News

ಭರ್ಜರಿ ಸಹಾಯಧನಕ್ಕೆ ಅರ್ಜಿ ಆಹ್ವಾನ: 1 ಲಕ್ಷ ನೇರ ಸಾಲ, ದ್ವಿಚಕ್ರ ವಾಹನಕ್ಕೆ 50,000, ಸರಕು ಸಾಗಣೆ ವಾಹನಕ್ಕೆ 3.50 ಲಕ್ಷ..

18 July, 2022 3:45 PM IST By: Kalmesh T
Application Invited for Government facilities

ಸಾರ್ವಜನಿಕರ ಸರ್ವತೋಮುಖ ಅಭಿವೃದ್ಧಿಗಾಗಿ ಅನೇಕ ಜನಕಲ್ಯಾಣ ಯೋಜನೆಗಳನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಈ ಸೌಲಭ್ಯಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಹರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ.

ಇದನ್ನೂ ಓದಿರಿ: PM SVANidhi Scheme: ಬಡವರಿಗೆ ವ್ಯಾಪಾರ ಮಾಡಲು ಸರ್ಕಾರವೇ ನೀಡಲಿದೆ ಸಾಲ ಮತ್ತು ಸಬ್ಸಿಡಿ! ಅರ್ಜಿ ಸಲ್ಲಿಕೆ ಹೇಗೆ ಗೊತ್ತೆ?

ಸ್ವಯಂ ಉದ್ಯೋಗ ಯೋಜನೆಗಳು

ಅರ್ಹ ನಿರುದ್ಯೋಗಿ ಅಭ್ಯರ್ಥಿಗಳಿಂದ ಸ್ವಯಂ ಉದ್ಯೋಗ ಯೋಜನೆಯಡಿಯಲ್ಲಿ ವಿವಿಧ ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು:

1). ನೇರ ಸಾಲ, ಸಣ್ಣ ಆದಾಯಗಳಿಸುವ ಆರ್ಥಿಕ ಚಟುವಟಿಕೆಗಳಿಗಾಗಿ ಘಟಕ ವೆಚ್ಚ ಗರಿಷ್ಟ ರೂ. 1.00 ಲಕ್ಷಗಳು. ಇದರಲ್ಲಿ 50% ಸಾಲ ಮತ್ತು 50% ಸಹಾಯಧನ.

ಉಮಶೀಲತಾ ಅಭಿವೃದ್ಧಿ ಯೋಜನೆ:

1) ಇವಿ ಮತ್ತು ಇತರ ದ್ವಿಚಕ್ರ ವಾಹನ ಖರೀದಿ (ಇ-ಕಾಮರ್ಸ್‌ನಡಿಯಲ್ಲಿ ಕಂಪನಿಗಳಿಂದ ಗ್ರಾಹಕರಿಗೆ ಸರಕು ತಲುಪಿಸಲು): ಗರಿಷ್ಠ ರೂ. 50,000/- ಸಹಾಯಧನ, ಉಳಿದ ಮೊತ್ತ ಬ್ಯಾಂಕ್ ಸಾಲ,

2) ಐ.ಎಸ್.ಬಿ ಚಟುವಟಿಕೆಗಳಿಗಾಗಿ ಸಹಾಯಧನ: ಗರಿಷ್ಠ ರೂ. 2.00 ಲಕ್ಷ, ಉಳಿದ ಮೊತ್ತ ಬ್ಯಾಂಕ್‌ನಿಂದ ಸಾಲ,

3) ಸರಕು ಸಾಗಾಣಿಕೆ ವಾಹನ: ಗರಿಷ್ಠ ರೂ. 3.50 ಲಕ್ಷ ಸಹಾಯಧನ, ಉಳಿದ ಮೊತ್ತ ಬ್ಯಾಂಕ್ ಸಾಲ

ರೈತರೆಲ್ಲ ಓದಲೇಬೇಕಾದ ಸುದ್ದಿ: SBI ಸಮೀಕ್ಷೆ ಪ್ರಕಾರ 2022-23ನೇ ಹಣಕಾಸು ವರ್ಷದಲ್ಲಿ ರೈತರ ಆದಾಯ ದುಪ್ಪಟ್ಟು!

ಮೈಕ್ರೋ ಕ್ರೆಡಿಟ್‌ ಯೋಜನೆ:

ಮಹಿಳೆಯರಲ್ಲಿ ಗುಂಪು ಚಟುವಟಿಕೆಗೆ ಉತ್ತೇಜನ ನೀಡಿ ಆದಾಯ ಗಳಿಸಲು ಅನುವಾಗುವಂತೆ ಕನಿಷ್ಠ 10 ಸದಸ್ಯರಿರುವ ಮಹಿಳಾ ಸ್ವ-ಸಹಾಯ ಸಂಘಗಳಿಗೆ ಗರಿಷ್ಠ ರೂ. 2.50 ಲಕ್ಷಗಳನ್ನು ಮಂಜೂರು ಮಾಡಲಾಗುವುದು. ಇದರಲ್ಲಿ ರೂ. 150 ಲಕ್ಷ ಸಹಾಯ ಧನ ಮತ್ತು ರೂ. 1.00 ಲಕ್ಷ ಸಾಲ

ಭೂ ಒಡೆತನ ಯೋಜನೆ:

ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಕನಿಷ್ಠ 0.20 ಎಕರೆ ಮೇಲ್ಪಟ್ಟು ಘಟಕ ವೆಚ್ಚದಲ್ಲಿ ಗರಿಷ್ಟ ಎಷ್ಟು ವಿಸ್ತೀರ್ಣ ಬರುತ್ತದೆಯೋ ಅಷ್ಟು ಜಮೀನನ್ನು ಖರೀದಿಸಿ ಕೊಡಲಾಗುವುದು.

ಗಂಗಾ ಕಲ್ಯಾಣ ಯೋಜನೆ:

ಸಣ್ಣ ಮತ್ತು ಅತಿ ಸಣ್ಣ ರೈತರು ಹೊಂದಿರುವ ಖುಷ್ಕಿ/ ಒಣ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಿ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು.

ಆಯಾ ನಿಗಮದ ವ್ಯಾಪ್ತಿಯಲ್ಲಿ ಬರುವ ಸಮುದಾಯಗಳು ಅರ್ಜಿ ಸಲ್ಲಿಸಬೇಕಾದ ವೆಬ್‌ ಸೈಟ್ ವಿಳಾಸ: https://suvidha.karnataka.gov.in

ಹೆಚ್ಚಿನ ಮಾಹಿತಿಗಾಗಿ ನಿಗಮದ ಜಿಲ್ಲಾ ವ್ಯವಸ್ಥಾಪಕರುಗಳ ಕಛೇರಿ ಅಥವಾ ನಿಗಮಗಳ ವೆಬ್‌ಸೈಟ್‌ ಅಥವಾ ಕಲ್ಯಾಣ ಮಿತ್ರ ಏಕಿಕೃತ ಎಸ್‌.ಸಿ/ಎಸ್‌.ಟಿ ಸಹಾಯವಾಣಿ 94823 00400 ಸಂಪರ್ಕಿಸಬಹುದು.

ಗುಡ್‌ನ್ಯೂಸ್‌: ರೈತರ ಬೆಳೆಹಾನಿಗೆ ಹೆಚ್ಚುವರಿ ದರ ನೀಡಲು ಬೊಮ್ಮಾಯಿ ಸರ್ಕಾರ ನಿರ್ಧಾರ! ಎಷ್ಟು ಗೊತ್ತೆ?

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20-08-2022

ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ http://adel.karnataka.gov.in ( ನಿಗಮದ ವ್ಯಾಪ್ತಿಯಲ್ಲಿ ಬರುವ ಸಮುದಾಯಗಳು ಮತ್ತು ಅಲೆಮಾರಿ / ಅರಣ್ಯ ಆಧಾರಿತ ಸಮುದಾಯಗಳು ಅರ್ಜಿ ಸಲ್ಲಿಸುವುದು

ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ https://banjarathanda.kar.nic.in

ಕರ್ನಾಟಕ ಮಹಿರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ https://kmvstdcl.karnataka.gov.in

 (ನಿಗಮದ ವ್ಯಾಪ್ತಿಯಲ್ಲಿ ಬರುವ ಸಮುದಾಯಗಳು ಮತ್ತು ಅಲೆಮಾರಿ/ಅರಣ್ಯ ಆಧಾರಿತ ಸಮುದಾಯಗಳು ಅರ್ಜಿ ಸಲ್ಲಿಸಬಹುದು

ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ  https://kbdc.karnataka.gov.in

ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ https://ksskdc.kar.nic.in

ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗದು https://adijambava.karnataka.gov.in