೇಂದ್ರ ಸರ್ಕಾರವು ಆತ್ಮನಿರ್ಭರ ಯೋಜನೆಯಡಿಯಲ್ಲಿ ಪಿಎಂ ಸ್ವನಿಧಿ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯಡಿ ಬೀದಿ ವ್ಯಾಪಾರಸ್ಥರಿಗೆ ಸಾಲಸೌಲಭ್ಯ ಒದಗಿಸಲಾಗುವುದು.

ಹೌದು ಬೀದಿ ಬದಿ ಮತ್ತು ಸಣ್ಣ ವ್ಯಾಪಾರಸ್ಥರಿಗೆ ಸಹಾಯ ನೀಡುವ ಉದ್ದೇಶದಿಂದಾಗಿ ಜಾರಿಗೆ ತರಲಾಗಿದೆ. ಬೀದಿ ಬದಿ ವ್ಯಾಪಾರಿಗಳಇಗೆ 10 ಸಾವಿರ ರೂಪಾಯಿ ಸಾಲ ಸಿಗಲಿದೆ. ಒಂದು ವರ್ಷದ ಮಾಸಿಕ ಕಂತುಗಳಲ್ಲಿ ತೀರಿಸಲು ಅವಕಾಶ ನೀಡಸಲಾಗಿದೆ.

ಪಿಎಂ. ಸ್ವನಿಧಿ ಯೋಜನೆಯಡಿ ಬೀದಿ ವ್ಯಾಪಾರಿಗಳಿಗೆ 10 ಸಾವಿರ ರೂ.ಗಳ ದುಡಿಯುವ ಬಂಡವಾಳ ಸೌಲಭ್ಯದೊಂದಿಗೆ ನಿಯಮಿತ ಪಾವತಿಗೆ ಶೇಕಡಾ 7ರ ಬಡ್ಡಿ ದರದಂತಹ ಪ್ರೋತ್ಸಾಹಕಗಳನ್ನು ಹಾಗೂ ಡಿಜಿಟಲ್ ವಹಿವಾಟಿಗೆ ಪುರಸ್ಕಾರವನ್ನೂ ನೀಡಲಾಗುವುದು.

ಏನೇನು ದಾಖಲೆಗಳು ಬೇಕು?

ವ್ಯಾಪಾರಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸುವಾಗ ತಾವು ವ್ಯಾಪಾರ ಮಾಡುವ ಬಗೆಗಿನ ಸರ್ಟಿಫಿಕೇಟ್‌ (CoV) ಅಥವಾ ವ್ಯಾಪಾರಿಗಳ ಗುರುತಿನ ಚೀಟಿ (ID) ಅಥವಾ ವ್ಯಾಪಾರ ಮಾಡುವ ಪ್ರೊವಿಶನಲ್‌ ಸರ್ಟಿಫಿಕೇಟ್‌ ಅಥವಾ ಶಿಫಾರಸಿನ ಪತ್ರ (LoR)ವನ್ನು ಸಲ್ಲಿಸಬೇಕು. ಇದರ ಜತೆಗೆ ಆಧಾರ್‌ ಕಾರ್ಡ್‌, ಮತದಾರರ ಗುರುತಿನ ಚೀಟಿ, ಆಧಾರ್‌ ಜೋಡಣೆಯಾಗಿರುವ ಬ್ಯಾಂಕ್‌ ಖಾತೆ ವಿವರ ಹಾಗೂ ಸ್ಥಳೀಯ ಸಾಕ್ಷಿದಾರರ ಸಹಿ ಕೂಡ ಅರ್ಜಿ ಸಲ್ಲಿಸುವಾಗ ಅಗತ್ಯವಿದೆ.

ಪಿಎಂ ಸ್ವನಿಧಿಗೆ ಸಾಲ ನೀಡುವ ಸಂಸ್ಥೆಗಳು:

ಬ್ಯಾಂಕ್‌ಗಳು, ಶೆಡ್ಯೂಲ್ಡ್ ಕಮರ್ಶಿಯಲ್‌ ಬ್ಯಾಂಕ್‌ (ಎಸ್‌ಸಿಬಿ), ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ (ಆರ್‌ಆರ್‌ಬಿ), ಸಣ್ಣ ಹಣಕಾಸು ಬ್ಯಾಂಕ್‌ (ಎಸ್‌ಎಫ್ಬಿ), ಕೋ-ಆಪರೇಟಿವ್‌ ಬ್ಯಾಂಕ್‌, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಎಸ್‌ಎಚ್‌ಜಿ ಬ್ಯಾಂಕ್‌. ಉದಾ: ಸ್ಟ್ರೀಟ್‌ ನಿಧಿ, ಬ್ಯಾಂಕಿಂಗೇತರ ಹಣಕಾಸು ಸಂಸ್ಥೆ (ಎನ್‌ಬಿಎಫ್ಸಿ)ಗಳು ಮತ್ತು ಸಣ್ಣ ಹಣಕಾಸು ಸಂಸ್ಥೆ (ಎಂಎಫ್‌ಐ)ಗಳು.

ಯೋಜನೆಯ ಲಾಭಗಳು:

ಬಂಡವಾಳದ ಸಾಲದ ಅವಧಿ 1 ವರ್ಷವಿದೆ. ಅವಧಿಯೊಳಗೆ ಮರುಪಾವತಿ ಮಾಡಿದವರಿಗೆ ಬಡ್ಡಿಯಲ್ಲಿ  ಶೇ. 7 ರಷ್ಟು ಸಬ್ಸಿಡಿ. ತ್ತೈಮಾಸಿಕ ಪಾವತಿಗೂ ಅವಕಾಶ ನೀಡಲಾಗಿದೆ.   ಡಿಜಿಟಲ್‌ ವಹಿವಾಟಿನ ಮೇಲೆ ಮಾಸಿಕ ಕ್ಯಾಶ್‌ ಬ್ಯಾಕ್‌ ಪ್ರೋತ್ಸಾಹ ಧನ.  ಮೊದಲ ಸಾಲದ ಸಮಯೋಚಿತ/ಶೀಘ್ರ ಪಾವತಿಯ ಮೇಲೆ ಸಾಲ ಅರ್ಹತೆ ಏರಿಸಲಾಗುತ್ತದೆ.  ದೇಶಾದ್ಯಂತ ನಗರ ಸ್ಥಳೀಯ ಸಂಸ್ಥೆಗಳನ್ನು ಈ ಯೋಜನೆಯು ಒಳಗೊಳ್ಳುತ್ತದೆ.  ಸಾಲ ಪಡೆಯಲು ಯಾವುದೇ ಮೇಲಾಧಾರ ಭದ್ರತೆಯ ಅಗತ್ಯವಿಲ್ಲ. ಶೀಘ್ರ ಪಾವತಿಗೆ ಯಾವುದೇ ದಂಡವಿಲ್ಲ. 

ಅರ್ಜಿ ಸಲ್ಲಿಸುವುದು ಹೇಗೆ ?

ಪಿಎಂ ಸ್ವನಿಧಿ ಅರ್ಜಿಯನ್ನು  ಪಿಎಂ-ಸ್ವನಿಧಿ ವೆಬ್ ಸೈಟ್  www.pmsvanidhi.mohua.gov.in ಮೂಲಕ ಆನ್ ಲೈನ್ ನಲ್ಲಿ ಅರ್ಜಿಸಲ್ಲಿಸಬೇಕು. . ಸಾಲ ಪಡೆಯಲು “Apply for loan” ಆಯ್ಕೆಯನ್ನು ಕ್ಲಿಕ್‌ ಮಾಡಬೇಕು. ಈ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಕೆಗೆ ಬೇಕಾದ ಹೆಚ್ಚಿನ ವಿವರಗಳೂ ಲಭ್ಯವಿದೆ.

ಸಾಲ ಸೌಲಭ್ಯ ಪಡೆಯಲು ಹೀಗೆ ಮಾಡಿ:

Pmsvanidhi.mohua.gov.in ವೆಬ್ ಸೈಟ್ಗೆ ಭೇಟಿ ನೀಡಬೇಕು. ಅಲ್ಲಿ Apply for loan ಆಯ್ಕೆ ಮಾಡಬೇಕು. ನಿಮ್ಮ ಮೊಬೈಲ್ ನಂಬರ್ ನಮೂದಿಸಿ ಒಟಿಪಿ ವಿವರ ಗಮನಿಸಿ. ಬಳಿಕ ತೆರೆದುಕೊಳ್ಳುವ ಅರ್ಜಿಯಲ್ಲಿ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ತುಂಬಬೇಕು.