News

ರೈತರಿಗೆ ಹನಿ ನೀರಾವರಿ ಅಳವಡಿಸಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

23 November, 2020 7:00 AM IST By:

2020-21ನೇ ಸಾಲಿನಲ್ಲಿ ಕೇಂದ್ರ ಪುರಸ್ಕೃತ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಸೂಕ್ಷ್ಮ ನೀರಾವರಿ ಕಾರ್ಯಕ್ರಮದಡಿಯಲ್ಲಿ ತೋಟಗಾರಿಕೆ ಬೆಳೆಗಳಿಗೆ ನೀರಿನ ಮಿತಬಳಕೆಗಾಗಿ ಹನಿ ನೀರಾವರಿ ಅಳವಡಿಸಲು ಕಲಬುರಗಿ ಜಿಲ್ಲೆಯ ಸಾಮಾನ್ಯ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಧನ ಸಹಾಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ರೈತರು ತೋಟಗಾರಿಕೆ ಧನ ಸಹಾಯ ಪಡೆದು ಬೆಳೆಗಳಿಗೆ ಹನಿ ನೀರಾವರಿ ವ್ಯವಸ್ಥೆ ಅಳವಡಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಹಾಗೂ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳಿಗೆ ಸಂಪರ್ಕಿಸಬಹುದು.

ಲೀಡ್ ಫಾರ್ ಕಿಸಾನ್ ಅಭಿಯಾನ

ವಿಜಯಪುರ ನಗರದ ದೇಶಪಾಂಡೆ ಫೌಂಡೇಶನ್‍ನ ಲೀಡರ್ಸ್ ಎಕ್ಸಲ್‍ರೇಟಿಂಗ್ ಡೆವಲೆಪಮೆಂಟ್ ಪ್ರೊಗ್ರಾಮ್ ನೇತೃತ್ವದಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಲೀಡ್ ಫಾರ್ ಕಿಸಾನ್-2020  ಅಭಿಯಾನವನ್ನು ಆಯೋಜಿಸಿದ್ದು, ಈ ಅಭಿಯಾನದಲ್ಲಿ ಕಾಲೇಜು ವಿದ್ಯಾರ್ಥಿಗಳು ಕೃಷಿ ಕ್ಷೇತ್ರದ ಸಮಸ್ಯೆಗಳ ಆಧಾರದ ಮೇಲೆ ಅನ್ವೇಷಣೆಯಾಧಾರಿತ ವಿನೂತನ ಯೋಜನೆ ತಯಾರಿಸುವ ಮೂಲಕ  ಕೃಷಿ ಕೇತ್ರದ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಆಸಕ್ತ 18 ರಿಂದ 26 ವಯೋಮಾನದ ಕಾಲೇಜು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಆಸಕ್ತರು ನ.28ರೊಳಗಾಗಿ ತಮ್ಮ ಯೋಜನೆಯ ಪೂರ್ಣ ಮಾಹಿತಿಯೊಂದಿಗೆ ಈ ಕೆಳಗಿನ ಸಂಪರ್ಕ ಸಂಖ್ಯೆಗೆ ಸಲ್ಲಿಸಬೇಕು. ಆಯ್ಕೆಯಾದ ಉತ್ತಮ ಯೋಜನೆಗಳಿಗೆ ಬೀಜ ಧನ (ಸೀಡ್ ಫಂಡಿಂಗ್) ಹಾಗೂ ಪರಿಣಿತರಿಂದ ಸೂಕ್ತ ಮಾರ್ಗದರ್ಶನ ನೀಡಲಾಗುವುದು. ಈ ಅಭಿಯಾನದಲ್ಲಿ ಭಾಗವಹಿಸಲು ಪ್ರಮೋದ ಹುಕ್ಕೇರಿ- ಮೊ. 9620140004, 9900035214ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.