News

ಕೃಷಿ ಪ್ರಶಸ್ತಿ-ಕೃಷಿ ಪಂಡಿತ ಪ್ರಶಸ್ತಿಗಳಿಗಾಗಿ ಅರ್ಜಿ ಆಹ್ವಾನ-ಸೆ. 7 ಕೊನೆಯ ದಿನ

03 September, 2020 5:51 PM IST By:

2020-21ನೇ ಸಾಲಿನಲ್ಲಿ ಕೃಷಿ ಪ್ರಶಸ್ತಿ ಹಾಗೂ ಕೃಷಿ ಪಂಡಿತ ಪ್ರಶಸ್ತಿಗಾಗಿ ಕಲಬುರಗಿ ತಾಲೂಕಿನ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಕೃಷಿ ಸಹಾಯಕ ನಿರ್ದೇಶಕರು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಳೆ ಸ್ಪರ್ಧೆಗೆ ಆಯ್ಕೆಯಾದ ಬೆಳೆಗಳ ವಿವರ ಇಂತಿದೆ. ರಾಜ್ಯ ಮಟ್ಟದ ಸ್ಪರ್ಧೆಗಾಗಿ ಹಿಂಗಾರು ಜೋಳ (ಮಳೆಯಾಶ್ರಿತ), ಮುಂಗಾರು ತೊಗರಿ (ಮಳೆಯಾಶ್ರಿತ), ಹಿಂಗಾರು ಕಡಲೆ (ಮಳೆಯಾಶ್ರಿತ), ಮುಂಗಾರು ಸೊಯಾ ಅವರೆ (ಮಳೆಯಾಶ್ರಿತ), ಮುಂಗಾರು ಮುಸುಕಿನ ಜೋಳ (ಮಳೆಯಾಶ್ರಿತ), ಮುಂಗಾರು ನವಣೆ (ಮಳೆಯಾಶ್ರಿತ) ಮತ್ತು ಮುಂಗಾರು ಸಜ್ಜೆ (ಮಳೆಯಾಶ್ರಿತ) ಬೆಳೆಗಳನ್ನು ಆಯ್ಕೆ ಮಾಡಲಾಗಿದೆ. ಅದೇ ರೀತಿ  ಜಿಲ್ಲಾ ಮಟ್ಟದ ಸ್ಪರ್ಧೆಗಾಗಿ ಮುಂಗಾರು ತೊಗರಿ (ಮಳೆಯಾಶ್ರಿತ) ಬೆಳೆಯನ್ನು  ಹಾಗೂ ತಾಲೂಕು  ಮಟ್ಟದ ಸ್ಪರ್ಧೆಗಾಗಿ ಹಿಂಗಾರು ಜೋಳ (ಮಳೆಯಾಶ್ರಿತ) ಬೆಳೆಗಳನ್ನು ಆಯ್ಕೆ ಮಾಡಲಾಗಿದೆ.

ರೈತರು ಕೃಷಿ ಪಂಡಿತರ ಪ್ರಶಸ್ತಿಗಾಗಿ ಅರ್ಜಿ ಪಡೆಯಲು 2020ರ ಸೆಪ್ಟೆಂಬರ್ 7ರಂದು ಕೊನೆಯ ದಿನವಾಗಿದೆ. ಕೃಷಿ ಪ್ರಶಸ್ತಿಗಾಗಿ ರೈತರು ರೈತ ಸಂಪರ್ಕ ಕೇಂದ್ರಗಳಲ್ಲಿ ಸೆಪ್ಟೆಂಬರ್ 15ರೊಳಗಾಗಿ ಅರ್ಜಿಗಳನ್ನು ಸಲ್ಲಿಸಬೇಕೆಂದು ಅವರು ತಿಳಿಸಿದ್ದಾರೆ.