ಕೊಪ್ಪಳ ತೋಟಗಾರಿಕೆ ಇಲಾಖೆ ವತಿಯಿಂದ 2020-21ನೇ ಸಾಲಿನಲ್ಲಿ ಕೇಂದ್ರ ಸರಕಾರದ ಯೋಜನೆಯಾದ ಪಿ.ಎಂ.ಎಫ್.ಎಂ.ಇ-ಓ.ಡಿ.ಓ.ಪಿ ರಡಿ ``ಸೀಬೆ ಬೆಳೆಯಲ್ಲಿ ಮೌಲ್ಯವರ್ಧನೆ ಹಾಗೂ ಸಂಸ್ಕರಣಾ ಘಟಕ'' ನಿರ್ಮಿಸಲು ಅರ್ಜಿ ಆಹ್ವಾನಿಸಲಾಗಿದೆ.
ಆತ್ಮ ನಿರ್ಭರ ಭಾರತ ಅಭಿಯಾನದ ಭಾಗವಾಗಿ ಕೇಂದ್ರ ಸರಕಾರ ಆಹಾರ ಸಂಸ್ಕರಣೆ ಉದ್ದಿಮೆಗಳ ಮಂತ್ರಾಲಯವು ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣೆ ಉದ್ದಿಮೆಗಳ ನಿಯಮಬದ್ದಗೊಳಿಸುವಿಕೆ ಯೋಜನೆ ಅನ್ನು ಹೊಸದಾಗಿ ಪ್ರಾರಂಭಿಸಲಾಗಿದ್ದು, ಅರ್ಜಿ ಆಹ್ವಾನಿಸಲಾಗಿದೆ.
ಈ ಯೋಜನೆಯನ್ನು ಒಂದು ಜಿಲ್ಲೆ ಒಂದು ಬೆಳೆ ಮಾದರಿಯಲ್ಲಿ ಅನುಷ್ಠಾನಗೊಳಿಸಲಾಗುತ್ತದೆ. ಇದರಲ್ಲಿ ಯೋಜನಾ ವೆಚ್ಚದ ಶೇ 35 ರಷ್ಟು ಹಾಗೂ ಗರಿಷ್ಟ ರೂ. 10.00 ಲಕ್ಷದ ವರಗೆ ಸಹಾಯ ಧನ ನೀಡಲಾಗುವುದು. ಈ ಯೋಜನೆಯ ಅಡಿ ಕೊಪ್ಪಳ ಜಿಲ್ಲೆಯಲ್ಲಿ ಸೀಬೆ (ಪೇರಲ) ಬೆಳೆ ಆಯ್ಕೆಮಾಡಿದ್ದು, ಆಸಕ್ತ ರೈತರು ಹಾಗೂ ಉದ್ದಿಮೆದಾರರು ಸೀಬೆ ಬೆಳೆಯಲ್ಲಿ ಮೌಲ್ಯವರ್ಧನೆ ಹಾಗೂ ಸಂಸ್ಕರಣಾ ಘಟಕ ನಿರ್ಮಿಸಲು ಅರ್ಜಿ ಸಲ್ಲಿಸಬಹುದು. ಅರ್ಜಿಯನ್ನು ತೋಟಗಾರಿಕೆ ಇಲಾಖೆ ಹಾಗೂ ಕೃಷಿ ಇಲಾಖೆಯಲ್ಲಿ ಸಲ್ಲಿಸಬಹುದು ಹಾಗೂ ವೆಬ್‍ಸೈಟ್ moಜಿಠಿ.ಟಿಛಿ.ಟಿ ನಲ್ಲಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಜಂಟಿ ಕೃಷಿ ನಿರ್ದೇಶಕರು, ಕೃಷಿ ಇಲಾಖೆ, ಕೊಪ್ಪಳ. ಮೊ. 8277932100, ತೋಟಗಾರಿಕೆ ಉಪ ನಿರ್ದೇಶಕರು (ಜಿ.ಪಂ.) ಕೊಪ್ಪಳ ಮೊ. 9448999237, ಸಹಾಯಕ ತೋಟಗಾರಿಕೆ ನಿರ್ದೇಶಕರು (ತಾಸ) (ಜಿ.ಪಂ.) ಕೊಪ್ಪಳ ಮೊ. 9972634118, ಸಹಾಯಕ ತೋಟಗಾರಿಕೆ ಅಧಿಕಾರಿ (ತಾಸ) (ಜಿ.ಪಂ.) ಕೊಪ್ಪಳ ಮೊ. 8151943554, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ.) ಕೊಪ್ಪಳ/ಯಲಬುರ್ಗಾ/ಗಂಗಾವತಿ ಹಾಗೂ ಕುಷ್ಟಗಿಯನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕಾ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.