ಧಾರವಾಡ : ತಾಳೆ-ಬೆಳೆ ಬೆಳೆಯಲು ಆಸಕ್ತ ರೈತ ಭಾಂದವರಿಂದ ತೋಟಗಾರಿಕೆ ಇಲಾಖೆ ವತಿಯಿಂದ 2023-24 ನೇ ಸಾಲಿನ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ ತಾಳೆ-ಬೆಳೆ ಯೋಜನೆಯಡಿ ತಾಳೆ ಬೆಳೆ ಪ್ರದೇಶ ವಿಸ್ತರಣೆ ಮತ್ತು ವಿವಿಧ ಘಟಕಗಳಿಗೆ ಸಹಾಯ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ತಾಳೆ-ಬೆಳೆ ಬೆಳೆಯಲು ರೈತರಿಗೆ ಶೇಕಡ 100 ರಷ್ಟು ತಾಳೆ ಸಸಿಗಳಿಗೆ ಸಹಾಯಧನ, ಮೊದಲನೇ ವರ್ಷದಿಂದ ನಾಲ್ಕನೇ ವರ್ಷದವರೆಗೆ ಬೆಳೆ ನಿರ್ವಹಣೆಗೆ ಮತ್ತು ಅಂತರ ಬೇಸಾಯಕ್ಕೆ ಶೇ. 50 ರಂತೆ ಸಹಾಯಧನ ನೀಡಲಾಗುವುದು.
ಡೀಸಲ್ ಪಂಪಸೆಟ್, ಹನಿ ನೀರಾವರಿ, ಕೊಳವೆ ಬಾವಿ, ನೀರು ಸಂಗ್ರಹಣಾ ಘಟಕ (ಕೃಷಿ ಹೊಂಡ), ಎರೆಹುಳು ಗೊಬ್ಬರ ಘಟಕ, ಮೋಟರೈಜ್ಡ್ ಚೀಸಲ್, ತಾಳೆ ಹಣ್ಣು ಕಟಾವು ಏಣಿ, ಚಾಪ್ ಕಟ್ಟರ್,
ಎತ್ತರವಾದ ಮರಗಳಿಂದ ಹಣ್ಣು ಕಟಾವು ಮಾಡುವ ಉಪಕರಣಗಳಿಗೆ ಸಹಾಯಧನದ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಎಲ್ಲಾ ವರ್ಗದ ರೈತರು ಯೋಜನೆಯ ಸದುಪಯೋಗ ಪಡೆದುಕೊಳ್ಳಲು ತಿಳಿಸಿದೆ.
ಸರ್ಕಾರದಿಂದ ಅನುಮೋದಿತ 3F Oil Palm Pvt. Ltd. ಕಂಪನಿಯು ತಾಳೆ-ಬೆಳೆ ಬೆಳೆಯುವ ರೈತರ ಜಮೀನಿಗೆ ಕಾಲಕಾಲಕ್ಕೆ ಭೇಟಿ ನೀಡಿ ಬೆಳೆ ನಿರ್ವಹಣೆ ಕುರಿತು ತಾಂತ್ರಿಕ ಮಾಹಿತಿ ಮತ್ತು ಹಣ್ಣು ಕಟಾವು ಮಾಡುವ ಕುರಿತು ಮಾಹಿತಿ ನೀಡುವರು.
ಸರ್ಕಾರದಿಂದ ಅನುಮೋದಿತ 3F Oil Palm Pvt. Ltd.ಕಂಪನಿಯವರೇ ತಾಳೆ-ಬೆಳೆ ಹಣ್ಣನ್ನು ಖರೀದಿಸುವುದರಿಂದ ಮಾರುಕಟ್ಟೆಯ ಬಗ್ಗೆ ರೈತರಲ್ಲಿ ಯಾವುದೇ ಗೊಂದಲದ ಪ್ರಶ್ನೆಯೇ ಇರುವುದಿಲ್ಲ.
ಆಸಕ್ತ ರೈತರು ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಮತ್ತು ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿರವರನ್ನು ಸಂಪರ್ಕಿಸಲು ಕೋರಿದೆ.
ಸರ್ಕಾರದಿಂದ ಅನುಮೋದಿತ 3F Oil Palm Pvt. Ltd. ಕಂಪನಿಯ ಪ್ರತಿನಿಧಿಯವರನ್ನು ಮೃತ್ಯುಂಜಯ ಪಾಟೀಲ ಅವರ ದೂ. 9481293028 ಸಂಪರ್ಕಿಸಬಹುದು ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.