News

ಹೈನುಗಾರಿಕೆ, ಕುರಿಸಾಕಾಣಿಕೆಗೆ ಅರ್ಜಿ ಆಹ್ವಾನ

16 September, 2020 7:33 AM IST By:

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಿಂದ, ಕೊಪ್ಪಳ ಜಿಲ್ಲೆಯ ಗ್ರಾಮೀಣ ಭಾಗದ ಆಸಕ್ತರಿಗೆ ಹತ್ತು ದಿನಗಳ ಉಚಿತ ಕುರಿ ಸಾಕಾಣಿಕೆ ಹಾಗೂ ಹೈನುಗಾರಿಕೆ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸುವವರು ಜಿಲ್ಲೆಯ ಗ್ರಾಮೀಣ ಭಾಗದವರಾಗಿದ್ದು, 18 ವರ್ಷ ಮೇಲ್ಪಟ್ಟು 45 ವರ್ಷ ಒಳಗಿನವರಾಗಿರಬೇಕು. ಕನಿಷ್ಠ ಎಂಟನೇ ತರಗತಿ ಉತ್ತೀರ್ಣರಾಗಿರಬೇಕು. ಸ್ವಯಂ ಉದ್ಯೋಗದಲ್ಲಿ ಆಸಕ್ತಿ ಹೊಂದಿರಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಊಟ ಮತ್ತು ವಸತಿ ಉಚಿತವಾಗಿ ನೀಡಲಾಗುವುದು.

ಅರ್ಜಿ ಸ್ವೀಕರಿಸಲು ಸೆ.19 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂ-08539-231038 ಮೊ- 94489 60002 ಗೆ ಸಂಪರ್ಕಿಸಬಹುದು.

 

ಹೈನುಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ

ಕೆನರಾ ಬ್ಯಾಂಕ್ ಎ.ಡಿ.ಪೈ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ರಾಮನಗರ ಜಿಲ್ಲೆಯ ನಿರುದ್ಯೋಗಿ ಯುವತಿಯರಿಗಾಗಿ 10 ದಿನಗಳ ಉಚಿತ ಹೈನುಗಾರಿಕೆ ತರಬೇತಿ ಆಯೋಜಿಸಲಾಗಿದೆ.

ಆಸಕ್ತಿಯುಳ್ಳವರು ಕನಿಷ್ಠ 7 ನೇ ತರಗತಿವರೆಗೆ ವಿದ್ಯಾಭ್ಯಾಸ ಪಡೆದಿರಬೇಕು. 18ರಿಂದ 45ವಯೋಮಾನದವರಿರಬೇಕು. ತರಬೇತಿ ಅವಧಿಯಲ್ಲಿ ಉಚಿತ ಊಟ ಹಾಗೂ ವಸತಿ ಸೌಲಭ್ಯ ಇರಲಿದೆ. ತರಬೇತಿ ಮುಖ್ಯ ಉದ್ದೇಶ ಯುವತಿಯರು ಸ್ವ-ಉದ್ಯೋಗದ ಮೂಲಕ ಆರ್ಥಿಕ ಸಬಲತೆ ಸಾಧಿಸುವುದಾಗಿರುತ್ತದೆ. ಆಸಕ್ತರು ಇತ್ತೀಚಿನ 3 ಭಾವಚಿತ್ರ, ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪಾನ್ ಕಾರ್ಡ್, ಹಾಗೂ ಅಂಕಪಟ್ಟಿ ನಕಲುನೊಂದಿಗೆ ಅರ್ಜಿ ಸಬಹುದಾಗಿದೆ.  

ಹೆಚ್ಚಿನ ಮಾಹಿತಿಗಾಗಿ ಕೆನರಾ ಬ್ಯಾಂಕ್ ಎ.ಡಿ.ಪೈ ಅಭಿವೃದ್ಧಿ ಸಂಸ್ಥೆ ಬೆಂಗಳೂರು –ಮೈಸೂರು ಹೆದ್ದಾರಿ  ವಾಜರಹಳ್ಳಿ, ಬಿಡದಿ ಹೋಬಳಿ, ರಾಮನಗರ ಜಿಲ್ಲೆ-562159

ತರಬೇತಿ ಸಂಯೋಜಕರು: 9591752123, 9686269653