News

ಕುರಿ ಸಾಕಾಣಿಕೆಗೆ ಮಾಡುವ ರೈತರಿಗೆ ಸಂತಸದ ಸುದ್ದಿ- ಉಚಿತ ತರಬೇತಿ ನೀಡಲು ರೈತರಿಂದ ಅರ್ಜಿ ಆಹ್ವಾನ

06 February, 2021 7:36 PM IST By:
goat farming

ಕುರಿ, ಆಡು ಸಾಕಾಣಿಕೆ ಮಾಡುವ ರೈತರಿಗೆ ಸಂತಸದ ಸುದ್ದಿ. ಕುರಿ ಸಾಕಾಣಿಕೆಯೊಂದಿಗೆ ಕೋಳಿ ಸಾಕಾಣಿಕೆ ಹಾಗೂ ಹೈನುಗಾರಿಕೆಗೂ ಉಚಿತ ತರಬೇತಿ ನೀಡಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಬಾಗಲಕೋಟೆ ಜಿಲ್ಲೆಯ ಕೃಷಿಕರ ಸಂಪನ್ಮೂಲ ಕೇಂದ್ರದ ವತಿಯಿಂದ  ಫೆಬ್ರುವರಿ ಮತ್ತು ಮಾರ್ಚ್ ತಿಂಗಳಲ್ಲಿ ಕುರಿ, ಮೇಕೆ, ಕೋಳಿ ಸಾಕಾಣಿಕೆ ಹಾಗೂ ಹೈನುಗಾರಿಕೆಗೆ ಉಚಿತ ತರಬೇತಿ ನೀಡಲಾಗುವುದು. ತರಬೇತಿ ಬಾಗಲಕೋಟೆಯ ಗದ್ದನಕೇರಿ ರೋಡ್, ಬಿವಿವಿ ಸಂಘದ ಸ್ಪಿನ್ನಿಂಗ್ ಮಿಲ್ ಆವರಣದಲ್ಲಿರುವ ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರದಲ್ಲಿ ನಡೆಯಲಿದೆ.

18 ರಿಂದ 55 ವರ್ಷದೊಳಗಿನ ರೈತರು, ಸ್ವಸಹಾಯ ಸಂಘದ ಸದಸ್ಯರು, ಯುವಕರು, ಮಹಿಳೆಯರು ತಮ್ಮ ಈ ಉಚಿತ ತರಬೇತಿ ಶಿಬಿರದ ಲಾಭ ಪಡೆದುಕೊಳ್ಳಬಹುದು.  ಆಸಕ್ತ ರೈತರು ಕೂಡಲೈ ಮೊಬೈಲ್ ಸಂಖ್ಯೆ: 9482630790ಗೆ ಕರೆ ಮಾಡಿ ತಮ್ಮ ಹೆಸರು ನೋಂದಾಯಿಸಿ ಉಚಿತ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು ಲಾಭ ಪಡೆದುಕೊಳ್ಳಿ.