News

ಲಾಟರಿ ಮೂಲಕ ಟಾರ್ಪಲಿನ್ ವಿತರಿಸಲು ರೈತರಿಂದ ಅರ್ಜಿ ಆಹ್ವಾನ

08 November, 2020 10:24 AM IST By:

ಈ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಕಾರ್ಯಕ್ರಮದ ಅಡಿಯಲ್ಲಿ ಟಾರ್ಪಲಿನ್‌ಗಳನ್ನು ಲಾಟರಿ ಮೂಲಕ ವಿತರಿಸಲು ಹಾವೇರಿ ಜಿಲ್ಲೆಯ ಹಾನಗಲ್ ಹೋಬಳಿಯ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ನ. 9 ರಿಂದ 13ರ ತನಕ ಆಯಾ ಹೋಬಳಿ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಂದ ಅರ್ಜಿ ಸ್ವೀಕರಿಸಲಾಗುತ್ತದೆ. ಸಾಮಾನ್ಯ ವರ್ಗದ ರೈತರು ಅರ್ಜಿ ಜೊತೆಗೆ ಜಮೀನಿನ ಉತಾರೆದೊಂದಿಗೆ ಆಧಾರ ಕಾರ್ಡ್‌ ಪ್ರತಿ ಸಲ್ಲಿಸಬೇಕು. ಪರಿಶಿಷ್ಟ ಜಾತಿ, ಪಂಗಡದ ರೈತರು ಜಮೀನು ಉತಾರೆ, ಜಾತಿ ಪ್ರಮಾಣ ಪತ್ರ, ಆಧಾರ ಕಾರ್ಡ್‌ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

ಮಳೆ, ಗಾಳಿ, ಧೂಳಿನಿಂದ ನಿಮ್ಮ ಬೆಳೆ, ದವಸ ಧಾನ್ಯಗಳನ್ನು ರಕ್ಷಿಸಿಕೊಳ್ಳಲು ಟಾರ್ಪಲಿನ್ ತುಂಬಾ ಅವಶ್ಯಕತೆಯಿರುತ್ತದೆ. ಸರ್ಕಾರದ ವತಿಯಿಂದ ಸಬ್ಸಿಡಿ ದರದಲ್ಲಿ ಸಿಗುತ್ತದೆ. ಲಾಟರಿ ಮೂಲಕ ಆಯ್ಕೆಯಿರುವುದರಿಂದ ಅರ್ಜಿ ಹಾಕಿ ಈ ಸೌಲಭ್ಯ ಪಡೆಯಬಹುದು. ಇದಕ್ಕಾಗಿ ಹೆಚ್ಚು ಕಚೇರಿಗೆ ಅಲೆದಾಡುವ ಅವಶ್ಯಕತೆಯೂ ಇಲ್ಲ. ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಿದರೆ ಸಾಕು. ಲಾಟರಿಯಲ್ಲಿ ತಮ್ಮ ಹೆಸರು ಬಂದರೆ ಟಾರ್ಪಲಿನ್ ಪಡೆದು ನಿಮ್ಮ ಬೆಳೆ, ದವಸಧಾನ್ಯಗಳನ್ನು ರಕ್ಷಿಸಲು ಅನುಕೂಲವಾಗುತ್ತದೆ.

ರಾಶಿ ಮಾಡುವ ಸಂದರ್ಭದಲ್ಲಿ ಟಾರ್ಪಲಿನ್ ತುಂಬಾ ಅವಶ್ಯಕತೆಯಿರುತ್ತದೆ. ನೆಲದ ಮೇಲೆ ನಿಮ್ಮ ಧಾನ್ಯ ಒಣಗಿಸುವುದರಿಂದ ಟಾರ್ಪಲಿನ್ ಬಳಸಲು ಅನುಕೂಲವಾಗುತ್ತದೆ. ನೆಲದ ಮೇಲೆ  ರಾಶಿ ಮಾಡುವುದರಿಂದ ಕಾಳಿನೊಳಗೆ ಧೂಳು, ಮಣ್ಣಿನ ಕಣಗಳು ಸೇರಿಕೊಳ್ಳುತ್ತದೆ. ಇದರಿಂದಾಗಿ ಕೆಲವು ಸಲ ಬೆಲೆಯೂ ಕಡಿಮೆಯಾಗುವ ಸಾಧ್ಯತೆಯಿರುತ್ತದೆ.