News

BELನಲ್ಲಿ 549 ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

16 November, 2020 9:19 AM IST By:

ಕೊರೋನಾದಿಂದಾಗಿ ಉದ್ಯೋಗ ಕಳೆದುಕೊಂಡವರಿಗೆ ಹಾಗೂ ಹೊಸ ಉದ್ಯೋಗ ಬಯಸುವ ನಿರುದ್ಯೋಗಿಗಳಿಗೆ ಇಲ್ಲಿದೆ ಸಂತಸದ ಸುದ್ದಿ. ಭಾರತ್ ಎಲೆಕ್ಟ್ರಾನಿಕ್ ಲಿಮಿಟೆಡ್ (ಬಿಇಎಲ್)  ಖಾಲಿಯಿರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಭಾರತ್ ಎಲೆಕ್ಟ್ರಾನಿಕ್ ಲಿಮಿಟೆಡ್ (ಬಿಇಎಲ್) ಪ್ರಾಜೆಕ್ಟ್‌ ಇಂಜಿನಿಯರ್, ಟ್ರೇನಿ ಇಂಜಿನಿಯರ್, ಪ್ರಾಜೆಕ್ಟ್‌ ಆಫೀಸರ್ ಮತ್ತು ಟ್ರೇನಿ ಇಂಜಿನಿಯರ್ ಹುದ್ದೆಗಳ ಭರ್ತಿಮಾಡಿಕೊಳ್ಳಲಿದೆ. ಈ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವಿರ:

ಪ್ರಾಜೆಕ್ಟ್‌ ಇಂಜಿನಿಯರ್-I ಗೆ 118, ಪ್ರಾಜೆಕ್ಟ್‌ ಆಫೀಸರ್ (ಹೆಚ್‌ಆರ್)-Iಗೆ 5, ಟ್ರೇನಿ ಇಂಜಿನಿಯರ್-Iಗೆ 418, ಟ್ರೇನಿ ಆಫೀಸರ್ (ಫೈನಾನ್ಸ್‌)-Iಗೆ 8 ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಹತೆ:

ಪ್ರಾಜೆಕ್ಟ್‌ ಇಂಜಿನಿಯರ್'ಗೆ ಬಿಇ/ ಬಿ.ಟೆಕ್ / ಬಿಎಸ್ಸಿ ವಿದ್ಯಾರ್ಹತೆ ಹೊಂದಿರಬೇಕು. ಪ್ರಾಜೆಕ್ಟ್‌ ಆಫೀಸರ್ ಹುದ್ದೆಗೆ ಎಂಬಿಎ / ಎಂಎಸ್‌ಡಬ್ಲ್ಯೂ ಇನ್ ಹೆಚ್‌ಆರ್ / ಪಿಜಿ ಡಿಗ್ರಿ / ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರಬೇಕು. ಟ್ರೇನಿ ಇಂಜಿನಿಯರ್ ಹುದ್ದೆಗೆ ಬಿಇ / ಬಿ.ಟೆಕ್ / ಬಿಎಸ್ಸಿ / ಬಿಆರ್ಚ್‌ ಇಂಜಿನಿಯರ್ ವಿದ್ಯಾರ್ಹತೆ ಪಡೆದಿರಬೇಕು. ಟ್ರೇನಿ ಆಫೀಸರ್ ಹುದ್ದೆಗೆ ಎಂಬಿಎ ಫೈನಾನ್ಸ್‌ ಶೈಕ್ಷಣಿಕ ಅರ್ಹತೆ ಪಡೆದಿರಬೇಕು.

ವಯೋಮಿತಿ ಅರ್ಹತೆ:

ಪ್ರಾಜೆಕ್ಟ್‌ ಇಂಜಿನಿಯರ್ ಹುದ್ದೆಗಳಿಗೆ ಗರಿಷ್ಠ 25 ವರ್ಷ. ಟ್ರೇನಿ ಇಂಜಿನಿಯರ್ ಹುದ್ದೆಗಳಿಗೆ ಗರಿಷ್ಠ 28 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ವರ್ಗವಾರು ವಯೋಮಿತಿ ಸಡಿಲಿಕೆ ನಿಯಮ ಅನ್ವಯವಾಗಲಿದೆ.

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಭಾರತ್ ಎಲೆಕ್ಟ್ರಾನಿಕ್ ಲಿಮಿಟೆಡ್ ಅಧಿಕೃತ ವೆಬ್‌ಸೈಟ್‌ಗೆ https://bel-india.in/  ಭೇಟಿ ನೀಡಿ, ಆನ್‌ಲೈನ್‌ ಮೂಲಕ ಅರ್ಜಿಸಬೇಕು.

ವೇತನ: 35 ಸಾವಿರ ರೂಪಾಯಿಯಿಂದ 50 ಸಾವಿರ ರೂಪಾಯಿ ಆಯಾ ಹುದ್ದೆಗಳಿಗನುಗುಣವಾಗಿ ವೇತನ ಇರಲಿದೆ.

ಆನ್‌ಲೈನ್ ಅರ್ಜಿ ಸಲ್ಲಿಸಲು 25-11-2020 ಕೊನೆಯ ದಿನವಾಗಿದೆ.

ಅರ್ಜಿ ಶುಲ್ಕ:

ಟ್ರೇನಿ ಇಂಜಿನಿಯರ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ರೂ.200.
ಪ್ರಾಜೆಕ್ಟ್‌ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ರೂ.500.
ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.